ನನ್ನ ಪುಸ್ತಕಗಳಾದರೂ ಎಂಥವು!

ಕೆ.ವಿ.ತಿರುಮಲೇಶ್

ನನ್ನ ಪುಸ್ತಕಗಳನ್ನು ಪ್ರಕಟಿಸಲು ಯಾರೂ ಒಪ್ಪದೆ ಇದ್ದಾಗ ಪ್ರಕಟಿಸಲು ಮುಂದೆ ಬಂದವರು ರವಿಕುಮಾರ್ ಮತ್ತು ಚಂದ್ರಿಕ.

ನನ್ನ ಪುಸ್ತಕಗಳಾದರೂ ಎಂಥವು!

ಕವಿತೆಗಳು, ಅನುವಾದಗಳು, ಭಾಷೆಯ ಕುರಿತಾದವು–ಅರ್ಥಾತ್ ಮಾರಾಟವಾಗಲು ಕಷ್ಟವೆನಿಸುವಂಥವು.

ಆದರೂ ಅಭಿನವದವರು ಕೇವಲ ಸಾಂಸ್ಕೃತಿಕ ದೃಷ್ಟಿಯಿಂದ ಅವುಗಳನ್ನು ಪ್ರಕಟಿಸುತ್ತ ಬಂದಿದ್ದಾರೆ. ಅಲ್ಲದಿದ್ದರೆ “ಅಕ್ಷಯ ಕಾವ್ಯ” ಎಲ್ಲಿರುತ್ತಿತ್ತು? “ಅರಬ್ಬಿ”ಯ ಕತೆ ಏನಾಗುತ್ತಿತ್ತು? ಈಚಿನ “ಜ್ಞಾನ ವಿಜ್ಞಾನ ತತ್ವಜ್ಞಾನ”ವನ್ನಾಗಲಿ (ಅನುವಾದ ಲೇಖನಗಳ ಸಂಕಲನ), “ಟೈಬೀರಿಯಸ್” ಮತ್ತು “ಕಲಿಗುಲ”ವನ್ನಾಗಲಿ (ನಾಟಕಗಳು) ಯಾರು ಮುಟ್ಟಿ ನೋಡುತ್ತಿದ್ದರು?

ನಾನಿಂದು ಒಬ್ಬ ಲೇಖಕನಾಗಿ ಜೀವಂತವಾಗಿದ್ದರೆ ಅದಕ್ಕೆ ಅಭಿನವವೇ ಕಾರಣ. ಪ್ರಖ್ಯಾತ ಷ. ಶೆಟ್ಟರನ್ನು ಪ್ರಕಟಿಸುತ್ತಿರುವ ರವಿಕುಮಾರ್ ನನ್ನನ್ನೂ ಪ್ರಕಟಿಸುತ್ತಿದ್ದಾರೆ ಎನ್ನುವುದು ನನಗೊಂದು ಅಭಿಮಾನದ ವಿಷಯ. ನನಗಿದು Greatness by association! ಅಭಿನವ ಇನ್ನಷ್ಟು ಅಭಿವೃದ್ಧಿಗೊಳ್ಳಲಿ ಎಂದು ಆಶಿಸುತ್ತೇನೆ.

Leave a Reply