ಆಳ್ವಾಸ್‌ ನ ಆತ್ಮಹತ್ಯೆ ಉತ್ತರ ಇಲ್ಲಿದೆ..

 

 

 

 

 

ನಿತಿನ್ ಕುತ್ತಾರ್

ಆಳ್ವಾಸ್‌ ಶಿಕ್ಷಣ ಸಂಸ್ಥೆಯಲ್ಲಿ ಆತ್ಮಹತ್ಯೆಗೈದ ವಿದ್ಯಾರ್ಥಿಗಳೆಷ್ಟು?

ಉತ್ತರ ಇಲ್ಲಿದೆ..

ನಾನು ಕಳೆದ ವರ್ಷ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಆತ್ಮಹತ್ಯೆ ಪ್ರಕರಣ, ಅಸಹಜ ಸಾವುಗಳ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯ ಪ್ರಕಾರ ಮಾಹಿತಿ ಕೇಳಿದ್ದೆ ಆದರೆ ಈವರೆಗೆ ಮೂಡಬಿದ್ರೆ ಪೊಲೀಸ್ ಠಾಣೆಯಿಂದ ಉತ್ತರ ಬಂದಿರಲ್ಲಿಲ್ಲ, ಕಾವ್ಯ ಸಾವಿನ ನಂತರ ಒತ್ತಡ ಹಾಕಿದ ಬಳಿಕ ಮಾಹಿತಿ ದೊರಕಿದೆ.

ಈ ಮಾಹಿತಿ ಪ್ರಕಾರ ಆಳ್ವಾಸ್ ಕಾಲೇಜಿನಲ್ಲಿ 2008 ರಿಂದ ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆ 8, ಅಸಹಜ ಸಾವುಗಳ ಸಂಖ್ಯೆ 2 ಅಲ್ಲದೆ 6 ವಿದ್ಯಾರ್ಥಿನಿಯರು ಸಾವನ್ನಪ್ಪಿದ್ದಾರೆ (ಕಾವ್ಯ ಮತ್ತು 2016 ಅಕ್ಟೋಬರ್ ನಂತರ ಹೊರತು ಪಡಿಸಿ) ಈ ಪ್ರಕಾರ ಸರಾಸರಿ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಸರಾಸರಿ ಪ್ರತೀ ವರ್ಷ ಒಂದರಂತೆ ಆತ್ಮಹತ್ಯೆ ನಡೆಯುತ್ತಿದೆ.

ಒಂದು ಶಿಕ್ಷಣ ಸಂಸ್ಥೆಯಲ್ಲಿ ಪ್ರತೀ ವರ್ಷ ಒಂದು ಆತ್ಮಹತ್ಯೆ ನಡೆಯುತ್ತೆ ಅಂದರೆ ಇದಕ್ಕಿಂತ ದೊಡ್ಡ ದುರಂತ ಮತ್ತೇನಿದೆ

ಅಲ್ಲದೇ ಇನ್ನೊಂದು ಅನುಮಾನ ಅಂದರೆ ಈ ಎಲ್ಲಾ ಆತ್ಮಹತ್ಯೆ ಪ್ರಕರಣಗಳಲ್ಲಿ ಒಂದನ್ನು ಹೊರತು ಪಡಿಸಿ ಉಳಿದೆಲ್ಲಾ ಪ್ರಕರಣದಲ್ಲಿ ಫಿರ್ಯಾದಿದಾರರಿಗೂ ಆತ್ಮಹತ್ಯೆ ಮಾಡಿಕೊಂಡವರಿಗೂ ಸಂಬಂಧ ಇಲ್ಲ. ಆತ್ಮಹತ್ಯೆ ಮಾಡಿಕೊಂಡಾಗ ಕುಟುಂಬದ ಸದಸ್ಯರು ದೂರು ಕೊಟ್ಟೇ ಕೊಟ್ಟಿರುತ್ತಾರಲ್ಲವೇ ಆದರೆ ಆಳ್ವಾಸ್ ಸಂಸ್ಥೆಯಲ್ಲಿ ನಡೆದ ಆತ್ಮಹತ್ಯೆ ಪ್ರಕರಣದಲ್ಲಿ ದೂರುದಾರರು ಸಂತ್ರಸ್ತರ ಕುಟುಂಬಿಕರಾಗುವುದಿಲ್ಲ ಅಲ್ಲದೇ ಈ ಪಟ್ಟಿಯಲ್ಲಿರುವ ವಿದ್ಯಾರ್ಥಿಗಳೆಲ್ಲ ಹೊರಗಿನ ಜಿಲ್ಲೆಯವರು

ಒಂದು ವೇಳೆ ಕಾವ್ಯ ಕೂಡ ಹೊರ ಜಿಲ್ಲೆಯ ವಿದ್ಯಾರ್ಥಿನಿಯಾಗಿದ್ದರೇ ಅದೂ ಕೂಡ ಮುಚ್ವಿ ಹೋಗಿರುತ್ತಿತ್ತೇನೋ ಅದಕ್ಕಾಗಿಯೇ ಕಾವ್ಯ ಸಾವಿನ ಬಗ್ಗೆ ಸೂಕ್ತ ತನಿಖೆಯಾಗಲಿ ಅನ್ನೋ ಕೂಗು ಎದ್ದಿರುವುದು ಕಾವ್ಯ ಸಾವಿನ ತನಿಖೆಯ ಅಧಿಕಾರಿಗಳು ಈ ಪಟ್ಟಿಯ ಬಗ್ಗೆಯೂ ಗಮನ ಹರಿಸಲಿ.

Leave a Reply