ಅಯ್ಯಯ್ಯೋ.. ಉಪೇಂದ್ರ

 

 

 

ಅರ್ಜುನ್ ರೆಡ್ಡಿ ಮತ್ತು ಉಪೇಂದ್ರ

-ಎಂ ಆರ್ ಕಮಲ 

 

 

ನಿನ್ನೆ ಮಕ್ಕಳನ್ನು ನಾಟಕಕ್ಕೆ ಕರೆದುಕೊಂಡು ಹೋಗಿದ್ದಾಗ ಹುಚ್ಚನಂತೆ ಆಡುತ್ತಿದ್ದ ಹುಡುಗನೊಬ್ಬನನ್ನು ಶಿಕ್ಷಕರೊಬ್ಬರು ಗದರಿಸಿದ್ದಕ್ಕೆ, `ನನಗಿಷ್ಟ ಬಂದ ಹಾಗೆ ನಡ್ಕೋತೀನಿ, ಅರ್ಜುನ್ ರೆಡ್ಡಿ ತರಹ’ ಅಂದನಂತೆ.

ಈ `ಅರ್ಜುನ್ ರೆಡ್ಡಿ’ ಸಿನೆಮಾ ನಾನು ನೋಡಿಲ್ಲ. ಅದರ ಬಗ್ಗೆ ಮಾತಾಡೋ ಹಕ್ಕು ನನಗಿಲ್ಲ. ಪ್ರತಿ ಮನುಷ್ಯನ ಸ್ವಾತಂತ್ರ್ಯದ ಬಗ್ಗೆ ಅಪಾರ ಗೌರವ ನನಗಿದ್ದರೂ ಸ್ವೇಚ್ಛೆ, ಸ್ವೈರದ ಬಗ್ಗೆ ಇಲ್ಲ.

`ಉಪೇಂದ್ರ’ ಸಿನೆಮಾ ಬಂದಾಗ ಕಾಲೇಜು ಅಲ್ಲೋಲ ಕಲ್ಲೋಲವಾಗಿ ಹೋಗಿತ್ತು. ಜುಟ್ಟು ಕಟ್ಟಿಕೊಂಡು ತಿರುಗುತ್ತಿದ್ದ ಒಂದಿಷ್ಟು ಹುಡುಗರು `ಏನೇ, ಬಾರೆ’ ಎಂದು ಹುಡುಗಿಯರ ಕೈ ಹಿಡಿದು ಎಳೆಯತೊಡಗಿದ್ದರು. ಅಕ್ಷರಶಃ ಉಪೇಂದ್ರ ನನಗೆ ಸವಾಲಾಗಿ ಹೋಗಿದ್ದ.

`ಸ್ವಾತಂತ್ರ್ಯ ಮತ್ತು ಸ್ವೈರ’ದ ನಡುವಿನ ವ್ಯತ್ಯಾಸ ಅರ್ಥಮಾಡಿಸಲು ಹೆಣಗಿ ಒದ್ದಾಡಿದ್ದೆ. ಒಬ್ಬ ಹುಡುಗನನ್ನು ಹುಚ್ಚನಂತೆ ಮಾಡುವ ಯಾವ ಚಿತ್ರವನ್ನು ಶಿಕ್ಷಕಿಯಾಗಿ, ತಾಯಿಯಾಗಿ ನಾನು ಗೌರವಿಸಲಾರೆ

Leave a Reply