ಮುತ್ತನ್ನು ಎಲ್ಲಿಡಲಿ ಮೋಹನಾಂಗೀ..

 

 

ಆನಂದ್ ಋಗ್ವೇದಿ

 

 

 

 

 

ಮುತ್ತನ್ನು ಎಲ್ಲಿಡಲಿ ಓಮೋಹನಾಂಗಿ.

ಪ್ರಿಯೆ ಶಕುಂತಲೇ, ಹೊತ್ತು ತಂದಿದ್ದೇನೆ ಮುತ್ತ ಮೂಟೆ

ಕಾಡೇ ಗೂಡೇ ಉರುಳಿ ಹೋಗುವ ಮುನ್ನ ಹೇಳು

ಎಲ್ಲಿಡಲಿ ಈ ಮುತ್ತು?

ನೆತ್ತಿಯ ಮೇಲೆ ಕಡುಗಪ್ಪು ಕಾರ್ಮೋಡ ಅಲೆ ಅಲೆ ಮಧ್ಯೆ

ಬೈತಲೆ ನೀಳ ವೇಣಿ ಬಿಚ್ಚಿ ಹರಡಿದೆ ಬೆನ್ನ ಮೇಲೆ

ಕುಂಕುಮವಿಟ್ಟ ನೊಸಲೇ ಹೊಸಿಲು ಕಣ್ಣಂಗಳಕ್ಕೆ;

ಬಾಗಿದ ಹುಬ್ಬ ದಾಟಿದರೆ ರೆಪ್ಪೆ ನಡುವಿನ ಮಿಂಚುಗೋಲ!

ಹರಿಗೋಲ ಮೀಟಿ ದಡ ಹತ್ತಿದರೆ ನೀಳ ನಾಸಿಕ ಸುಳಿಮಿಂಚ

ಮೂಗುತಿ ಅರಳರಳಿ ಹೊಮ್ಮಿಸುವ ತಿದಿ ಎದೆಯುಸುರು!

ಹವಳದ ದಂಡೆ ಈ ತುಟಿ; ಅರೆ ಬಿರಿದ ಅರಳು ಒಳಗಡೆ ಒಸರುವ

ಜೇನ್ದೊರೆ ಕುಡಿಯಲ್ಲಿ ನಿಂತು ತುಳುಕಿದಂತೆ ನಗು!

ಕೊರಳ ಕೊರಕಲಿನಲ್ಲಿ ಜಾರಿ ಎದೆ ಕಣಿವೆಯಲಿ ಸಿಕ್ಕಿ ಬೆವರ
ಬೆದೆಯುಸಿರ ಆವೇಗಕ್ಕೆ ಹಾರಿ ಮುಗಿಲೊತ್ತಿದ

ಮಂದಾರ ಪರ್ವತದ ತುಟ್ಟ ತುದಿ ತೊಟ್ಟ ಮೀಟಿ ನೆಗೆದರೆ. .

ಪ್ರಸ್ಥಭೂಮಿ ಬಟ್ಟ ಬಯಲಿನ ನಡುವೆ ಪುಟ್ಟ ಕುಳಿ ಕೆಳಗೆ ಸುಳಿಯಿಲ್ಲದ ಸಪಾಟು

ಮುಂದೆ ತಿಟ್ಹತ್ತಿದ ಜಾಡು ಕಿರಿ ಹೊಟ್ಟೆಯಂತಹ ಉಬ್ಬಿನಿಂದ . .

ಮಬ್ಬು ಕಣಿವೆ  ಕಾಡು ಕುಲುಮೆಯ ಕಾವು ನಿಗಿನಿಗಿ ಉಗುವಂತೆ

ಅಗ್ನಿ ಪರ್ವತದ ಆಳದಲ್ಲೊಂದು ಗುಹೆ!

ಗಹ್ವರದ ಬಾಯಿಗೂ ಎರಡು ದಡ!

ಒಂದು ಹೊರ ಮುಖ ಮತ್ತೆ ಮೆತ್ತೆ ಒಳ ಮುಖ!

ಬಾಗಿಲ ಮೇಲೊಂದು ಪುಟ್ಟ ಗಂಟೆ ಮಿಡಿದು ಒಳ ಹೊಕ್ಕರೆ ಗರ್ಭ

ಗುಡಿಯ ಜಾರು ದಾರಿ ಒಳ ಕಂಬದ ನುಣುಪು ಮೊಣ ಕಾಲ ಗಂಟು ಕೆಳಗೆ

ಸಪೂರ ಮೀನ ಖಂಡ ಹರಹು ಪಾದದ ಪಡಿ ನೆಳಲು!

ಎಲ್ಲಿಟ್ಟರೂ ಜಾರಿ ಮುತ್ತು ಗುಹೆಯ ಹೊಗುವಾಗ:

ಹೊತ್ತು ಮೀರುವ ಮುನ್ನ

ಹೇಳು ಎಲ್ಲಿಡಲಿ ಮುತ್ತು!?

 

 

1 Response

  1. ಕೈದಾಳ್ ಕೃಷ್ಣಮೂರ್ತಿ says:

    ಯೌವನ ಮರಳಿ ಬಂದಂಗಿದೆ

Leave a Reply

%d bloggers like this: