ತೇಜಸ್ವಿ ಎಂದೆಂದಿಗೂ..

ತೇಜಸ್ವಿ ಎಂದೆಂದಿಗೂ – ಪ್ರಬಂಧ ಸ್ಪರ್ಧೆ

ತೇಜಸ್ವಿ ಮಾತುಗಳು ಇಂದಿಗೆ ಎಷ್ಟು ಪ್ರಸ್ತುತವಾಗಿವೆ ಎಂಬುದರ ಬಗ್ಗ ತೇಜಸ್ವಿಯವರ ಹುಟ್ಟಹಬ್ಬದ ಸವಿ ನೆನಪಿಗಾಗಿ ಪ್ರಬಂಧ ಸ್ವರ್ಧೆ ಏರ್ಪಡಿಸಲಾಗಿದೆ.

ಪೂರ್ಣಚಂದ್ರ ತೇಜಸ್ವಿ ಅವರ ಬರಹಗಳು ಹಾಗೂ ಮಾತುಗಳು ಆಯಾ ಕಾಲಕ್ಕೆ ತಕ್ಕಂತೆ ಪ್ರಸ್ತುತವಾಗಿರುತ್ತವೆ. ಅದು ಕಾವೇರಿ ಅಥವಾ ಇನ್ಯಾವುದೇ ನದಿ ನೀರಿನ ಹಂಚಿಕೆ ವಿಷಯದ ಬಗ್ಗೆಯಾಗಿರಬಹುದು, ಕನ್ನಡ ಭಾಷೆ, ಕರ್ನಾಟಕ, ಪರಿಸರ ಕಾಳಜಿ ಸೇರಿದಂತೆ ಇನ್ನು ಹತ್ತಾರು ವಿಚಾರಗಳನ್ನ ಅವರ ಪ್ರತಿಯೊಂದು ಪುಸ್ತಕಗಳಿಂದ ಪಡೆದು ಇಂದಿನ ಪರಿಸ್ಥಿತಿಯೊಂದಿಗೆ ತಾಳೆ ಹಾಕಬಹುದು. ಇಷ್ಟೇ ಅಲ್ಲದೆ ಅವರ ಕಾದಂಬರಿಗಳಲ್ಲಿ ಬರುವ ಹಲವಾರು ಪಾತ್ರಗಳು ಮತ್ತು ಸನ್ನಿವೇಶಗಳನ್ನ ಪ್ರಸ್ತುತ ಕಾಲಕ್ಕೆ ಹೋಲಿಕೆ ಮಾಡಬಹುದಾಗಿದೆ.

ಇಂತಹ ವಿಚಾರಗಳ ಬಗ್ಗೆ ಪ್ರಬಂದ ಬರೆಯುವ ಸ್ಪರ್ದೆಯನ್ನು ಪೂರ್ಣಚಂದ್ರ ತೇಜಸ್ವಿ ಫೇಸ್ಬುಕ್ ತಂಡ (fb.com/PCTejaswi) ಏರ್ಪಡಿಸುತ್ತಿದೆ. ತೇಜಸ್ವಿಯವರ ಪ್ರಕಟಿತ ಪುಸ್ತಕಗಳಿಂದ ಯಾವುದಾದರೂ ವಿಷಯ ಅಥವಾ ಅಧ್ಯಾಯದ ಮೇಲೆ ಕನಿಷ್ಠ 150 ಪದಗಳಿಂದ ಗರಿಷ್ಠ 300 ಪದಗಳಲ್ಲಿ ಒಂದು ಪ್ರಬಂದ ಬರೆದು ನಮಗೆ ಕಳುಹಿಸಿ.

ಒಳ್ಳೆಯ ಬರಹಗಳಿಗೆ ಬಹುಮಾನ ನೀಡಲಾಗುವುದು

ಪ್ರಬಂಧಗಳನ್ನು ಕಳುಹಿಸುವ ವಿಧಾನ ಮತ್ತು ನಿಯಮಗಳು:

೧. ಪ್ರಬಂದವು ಕನಿಷ್ಠ 150 ಪದಗಳಿಂದ ಗರಿಷ್ಠ 300 ಪದಗಳಲ್ಲಿ ಇರಬೇಕು. ಕನ್ನಡ ಲಿಪಿಯಲ್ಲಿರುವ ಬರಹಗಳನ್ನು ಮಾತ್ರ ಪರಿಗಣಿಸಲಾಗುವುದು. ವಿಭಿನ್ನವಾದ ಬರಹಗಳಿಗೆ ಮೊದಲ ಆದ್ಯತೆ.
೨. ತೇಜಸ್ವಿಯವರ ಪ್ರಕಟಿತ ಪುಸ್ತಕಗಳಿಂದ ಯಾವುದಾದರೂ ವಿಷಯ ಅಥವಾ ಅಧ್ಯಾಯದ ಮೇಲೆ ಮಾತ್ರ ಪ್ರಬಂಧ ಬರೆದು ಕಳುಹಿಸಲು ಅವಕಾಶವಿದೆ.
೩. ಒಬ್ಬರಿಗೆ ಒಂದು ಪ್ರಬಂಧ ಕಳುಹಿಸಲು ಮಾತ್ರ ಅವಕಾಶವಿದೆ‌.
೪. ಪ್ರಬಂಧ ಕಳುಹಿಸುವಾಗ ನಿಮ್ಮ ಹೆಸರು, ವಿಳಾಸ, ಮೊಬೈಲ್‌ ಸಂಖ್ಯೆಯನ್ನು ತಪ್ಪದೆ ಕಳುಹಿಸಿ. ಜೊತೆಗೆ ಪ್ರಬಂಧ ಬರೆಯಲು ಬಳಸಿಕೊಂಡಿರುವ ತೇಜಸ್ವಿಯವರ ಪುಸ್ತಕದ ಹೆಸರನ್ನು ಸ್ಪಷ್ಟವಾಗಿ ತಿಳಿಸಬೇಕು.
೫. ಪ್ರಬಂಧಗಳನ್ನು ನಮಗೆ ಕಳುಹಿಸಲು ಕೊನೆಯ ದಿನಾಂಕ 02-09-2017, ಶನಿವಾರ
೬. ಪ್ರಬಂಧಗಳನ್ನು kppoornachandratejaswi@gmail.com ಇಲ್ಲಿಗೆ ಇ-ಮೇಲ್ ಮಾಡಬಹುದು ಅಥವಾ 9743159250 / 9980296974 ನಂಬರಿಗೆ ವಾಟ್ಸಪ್ ಮಾಡಬಹುದು

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
9743159250 / 9980296974
99004 82117 / 9986468550
Email: kppoornachandratejaswi@gma il.com
Facebook: fb.com/PCTejaswi

Leave a Reply