ನಮನಮಗೆ ಬೇಕಾದಾಗ ಮಾತ್ರ ಪ್ರಗತಿಪರರು..

ಇತ್ತೀಚಿನ ಕರಾವಳಿ ವಿದ್ಯಮಾನಗಳ ಬಗ್ಗೆ ಪತ್ರಕರ್ತ ಸತೀಶ್ ಚಪ್ಪರಿಕೆ ತಮ್ಮ ನೋಟವನ್ನು ಹಂಚಿಕೊಂಡಿದ್ದರು.

‘ನನ್ನೆದೆಗೆ ಬೆಂಕಿ ಬಿದ್ದಿದೆ’ ಲೇಖನ ಹೊತ್ತು ತಂದ ಪ್ರತಿಕ್ರಿಯೆ ಇಲ್ಲಿದೆ

 

ದಕ್ಷಿಣಕನ್ನಡದಲ್ಲಿ ನಡೆದ ಹತ್ಯೆಗಳ ನಿಜವಾದ ಕಾರಣ ಇಂದಿನ ರಾಜಕಾರಣಕ್ಕೆ ಬೇಕಿದ್ದರಲ್ಲವೆ ದಕ್ಷ ಅಧಿಕಾರಿಗಳಿಗೆ ತನಿಖೆ ನಿರ್ವಹಿಸುವ ಹೊಣೆಯನ್ನ ವಹಿಸುವ ಮಾತು.

ಇತ್ತೀಚೆಗೆ ನಡೆದ ಘಟನೆಯ ದಿನವೇ ನಾನು ಕಾಸರಗೋಡಿಂದ ಮಂಗಳೂರಿಗೆ ಹೋಗಿ ಸಂಜೆ ಏಳರ ಹೊತ್ತಿಗೆ ನನ್ನ ಟೈಲರ್ ಗೆಳತಿಯನ್ನ ಅವಳ ಅಂಗಡಿಯಲ್ಲೇ ಭೇಟಿಯಾದೆ. ಅವಳಿನ್ನೂ ಅಂಗಡಿ ಮುಚ್ಚಿರಲಿಲ್ಲ. ಅಂದು ಶವಯಾತ್ರೆ ಬೇರೆ ನಡೆದಿದ್ದನ್ನ ಟಿ.ವಿ.ಮಾಧ್ಯಮದಲ್ಲಿ ಜೋರಾಗೇ ತೋರಿಸಿದ್ದರು. ಈ ರೀತಿ ವಾತಾವರಣದಲ್ಲಿ ಸಂಜೆ ಎಂಟು ಘಂಟೆ ಮೇಲೆ ಸ್ಕೂಟಿಯಲ್ಲಿ ಒಬ್ಬಳೇ ಹೋಗುವುದು ರಿಸ್ಕ್ ಅಲ್ವ ಕೇಳಿದೆ. ನಕ್ಕು ಬಿಟ್ಟಳು. ನೀನೊಮ್ಮೆ ಈ ಬೀದಿಯಲ್ಲೆಲ್ಲ ಹೋಗಿ ಬಂದು ಮತ್ತೆ ಹೀಗೇ ಕೇಳು ನೋಡುವಾ ಅಂದಳು.

ಮರುದಿನ ಬೆಂಗಳೂರಿಂದ ಸ್ನೇಹಿತರೊಬ್ಬರು ದಕ್ಷಿಣ ಕನ್ನಡಕ್ಕೆ ಬರುವವರಿದ್ದರು. ಮೂಲತಃ ಅವರು ದಕ್ಷಿಣ ಕನ್ನಡದವರೇ. ಬರ್ತಾ ಇದ್ದೀರಲ್ಲ ಅಂತ ಫೋನ್ ಮಾಡಿದ್ರೆ “ಅಯ್ಯೋ..ಈಗ ದಕ್ಷಿಣ ಕನ್ನಡಕ್ಕೆ ಕಾಲಿಡುವ ಹಾಗಿಲ್ಲ. ಅಲ್ಲಿ ಯಾವ ಕ್ಷಣದಲ್ಲಿ ಬೇಕಾದ್ರು ಕಂಡಲ್ಲಿ ಗುಂಡು ಆಜ್ಞೆ ಆದೀತಂತೆ” ಅಂದರು. ನಾನು ಕಾಸರಗೋಡು ದಾರಿ ಹಿಡಿದೆ.

-ಅನುಪಮಾ ಪ್ರಸಾದ್ 

ಸರಿಯಾಗಿ ಹೇಳಿದ್ದೀರಿ, ಕೊನೆಯ ಪ್ಯಾರಾ ಇದೆಯಲ್ಲ , ಅದರಲ್ಲಿ ಹೇಳಿರುವಂತೆ ಎಲ್ಲರೂ ಬಾಯಿಮುಚ್ಚಿಕೊಂಡು , ದಕ್ಷ ಮತ್ತು ಭ್ರಷ್ಟನಲ್ಲದ ಪೋಲೀಸ್ ಅಧಿಕಾರಿ ಒಬ್ಬರಿಗೆ , ಈವರೆಗೆ

ನಿಮ್ಮೂರಿನಲ್ಲಿ ನಿಮ್ಮ ಜಿಲ್ಲೆಯಲ್ಲಿ ನಡೆದ ಎಲ್ಲಾ ಕೊಲೆಗಳ ತಪಾಸಣೆ ವಹಿಸಿದರೆ, ಹೆಚ್ಚೇನಲ್ಲ ಮೂರು ತಿಂಗಳೊಳಗೆ ಎಲ್ಲಾ ಅಪರಾಧಿಗಳು ಜೈಲಿನೊಳಗಿರುತ್ತಾರೆ.

ಪೋಲೀಸರ ಆತ್ಮಸ್ಥೈರ್ಯವನ್ನು ಸದಾ ಕುಗ್ಗಿಸುವ ಮಾತನಾಡುವುದೇ ನಮ್ಮ ಹೆಚ್ಚುಗಾರಿಕೆಯೆಂದು ನಾವೆಲ್ಲರೂ ನಂಬಿಕೊಂಡುಬಿಟ್ಟಿದ್ದೇವೆ. ಮತ್ತು ನಮನಮಗೆ ಬೇಕಾದಾಗ ಮಾತ್ರ ಪ್ರಗತಿಪರತೆ ವ್ಯಕ್ತಪಡಿಸುವುದೇ ಸರಿಯಾದ ನಡೆಯೆಂದು ನಾವೂ ನಂಬಿ ಕಿರಿಯರಿಗೂ ಕಲಿಸುತ್ತಿದ್ದೇವೆ.

-ಲಲಿತಾ ಸಿದ್ಧಬಸವಯ್ಯ 

Leave a Reply