ಇದು ರೇಡಿಯೋ ಲೈಸೆನ್ಸ್..

ಮಂಜುನಾಥ ನೆಟ್ಕಲ್ 

ನಮ್ಮ ಮನೆಯಲ್ಲಿ ಎಪ್ಪತ್ತರ ದಶಕದ ಕೊನೆಯಲ್ಲಿ ನಮ್ಮ ಅಪ್ಪ ಕೊಂಡ ಮೂರು ಬ್ಯಾಂಡ್ ರೇಡಿಯೋ ಇತ್ತು.

ಆ ರೇಡಿಯೋ ಗೆ ಪ್ರತಿ ವರ್ಷ ಹದಿನೈದು ರೂಪಾಯಿ ಲೈಸೆನ್ಸ್ ಶುಲ್ಕವನ್ನು ಅಂಚೆ ಕಚೇರಿಯಲ್ಲಿ ಕಟ್ಟಬೇಕಾಗಿತ್ತು.

ಹಳೆಯ ಕಾಗದ ಹುಡುಕುವಾಗ ಇದು ಸಿಕ್ಕಿತ್ತು. ಎರಡು ಮೂರು ವರ್ಷಗಳ ಹಿಂದೆ ಪೋಸ್ಟ್ ಮಾಡಿದ್ದನ್ನೇ ಈಗ ರೀಪೋಸ್ಟ್ ಮಾಡುತ್ತಿದ್ದೇನೆ.

ಹೊಸ ಜನಾಂಗದ ಬಹುತೇಕ ಮಕ್ಕಳಿಗೆ ಇದರ ಪರಿಚಯವಿರುವುದಿಲ್ಲ.

ರೇಡಿಯೋ ಆ ಕಾಲದಲ್ಲಿ ಲಕ್ಸುರಿ ವಸ್ತು. ರೇಡಿಯೋ ಮನೆಯಲ್ಲಿ ಇದ್ದವರಿಗೆ ಗೌರವ ಕೊಡುತ್ತಿದ್ದರು. ಮನೆಯ ಯಜಮಾನನೇ ಅದನ್ನು ಆಪರೇಟ್ ಮಾಡಬೇಕಿತ್ತು. ಮಕ್ಕಳಿಗೆ ಮುಟ್ಟಲು ಬಿಡುತ್ತಿರಲಿಲ್ಲ.

ನೂರರಿಂದ ಐನೂರು ಸಾವಿರದವರೆಗೆ ಬೆಲೆ ಬಾಳುವ ರೇಡಿಯೋ ಗಳಿಗೂ ಬಹಳ ಬೆಲೆ ಇತ್ತು. ಈಗ ಐವತ್ತು ಸಾವಿರ ಬೆಲೆ ಬಾಳುವ ಮೊಬೈಲ್ ಪೋನ್ ಗಳನ್ನು ಕಳೆದು ಕೊಂಡರೂ ಆರಾಮವಾಗಿ ಇರುವವರೂ ಸಹ ಇದ್ದಾರೆ.

ಇದು ರೇಡಿಯೋ ಲೈಸೆನ್ಸ್.

Leave a Reply