ನೀ ಬಿಟ್ಟ ಹೋದ ಕ್ಷಣದಲಿ..

 

ಚಿದಂಬರ ನರೇಂದ್ರ

 

ವೀಣೆಯ ತಂತಿಯೊಂದು
ಅಚಾನಕ್ ಆಗಿ
ಝುಂ ಎಂದು ಹರಿದು ಹೋಗಿದೆ.

ರೇಷ್ಮೆಯ ಎಳೆಯೊಂದು
ಬೆರಳನ್ನು ಕೊಯ್ದು
ರಕ್ತ, ಛಲ್ ಎಂದು ಚಿಮ್ಮಿದೆ.

ನೋವೊಂದು ಎದೆಯಾಳದಲ್ಲಿ
ಕಿತ್ತಿ, ಸುಂಯ್ ಗುಡುತ್ತಿದೆ.
ಎಳೆದು ಎಳೆದು ಮುಚ್ಚಬೇಕು ರೆಪ್ಪೆಗಳನ್ನ
ನಿನ್ನಿಂದ ಕೀಳಲು.

ಝಲ್ ಎನ್ನುತ್ತದೆ ಎದೆ
ನೀನು ಬಿಟ್ಟು ಹೋಗುವ ಕ್ಷಣದಲ್ಲಿ.

ಸಮಯ
ಅಷ್ಟು ಕೆಟ್ಟದಾಗಿ
ನನ್ನೊಂದಿಗೆ ವರ್ತಿಸಿದ್ದು
ಅದೇ ಮೊದಲು, ಅದೇ ಕೊನೆ.

1 Response

 1. ಭಾರತಿ ಬಿ ವಿ says:

  ಸಮಯ
  ಅಷ್ಟು ಕೆಟ್ಟದಾಗಿ
  ನನ್ನೊಂದಿಗೆ ವರ್ತಿಸಿದ್ದು
  ಅದೇ ಮೊದಲು, ಅದೇ ಕೊನೆ ….
  ಅದೇ ಕೊನೆಯಾಗಿದ್ದರೆ ನೀವು ಪುಣ್ಯವಂತ 🙂
  ಚೆನ್ನಾಗಿದೆ ಕವಿತೆ

Leave a Reply

%d bloggers like this: