ಅಪ್ಪಾಜಿ, ಅಮ್ಮಾಜಿ, ಇಂದಿರಾಜಿ…

 

 

 

ನಾಗೇಂದ್ರ ಶಾ

 

 

 

 

ಅಪ್ಪಾಜಿ, ಅಮ್ಮಾಜಿ, ಇಂದಿರಾಜಿ…

ಎಲ್ಲವನ್ನೂ ಮೀರಿದ ಜನ ಸಾಮಾನ್ಯರಿಗಾಗಿ ಇಲ್ಲೊಂದು ಕ್ಯಾಂಟೀನ್ ಇದೆ.

ಮಲ್ಲೇಶ್ವರ 7 ನೇ ಕ್ರಾಸ್ ನಂತ ಏರಿಯಾದಲ್ಲಿ.!!!!

ಯಾವುದೇ ರೈಸ್ 10 ರೂಪಾಯಿ. ಇಂದು ನಾವು ಹೊಟ್ಟೆ ತುಂಬಿಸಿಕೊಂಡಿದ್ದು ಅಲ್ಲೆ. ಯಾರು ಬೇಕಾದರೂ ರುಚಿ ನೋಡಬಹುದು. ಅತಿ ಕಡಿಮೆ ರೇಟು. ಆ ಕಡೆ ಹೋದಾಗ ಒಮ್ಮೆ ಭೇಟಿ ಕೊಡಿ. ನಿಮಗೂ ಇಷ್ಟವಾಗತ್ತೆ.

ಅಲ್ಲಿನ ವಿಶೇಷ ಗಸಗಸೆ ಪಾಯಸ… 5 ರೂಪಾಯಿಗೆ…?!!! ನಾನೊಬ್ನೆ 3 ಲೋಟ ಕುಡದೆ. ಇನ್ನೂ ಅದರ ಮಯಕದಲ್ಲೆ ಇದೀನಿ..

ಆಹಾ…! ಜನತೆ ಈ ಪೋಸ್ಟ್‌ಗೆ ಸ್ಪಂದಿಸಿದ ಪರಿ ನಿಜವಾಗ್ಲೂ ಖುಷಿಯಾಯ್ತು. ಕುತೂಹಲಕ್ಕೆ ನಾನು ಕ್ಯಾಂಟೀನ್‌ರವರನ್ನು ಕೇಳಿದೆ. “ಇಷ್ಟು ಕಡಿಮೆ ದುಡ್ಡಿಗೆ‌ ಕೊಡ್ತಿದಿರಲ್ಲಾ… ನಿಮಗೆ ವರ್ಕೌಟ್ ಆಗತ್ತಾ…?!” ಅಂತ.

“ಖಂಡಿತ ನಷ್ಟ ಅಂತೂ ಇಲ್ಲ ಸಾರ್. ಹೆಚ್ಚು ಜನ ಬರ್ತರೆ. ಹೆಚ್ಚೆಚ್ಚು ಜನಕ್ಕೆ ಹೊಟ್ಟೆ ತುಂಬ್ತಿದೆ. ನಮಗೂ ಅಲ್ಪ ಆದಾಯ. ಸಾಕು. ಮೊದಲಿಗೆ ವಾರಕ್ಕೆ ಒಂದು ದಿನ ಕಡಿಮೆ ರೇಟಿಗೆ ಹೀಗೆ ಕೊಡೋದಿಕ್ಕೆ ಶುರು ಮಾಡಿದ್ವಿ. ಈಗ ಪ್ರತಿದಿನ ಇದೇ ರೇಟು. ಜನ ಹೊಟ್ಟೆ ತುಂಬಿದ ನಂತರ ನಮ್ಮನ್ನ ಹರಸ್ತರೆ. ಅನ್ನದಾತ ಸುಖೀಭವ ಅಂತ. ಅವರದೆ ಶ್ರೀರಕ್ಷೆ…” ಅಂತದ್ರು. ಅವರ ಈ ಕಾಯಕ ಗ್ರೇಟ್ ಅನ್ನಸ್ತು.
ವಾ೨ಡೂ…

2 Responses

  1. narayanrbhat says:

    ೧೧ ನೇ ಕ್ರಾಸು.

  2. narayanrbhat says:

    ೧೫ ನೇ ಕ್ರಾಸ್ ( ೭ ನೇ ಕ್ರಾಸ್ ಅಲ್ಲ)

Leave a Reply

%d bloggers like this: