ವಂದಿಗೆಯ ವಿಜೆ ಇನ್ನಿಲ್ಲ

ರೇಣುಕಾ ರಮಾನಂದ

ನಮ್ಮಕುಟುಂಬದ ಅಂಕೋಲಾ ಸೀಮೆಯ ವಂದಿಗೆ ಗ್ರಾಮದ ಪ್ರಸಿದ್ಧ ಸ್ವಾತಂತ್ರ್ಯ ಯೋಧರ ಮನೆತನದಲ್ಲಿ ೧೯೩೧ ನವೆಂಬರ್ ೨೦ ರಂದು ಹುಟ್ಟಿದ ಶ್ರೀ ವಿ ಜೆ ನಾಯಕರ ಪೂಣ೯ ಹೆಸರು ವಿಠೋಬ ಜೋಗಿ ನಾಯಕ.

ಎಂ ಎ, ಬಿ ಎಡ್ ಪಧವೀಧರರಾಗಿದ್ದ ವಿ ಜೆ ನಾಯಕರು ಯಕ್ಷಗಾನ ಚಂಡೆ ಮದ್ದಳೆ ಬಯಲಾಟಗಳ ಸಂಸ್ಕೃತಿಯ ಗ್ರಾಮೀಣ ಪರಿಸರದಲ್ಲಿ ಬೆಳೆದುಬಂದು ಎಳೆತನದಿಂದಲೇ ಶ್ರೇಷ್ಠ ಯಕ್ಷಗಾನ ಕಲಾವಿದರಾಗಿ ಹೆಸರು ಮಾಡಿದವರಾಗಿದ್ದರು. ಹವ್ಯಾಸಿ ನಾಟಕ ರಂಗಭೂಮಿಗಳಲ್ಲಿ ಅಭಿನಯ. ನಿದೇ೯ಶನ, ನೃತ್ಯ ರೂಪಕಗಳ ಸಂಯೋಜನೆಗೆ ಹೆಸರಾಗಿದ್ದರು.

ಶಿಕ್ಷಣ ಪ್ರಸಾರ, ಸಮಾಜವಾದಿ ಚಿಂತನ, ಕನ್ನಡಪರ ಆಂದೋಲನದಲ್ಲಿ ಸದಾ ತೊಡಗಿಸಿಕೊಳ್ಳುತ್ತಿದ್ದ ವಿ ಜೆ ಸಂಘಟಕರಾಗಿ ಲೇಖಕರಾಗಿ ಕೂಡ ಪರಿಚಿತರಾಗಿದ್ದರು. ವೃತ್ತಿಯಲ್ಲಿ ಶಿಕ್ಷಕರಾಗಿದ್ದ ಶ್ರೀಯುತರಿಗೆ೧೯೯೬ ರಲ್ಲಿ ರಾಷ್ಟ್ರ ಶಿಕ್ಷಕ ಪ್ರಶಸ್ತಿ,೧೯೯೬ ರಲ್ಲಿ ಜಾನಪದ ಮತ್ತು ಯಕ್ಷಗಾನ ಅಕಾಡಮಿಯ ಪುಸ್ತಕ ಬಹುಮಾನ, ೧೯೯೮ರಲ್ಲಿ ಕನಾ೯ಟಕ ನಾಟಕ ಅಕಾಡಮಿ ಗೌರವ ಪ್ರಶಸ್ತಿ ಲಭಿಸಿತ್ತು.

ಅವರ ಪ್ರಕಟಿತ ಪುಸ್ತಕಗಳು

*ಯಕ್ಷಗಾನ ೧೯೯೬
*ಯಕ್ಷಗಾನ ಪ್ರಸಂಗ ಕಥೆಗಳು೨೦೦೫
*ದಿನಚರಿಯ ಸಾಲುಗಳ ನಡುವೆ ೨೦೦೬
*ಕಾಲ್ನಡಿಗೆಯ ಪಯಣ ೨೦೦೮
*ತೆರೆದ ಬಾಗಿಲು ೨೦೦೮
_________

ಇಂದು ಮಧ್ಯಾಹ್ನ ವಂದಿಗೆಯ ಅವರ ಮನೆಯಲ್ಲಿ ನಿಧನರಾದ ಶ್ರೀ ವಿ ಜೆ ನಾಯಕರ ಆತ್ಮಕ್ಕೆ ಚಿರಶಾಂತಿ ದೊರೆಯಲಿ.

Leave a Reply