ಕುವೆಂಪು ಹುಡುಕುತ್ತಾ ಬಂದರು ತಾರಿಣಿ

ಅಪ್ಪನನ್ನು ಹುಡುಕುತ್ತಾ ಮಗಳು ಬೆಂಗಳೂರಿಗೆ ಬಂದಿದ್ದಾಳೆ..

ಈ ಮೇಲಿನ ಕಥೆಗೆ ಒಂದು ಪುಟ್ಟ ಟ್ವಿಸ್ಟ್

ಇಲ್ಲಿ ಅಪ್ಪ ಕುವೆಂಪು, ಮಗಳು ತಾರಿಣಿ

ತೋಟಗಾರಿಕಾ ಇಲಾಖೆ ಈ ಬಾರಿಯ ಸ್ವಾತಂತ್ರ್ಯೋತ್ಸವ ಫಲ ಪುಷ್ಪ ಪ್ರದರ್ಶನಕ್ಕೆ ಕುಪ್ಪಳಿ ಹಾಗೂ ಕುವೆಂಪು ಅವರನ್ನು ಥೀಮ್ ಆಗಿ ಇಟ್ಟುಕೊಂಡಿದೆ. ಸಾವಿರಾರು ಹೂಗಳಲ್ಲಿ ನಿರ್ಮಿಸಿರುವ ಕುವೆಂಪು ಮನೆ ನೋಡುಗರನ್ನು ಇನ್ನಿಲ್ಲದಂತೆ ಆಕರ್ಷಿಸಿದೆ. ಕುವೆಂಪು ಅವರ ಪುತ್ಥಳಿಯಂತೂ ಎಲ್ಲರನ್ನೂ ಕೈ ಬೀಸಿ ಕರೆದಿದೆ.

ಹಾಗಿರುವಾಗ ಮಗಳು ತಾರಿಣಿ ಆ ಕರೆಗೆ ಓಗೊಡದಿರುತ್ತಾರೆಯೇ..??

ಅಪ್ಪನನ್ನ ನೋಡಲು ಪತಿ, ವಿಜ್ಞಾನಿ ಚಿದಾನಂದಗೌಡರ ಜೊತೆ ಲಾಲ್ ಭಾಗ್ ಗೆ ಬಂದರು.

ಅಪ್ಪನಿಗೆ ಕೈ ಮುಗಿದು ಹಳೆಯ ನೆನಪಿಗೆ ಜಾರಿದರು

ಚಿತ್ರಗಳು: ಗುರುಪ್ರಸಾದ್ ಹೊಸದುರ್ಗ, ಪ್ರೊ ಚಿದಾನಂದಗೌಡ 

Leave a Reply