ಬನ್ನಿ ಸಾಧನಕೇರಿಗೆ..

ರಾಜಕುಮಾರ ಮಡಿವಾಳರ ಅವರು ಫೇಸ್ ಬುಕ್ ನಲ್ಲಿ ಬೇಂದ್ರೆಯವರ ಸಾಧನಕೇರಿ ಹೇಗಿದೆ ಎನ್ನುವುದಕ್ಕೆ ಉದಾಹರಣೆಯಾಗೋ ಒಂದು ಫೋಟೋ ಪೋಸ್ಟ್ ಮಾಡಿದ್ದರು.

ಸಾಧನಕೇರಿಯ ಈ ಬಸ್ ಸ್ಟಾಂಡ್ ಅದೇ ತನ್ನ ಕಥೆಯನ್ನು ಹೇಳಿಬಿಡುತ್ತದೆ

ಈ ಬಸ್ ನಿಲ್ದಾಣದಲ್ಲಿ ಏರುವವರಿಲ್ಲ ಬರೀ ಇಳಿಯುವವರೇ.. ಅದಕ್ಕೇ ಹಾಗೆ ಎಂದು ಸಾಕಷ್ಟು ಜನರ ಮನೋಭಾವ. ಆದರೇನಂತೆ ಒಂದು ಬಸ್ ನಿಲ್ದಾಣ, ಬೇಂದ್ರೆ ಹೆಸರು ಹೊತ್ತ ನಿಲ್ದಾಣ ಹೀಗಿರಬಾರದು ಅಲ್ಲವೇ

ಹಾಗಾಗಿಯೇ ಅವಧಿ ಈ ಅಭಿಯಾನಕ್ಕೆ ಕೈ ಜೋಡಿಸಿದೆ 

ಬನ್ನಿ ಸಾಧನಕೇರಿಗೆ 

ಇಲ್ಲಿದೆ ರಾಜಕುಮಾರ ಮಡಿವಾಳರ ಅವರ ಪೋಸ್ಟ್-

ಗೆಳೆಯರ ನಮ್ಮ ಬಳಗ ‘Dharwad bonds’ ಸದಸ್ಯರೆಲ್ಲ ಸೇರಿ ‘ಬಾರೋ ಸಾಧನಕೇರಿಗೆ’ ಬಸ್ ನಿಲ್ದಾಣ ಸ್ವಚ್ಛತಾ ಕಾರ್ಯಕ್ರಮ ಇದೇ ಭಾನುವಾರ ಬೆಳಗಿನ 10-00 ಕ್ಕೆ.

ನೀವೂ ಜೊತೆಯಾಗಿ.

9-30ಕ್ಕೆ ನಾನು ಅಲ್ಲಿದ್ದು ನಿಮ್ಮ ದಾರಿ ಕಾಯುವೆ. ನನ್ನ ವಿನಂತಿಗೆ ಸ್ಪಂದಿಸಿ ಬಹುದೊಡ್ಡ ಬೆಂಬಲ ನೀಡಿದ ಶ್ರೀ ಕಿರಣ ಹಿರೇಮಠ ಅವರಿಗೆ ಮತ್ತು ಎಲ್ಲ DB ಗೆಳೆಯರಿಗೆ ಧನ್ಯವಾದ

Leave a Reply