‘ಅಕ್ಕ’ ಬಂದರು ಕಪ್ಪ ಟಿವಿಗೆ..

Excited! Enlightened!
ನೆಲದ ಮರೆಯ ನಿಧಾನವು | Nelada Mareya Nidhanavu

‘ಕಪ್ಪ ಟಿವಿ’ ಸಿರೀಸ್ ನಲ್ಲಿ ಕರ್ನಾಟಕ ಸಂಗೀತದ ಅದೆಷ್ಟೋ ಫ್ಯೂಜನ್ ಗಳನ್ನು ಕೇಳಿ ಕುಣಿಯುತ್ತಿದ್ದ ನನಗೆ ಅಲ್ಲಿ ಅಕ್ಕನ ವಚನವನ್ನು ಹಾಡಬಹುದೆಂಬ ಅಂದಾಜು ಖಂಡಿತ ಇರಲಿಲ್ಲ.

ಅಕ್ಕನ ವಚನ ಕೇಳಿದಾಗ ಅದೆಷ್ಟು ಮೈದುಂಬಿ ಕುಣಿದೆನೋ, ಹೇಳಿಕೊಳ್ಳಲಾಗದು! ವಚನವನ್ನು ಇಷ್ಟು ಚೆಂದಾಗಿ ಹಾಡಿದ Aditya Prakash ಅವರಿಗೆ ನನ್ನಿ. 

ಫೇಸ್ಬುಕ್ ಬಿಟ್ಟು ಒಂದಷ್ಟು ಮಹತ್ತರ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದವಗೆ ಈ ಹಾಡು ಕೇಳಿ ಸಹಸ್ರಾರ ಸಿಡಿದು ಹೇಳಿಕೊಳ್ಳದೇ ವಿಧಿಯಿಲ್ಲವೆಂದು ನಿಮ್ಮೊಡನೆ ಹಂಚಿಕೊಳ್ಳಬೇಕಾಯ್ತು! ತಪ್ಪದೇ ಕೇಳಿರಿ. 

Thanks to Aditya Prakash & Praveen Sparsh

-ರಾಜೇಂದ್ರ ಪ್ರಸಾದ್ 

5 comments

 1. Absolutely too good. Soulfully rendered.
  Thanks Rajendra Prasad Anna for sharing this valuable thing.
  Aditya Prakash and Praveen Sparsh you rocked it. Loved your fusion of singing.

 2. ವಚನಗಳಿಗೆ ಸಂಗೀತದ ಟಚ್ ನೀಡಿದ ಮೊದಲಿಗರಲ್ಲಿ ಕಿ ರಂ ನಾಗರಾಜ ಅವರು ಒಬ್ಬರು

 3. ಭರತನಾಟ್ಯದ ಜತಿ ಹಾಡಿನ ಹಾದಿ ತಪ್ಪಿಸುತ್ತದೆ. ವಚನ ಸಾಹಿತ್ಯಪ್ರಧಾನವಾದುದು. ಸಂಗೀತ ಸಾಹಿತ್ಯಕ್ಕೆ ಪೂರಕವಾಗಬೇಕು. ಅದರಲ್ಲೂ ಶಾಸ್ತ್ರೀಯ ಸಂಗೀತದ ಧಾಟಿ ಸಲ್ಲ. (ಉದಾಹರಣೆಗೆ “ಚನ್ನಮಲ್ಲಿಕಾರ್ಜುನ” ಮೇಲಿಂದ ಮೇಲೆ ಪುನರಾವರ್ತನೆ). ವಚನ ರಚಿಸುವಾಗ ವಚನಕಾರರಿಗಿದ್ದ ಮನೋಧರ್ಮವನ್ನು ಸಂಗೀತಕ್ಕೆ ಅಳವ್ದಿಸುವವರು ತಿಳಿದಿದ್ದರೆ ಪರ್ನಾಮ ಹೆಚ್ಚಾದೀತು. jazz ಸಂಗೀತದ ಅಂಶಗಳನ್ನು ವಚನದಂಥ ಸಾಹಿತ್ಯಕ್ಕೆ ಅದ್ಭುತವಾಗಿ ಬಳಸಿಕೊಳ್ಳುವ ಸಾಧ್ಯತೆಗಳಿವೆ. ನಾನೆಣಿಸಿದಷ್ಟು ಆ ಬಳಕೆ ಪೂರೈಸಲಿಲ್ಲ.

  ಚಂದ್ರ ಐತಾಳ
  ಲಾಸ್ ಎಂಜಲ್ಸ್

Leave a Reply