‘ಹತ್ತು ತಮಿಳು ಕಥೆಗಳು’ ಮೇಲೆ ಕಣ್ಣಾಡಿಸಿದಾಗ..

 

 

 

‘ಹತ್ತು ತಮಿಳು ಕಥೆಗಳು’ ಕಣ್ಣಾಡಿಸಿದಾಗ ಮನಸಿಗೆ ತಟ್ಟಿದ್ದು.

ಅನುವಾದ: ಕೆ ನಲ್ಲತಂಬಿ 

ಸವಿತಾ ರವಿಶಂಕರ್ 

 

 

 

 

 

 

 

ಗಂಧಗಾಮಿನಿ——ಊರ್ಮಿಳಾ

ಹೆಣ್ಣೋರ್ವಳ ಅನಾವರಣ. ಪ್ರೀತಿಯಿಂದ ಬಾಳಬಯಸುವ ಪಂಜಾಬಿ ಹುಡುಗಿ ಹೀಗೆ ಭೇಟಿಯಾಗಿ, ಪರಿಚಯವಾಗಿ ಅವಳೋರ್ವ ಕಾಲ್ ಗರ್ಲ ಎಂದು ತಿಳಿದಾಗ ನಾಯಕ ಅವಕ್ಕಾಗುತ್ತಾನೆ. ತನ್ನಂತೆ ಅವಳು ವಾಸನೆಯ ಹುಡುಕಾಟದವಳು ಎಂದು ಅರಿತಾಗ ಒಳೊಗೊಳೊಗೆ ಖುಷಿಯಾದರು ಅವಳು ತನ್ನಯಾರೊ ಹಿಂಬಾಲಿಸುತ್ತಿದ್ದಾರೆ. ನಿಮ್ಮಲ್ಲಿ ನಾಲ್ಕುದಿನವಿರಲೆ ಎಂದಾಗ ನಾಯಕ ಮನಸು ಮಾಡುವುದಿಲ್ಲ. ಅವಳ ಕೊಲೆಯಾದಾಗ ತಾನು ಭೇಟಿಯಾಗಲೇ ಇಲ್ಲವೇನೊ ಕನಸೇನೊ ಎಂದುಕೊಳ್ಳುತ್ತಾರೆ. ಆಗ ಕೊಠಡಿ ತುಂಬ ಗೋಧಿ ಘಮ. ಇಲ್ಲ ಅವಳಿಲ್ಲೆ ಎಲ್ಲೊ ಇದ್ದಾಳೆ ಎಂದುಕೊಳ್ಳುತ್ತಾರೆ.

ನಮ್ಮ ಪರಂಪರೆಯಲ್ಲಿ ದೇವ , ಯಕ್ಷ ಗಂಧರ್ವ ರು ಭೂಮಿಗೆ ಬಂದಾಗ ಇಂಥ ಘಮ ಆವರಿಸುತ್ತದೆ. ಮೊಗ್ಗುಗಳ ಸ್ಪರ್ಷಿಸಿದಾಗ ಘಮ ಉಂಟಾಗುತ್ತದೆ ಎಂಬ ಅಂಶವೊಂದು ಸುಳಿದು ಹೋಯಿತು. ಮನಸು ಬಯಸಿದಾಗ , ನೆನಪಾದಾಗ, ಹಂಬಲಿಸಿದಾಗ ಅರಿವಿಲ್ಲದೆ ನಮ್ಮ ನ್ನು ವ್ಯಾಪಿಸುವ ಭ್ರಮೆಯು ಘಮವೇ ಅಲ್ಲವೆ? ಇರಲಿ. ಗಂಧಗಾಮಿನಿ ಕಥೆ ನನ್ನೊಳಗು ಮಾಡಿಕೊಂಡಿತು. ನಾವು ಪ್ರೀತಿಸುವ ಎಲ್ಲ ಜೀವಗಳು ಘಮಗಳೆ ಅಲ್ಲವೆ?

ಊರ್ವಶಿ ‌ನಾ ಮೆಚ್ವಿದ ಇನ್ನೊಂದು ಕಥೆ.

ನಿದ್ರಾದೇವಿಯನ್ನ ಲಕ್ಷ್ಮಣ ಕಳಿಸಿ ತನ್ನ ಹೆಂಡತಿಯ ಸೇರು ಎನ್ನುತ್ತಾನೆ. ನನ್ನ ಕರ್ತವ್ಯಕ್ಕೆ ಸಹಾಯವಾಗುತ್ತದೆ, ಎಂದು ಹೇಳಿ ಕಳಿಸುತ್ತಾನೆ. ಅವಳ ಮಾತು ಒಪ್ಪುವ ಊರ್ಮಿಳೆ. ತ್ಯಾಗಕ್ಕಾಗಿಯಾದರೆ ನಾ ಒಪ್ಪುವುದಿಲ್ಲ. ಅವನಿಗೆ ಸಹಾಯವಾದರೆ ಅಭ್ಯಂತರವಿಲ್ಲ ಎನ್ನುತ್ತಾಳೆ. ತನ್ನ ವ್ಯಕ್ತಿತ್ವದ ಬಗ್ಗೆ ಅಕ್ಕರೆಗಳಿಲ್ಲದೆ ಕೇವಲ ‌ಪ್ರತಿಷ್ಟೆ, ಕರ್ತವ್ಯಗಳಿಗಾಗಿ ಬದುಕುವ ಗಂಡನ್ನು ನಖಶಿಖಾಂತವಾಗಿ ಧಿಕ್ಕರಿಸುತ್ತಾಳೆ. ತಾನೊಂದು ಯಾತಕ್ಕು ಬೇಡವಾದ ವ್ಯಕ್ತಿ ಯಾದೆನಲ್ಲ ಅವನ ಬಾಳಿನಲ್ಲಿ ಎಂದುಕೊಳ್ಳುತ್ತಾಳೆ. ಮನುಷ್ಯ ಅಂದಿನಿಂದ ಇಂದಿನವರೆಗು ತನ್ನ ಅತ್ಯಂತ ಖಾಸಗಿಸಂಬಂಧಗಳನ್ನು ವಸ್ತುಗಳಂತೆಯು, ವಸ್ತು ಗಳನ್ನು ಭಾವನಾತ್ಮಕವಾಗಿಯು ಯೋಚಿಸುವ ಈ ಚಲನೆ ಅನೇಕ ಕುಟುಂಬಗಳನ್ನು ಬಲಿತೆಗೆದುಕೊಂಡಿದೆ ಉರ್ಮಿಳೆ ಯು ಇದಕ್ಕೆ ಉದಾಹರಣೆಯೆ ಆಗಿದ್ದಾಳೆ.

ಇಲ್ಲಿನ ಹತ್ತು ಕಥೆಗಳು ಭಿನ್ನ ವಸ್ತು, ಕಾಲಘಟ್ಟ ಇರುವಂಥವು. ಇಲ್ಲಿನ ಬರಹಗಳ ಆಯ್ಕೆ ವಸ್ತುನಿಷ್ಟವಾಗಿ ಯೋಚಿಸುವಂಥವು. ಭಾವೋದ್ರಿಕ್ತವಾಗುವ, ಅದರಲ್ಲಿ ನರಳುವ ಪಾತ್ರಗಳು ಬರುವುದೇ ಇಲ್ಲ ಎಂದರೆ ತಪ್ಪಿಲ್ಲ. ಅತಿ ವಾಸ್ತವದಲ್ಲಿ ನಡೆಯುತ್ತಿರುವಂತೆ ಭಾಸವಾಗುತ್ತವೆ. ಲೇಖಕರ ಬರಹಗಳು ನಲ್ಲತಂಬಿಯವರ ಅನುವಾದ ಮನೋಜ್ಞವಾಗಿವೆ.

ಇಲ್ಲಿನ ಸ್ತ್ರೀ ಪಾತ್ರಗಳು ಬಹಳ ಮುಖ್ಯವಾಗಿ ಆಧುನಿಕತೆಯನ್ನು ಅನುಸಂಧಾನ ಮಾಡಿಕೊಂಡಿವೆ. ಪೌರಾಣಿಕ ಪಾತ್ರಗಳೆ ಆಗಿರಲಿ, ಇಂದಿನ ಕಾಲ್ಗರ್ಲ ಮಾದರಿಯ ಪಾತ್ರಗಳ ವ್ಯಕ್ತಿತ್ವಗಳೆ ಆಗಿರಲಿ, ವ್ಯಕ್ತಿ ಗೌರವವನ್ನು ಎದುರುನೋಡುತ್ತವೆ. ಹಾಗು ಬಹಳಷ್ಟು ಸ್ಪಷ್ಟ, ತಮ್ಮ ನಡೆಗಳ ಬಗ್ಗೆ, ವರ್ತನೆಗಳ ಬಗ್ಗೆ ಎಚ್ಚರ ಗೌರವಗಳಿದ್ದು ಹಾಗೆ ವರ್ತಿಸುತ್ತಿರುತ್ತವೆ. ಅವು ಸಂದರ್ಭ ಅಥವಾ ಅನಿವಾರ್ಯ ಗಳಿಂದಾಗಿ ವರ್ತಿಸದೆ ಸಂಪೂರ್ಣ ಎಚ್ಚರದಲ್ಲಿ ಕ್ರಿಯೋನ್ಮುಖವಾಗುತ್ತವೆ. ಇಂಥ ಒಂದು ಚಲನೆ ಕನ್ನಡ ಬರಹಕ್ಕೆ ಸೇರಬೇಕಿತ್ತು. ಅದರಲ್ಲು ಸ್ತ್ರೀ ಪಾತ್ರಗಳನ್ನು ರಚಿಸುವಾಗ ಪರಂಪರೆಯ ಮುಖವಾಣಿಗಳಾಗಿ ಬರುವುದನ್ನು ಓದಿ ವಾಕರಿಕೆಯಾಗಿದ್ದ ಓದುಗನಿಗೆ ಹೊಸ ರುಚಿಯ ಬಡಿಸಿದಂತೆ ಈ ಬರಹಗಳು ಆಪ್ತವಾಗಿವೆ. ಕತೆಗಳು ಒಂದು ಮತ್ತೊಂದಕ್ಕಿಂತ ಭಿನ್ನವು ಆಗಿದ್ದು ಓದಿಸಿಕೊಳ್ಳುತ್ತವೆ.

ಸೋಲುತ್ತಿದ್ದರು, ನೋವುಂಡರು ಬೇಸರಗಳಿಲ್ಲದ ಹೆಣ್ಣುಗಳಿವೆ ಇಲ್ಲಿ. ಸ್ತ್ರೀ ಮೊದಲ ಬಾರಿಗೆ ತನ್ನ ಲಿಂಗತ್ವವನ್ನು ಮನುಷ್ಯನಾಗಿಸಿಕೊಳ್ಳುವ ಚಲನೆಯಲ್ಲಿವೆ. ಎಲ್ಲರ ಓದಿಗೆ ಇಷ್ಟವಾಗುವ ಕಥೆಗಳಿವೆ. ಕೊಂಡುಕೊಳ್ಳಿ ಓದಿ ಹೇಳಿ.

1 Response

  1. K Nalla Thambi says:

    Thank you Mohan sir. Thank you Savitha Ravishankar.

Leave a Reply

%d bloggers like this: