ಮೊನ್ನೆ ಕಾದಂಬರಿಯನ್ನು ಕೈಗೆತ್ತಿಕೊಂಡೆ..

 

 

 

 

 

ಜಯಲಕ್ಷ್ಮೀ ಪಾಟೀಲ್

 

 

 

 

 

ಅರ್ಧನಾರೀಶ್ವರ-

ಈ ಶೀರ್ಷಿಕೆಯೆ ಅರ್ಧ ನನ್ನನ್ನು ಈ ಕೃತಿಯ ಓದಿಗೆ ಸೆಳೆದಿದ್ದು.

ಫೇಸ್‌ಬುಕ್‌ ನಲ್ಲಿ ಮೊದಲು ಪುಸ್ತಕದ ಮುಖಪುಟವನ್ನು ಕಂಡಾಗ ಕುತೂಹಲಗೊಂಡು ಖರೀದಿಸಬೇಕು ಎಂದುಕೊಂಡೆ. ನನ್ನ ಮನದ ಮಾತು ಕೇಳಿಸಿತೆಂಬಂತೆ ನಲ್ಲತಂಬಿ ಸರ್ ಕಳುಹಿಸಿಕೊಟ್ಟರಾದರೂ ಓಡಾಟ ಆ ಕೆಲಸ ಈ ಕೆಲಸ ಎನ್ನುತ್ತಾ ರಾತ್ರಿಯಾದರೆ ಮಲಗಿದರೆ ಸಾಕು ಎನಿಸುತ್ತಿತ್ತು.

ಮೊನ್ನೆ ಕಾದಂಬರಿಯನ್ನು ಕೈಗೆತ್ತಿಕೊಂಡೆ.

ಓದಿ ಮುಗಿಸಿ ಕಾಳಿ ಪೊನ್ನುಗಾಗಿ ಮರಗುತ್ತಾ, ವ್ಯವಸ್ಥೆಯ ಕ್ರೌರ್ಯಕ್ಕೆ ರೊಚ್ಚಿಗೇಳಿತ್ತಾ, ಅದರಲ್ಲಿನ ದೇವರ ಹೆಸರಿನ ಅನುಕೂಲಗಳಿಗೆ ಬೆರಗಾಗುತ್ತಾ ಕುಳಿತಿರುವೆ. ಇಡೀ ಕಾದಂಬರಿಯ ಕೇಂದ್ರ ಪಾತ್ರಗಳು ಎರಡೇ ಆದರೂ ಸ್ವಾತಂತ್ರ್ಯಪೂರ್ವದ ಕಾಲಘಟ್ಟ, ಪರಿಸರ, ಆಚರಣೆಗಳು, ನಂಬಿಕೆಗಳು, ಸೂಕ್ಷ್ಮತೆಗೂ ಸಾಕ್ಷರತೆಗೂ ಸಂಬಂಧವೇಯಿಲ್ಲ ಎನ್ನುವ ಸತ್ಯ ಎಲ್ಲವೂ ನನ್ನನ್ನು ಅದೆಷ್ಟು ಓದಿನಲ್ಲಿ ತಲ್ಲೀನಳನ್ನಾಗಿಸಿದವು ಎಂದರೆ ಕಾಳಿಯೂ ಪೊನ್ನುವೂ ಎರಡೂ ನಾನಾಗಿ ಆ ಪ್ರೀತಿ, ತಲ್ಲಣ, ರೋಷ, ಅಸಹಾಯಕತೆ ಅನಿವಾರ್ಯತೆಗಳನ್ನು ಅನುಭವಿಸಿದಂತೆ ಭಾಸ.

ಬಳಸಿದ ಭಾಷೆ ಓದುತ್ತಿರುವುದು ಅನುವಾದ ಎನ್ನುವುದನ್ನು ಆಗಾಗ ನೆನಪಿಸುವುದು ನಿಜವಾದರೂ ಅದನ್ನೂ ಮೀರಿ ನಲ್ಲತಂಬಿ ಸರ್ ಭಾಷೆಯನ್ನು ದುಡಿಸಿಕೊಂಡ ರೀತಿ ಇಷ್ಟವಾಯಿತು. ದುಡಿಸಿಕೊಂಡ ಎನ್ನುವ ಪದವನ್ನು ಬಳಸಲು ಕಾರಣ ಕನ್ನಡದ ಮುಖಾಂತರ ಅವರು ನಮಗೆ ತಮಿಳು ಪರಿಸರವನ್ನು ಕಟ್ಟಿಕೊಟ್ಟ ರೀತಿ. ಇಷ್ಟವಾಯಿತು ಸರ್.

ಕಾದಂಬರಿಗಾಗಿ ನಿಮಗೆ ತುಂಬಾ ಥ್ಯಾಂಕ್ಸ್.

Leave a Reply