ಛಾಯಾ ಭಗವತಿ ಸಂಕಟ

ಛಾಯಾ ಭಗವತಿ ಹೊಸ ಕೃತಿ ಬಿಡುಗಡೆಗೆ ಸಂಭ್ರಮದಿಂದ ಸಜ್ಜಾಗಿದ್ದಾರೆ.

ಆದರೆ ಅವರಿಗೊಂದು ನೆನಪು ಬಿಡದೆ ಕಾಡುತ್ತಿದೆ. ಏನದು??

ಕೊನೆಯ ಕನವರಿಕೆ: ಕಳೆದ ಸಲ ನಾನು ಅನುವಾದಿಸಿದ್ದ ಥಾಮಸ್ ಹಾರ್ಡಿಯ ಕಾದಂಬರಿ ಜೂಡ್ ಕೃತಿಯ ಹಾಗೂ ಭಾಷಾ ಭಾರತಿ ಪ್ರಾಧಿಕಾರದ ಇತರ ಪುಸ್ತಕಗಳ ಬಿಡುಗಡೆ ಇದೆ ಅಂತ ಪೋಸ್ಟ್ ಹಾಕಿ, ಗೊತ್ತಿರುವ ಎಲ್ಲಾ ಪ್ರೀತಿಪಾತ್ರರನ್ನು ಕಾಕಾಕಾಕಾ ಎಂದು ಕರೆದು, ಮಾತಿಗೊಪ್ಪಿ ಬಂದಿದ್ದವರು ಗೆಳತಿ ಭಾರತಿ ಮತ್ತು ರಮಾ ಮಾತ್ರ.

ಅಲ್ಲಿ ನೋಡಿದರೆ ಬಿಡುಗಡೆಯಾಗಬೇಕಿದ್ದ ಪುಸ್ತಕಗಳ ಗುಂಪಿನಲ್ಲಿ ನನ್ನ ಅನುವಾದದ ಪುಸ್ತಕವೇ ಇರಲಿಲ್ಲ!

ಯಾ ನಮೂನಿ ಇರುಸುಮುರುಸು ಆಗಿತ್ತು ಅಂದರೆ ಸಧ್ಯ ನನ್ನನ್ನು ಚೆನ್ನಾಗಿ ಬಲ್ಲ ಭಾರತಿ ಮತ್ತು ರಮಾ ಇಬ್ಬರೇ ಇದ್ದರಾದ್ದರಿಂದ ಹೋಗಬೇಕಿದ್ದ ಮಾನ ಉಳಿದುಕೊಂಡಿತ್ತು. ಪುಸ್ತಕ ಇನ್ನೂ ಅಚ್ಚಿನ ಮನೆಯಲ್ಲಿಯೇ ಬೆಚ್ಚಗೆ ಮಲಗಿತ್ತು.

1 Response

  1. l c sumithra says:

    ಅವಧಿ ವರ್ಣಮಯವಾಗಿ ,ಹೊಸ ಹೂರಣ ದೊಡನೆ ಅರ್ಥಪೂರ್ಣವಾಗಿದೆ. ಅವಧಿ ಬಳಗಕ್ಕೆ ಶುಭಾಷಯಗಳು. ಡಾ ಎಲ್ ಸಿ ಸುಮಿತ್ರಾ

Leave a Reply

%d bloggers like this: