‘ಹೊಂಗಿರಣ’ದ ಹುಡುಗರು ಏನೋ ಮಾಡ್ತಾ ಇದ್ದಾರೆ…??!!

ಹೊಂಗಿರಣದ ಹುಡುಗರು ಏನೋ ಮಾಡ್ತಾ ಇದ್ದಾರೆ…??!!

ಅನ್ನೋ ನಮ್ಮ ಶಿವಮೊಗ್ಗ ರಂಗಮಿತ್ರರ, ಸಿನಿಮಾರಂಗದ, ಸಹಪಾಠಿಗಳ, ಸಹೋದ್ಯೋಗಿಗಳ, ನಮ್ಮೆಲ್ಲಾ ಸಹಚರರ ಈ ಯಕ್ಷ ಪ್ರಶ್ನೆಗೆ ಇಲ್ಲಿದೆ ಉತ್ತರ…

ಟಾಕೀಸಿಗೆ ಬರುವ, ಬರದೇ ಇರುವ, ಬಂದರೂ ಒಂಡೆರಡು ದಿನ ಇದ್ದು ಹೋಗುವ ಎಲ್ಲಾ ಸಿನಿಮಾಗಳನ್ನ ನೋಡಿದ್ದಾಯ್ತು. ಈಗ ಸಿನಿಮಾ ಮಾಡುವ ಸರದಿ. ಹೌದು ಕಿತ್ತೋಗಿರೋ ಸಿನಿಮಾಗಳನ್ನ ನೋಡಿ ಬೈದುಕೊಳ್ಳುವಾಗ ನಮ್ಮೊಳಗಿನ ಪಕ್ಕದ ಸೀಟಿನವ “ರೀ ಸ್ವಾಮಿ ಬರೀ comment ಮಾಡೋದಲ್ಲಾ ತಾಕತ್ತಿದ್ರೆ ಮಾಡಿ ತೋರಿಸಿ ನೋಡುವ” ಅಂದಿದ್ದರ ಪ್ರತಿಫಲವೇ ಈ ಸಿನಿಮಾ….

ನಮ್ಮ ರಂಗಭೂಮಿಯ ಅನುಭವ, ಹಿರಿ-ಗುರುಗಳ ಪ್ರಭಾವ, ಸಿನಿಮಾ ಸೆಳೆತ, ನಮ್ಮೆಲ್ಲರ ಶ್ರಮ ಇದೇ ಜೂನ್ 2 ರಂದು ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ “ವ್ಯಕ್ತ” ವಾಗುತ್ತಿದೆ.

ಕಳೆದ 7-8 ತಿಂಗಳ ಹಿಂದೆ ಶುರುವಾದ ಚರ್ಚೆ, ಮಾವಲಿ ಯ “ಕಥೆ”, ಡಾ.ಸಾಸ್ವೆಹಳ್ಳಿ ಸತೀಶ್ ಅವರ “ಚಿತ್ರಕಥೆ-ನಿರ್ದೇಶನ”, “ಸಂಭಾಷಣೆ”, ವಿಜಯ್ ಸಂಚಾರಿಯವರ “ನಟನೆ”, ರಕ್ಷಿತ್ “ನಿರ್ಮಾಣದ ಹೊಣೆ”ಗಾರಿಕೆ, ವಿಶ್ವಜಿತುವಿನ “ಕ್ಯಾಮೆರಾ”, ರಾಕಿಯವರ “ಸಂಗೀತ”, ನಮ್ಮೆಲ್ಲರ “ಶ್ರಮ”, ಇವೆಲ್ಲದರ ಉತ್ಕೃಷ್ಟ ಸ್ಥಿತಿಯೇ ಈ “ಅವ್ಯಕ್ತ”.

ನಮ್ಮೆಲ್ಲರ ಈ ಸಾಹಸದ ಹಿಂದಿನ ಹೆಸರು #ಹೊಂಗಿರಣ ಶಿವಮೊಗ್ಗ”

ಬನ್ನಿ ಇದೇ ಜೂನ್ 2 ರ ಸಂಜೆ 6.30 ಕ್ಕೆ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ “ಅವ್ಯಕ್ತ” ಕಿರುಚಿತ್ರ ಪ್ರದರ್ಶನ, ನೋಡಿ ನಮಗೊಂದು ಶಹಬ್ಬಾಸ್ ಗಿರಿ ಕೊಡಿ….

-ಸುರೇಂದ್ರ ಕೆ ಎನ್ ಎಸ್ 

Watch trailer here
https://youtu.be/b9TkxAL6FT8

Book your tickets here
https://in.bookmyshow.com/ev…/Avyaktha-Short-Film/ET00057580
Via BookMyShow

Leave a Reply