ಪೂರ್ಣ ವಿರಾಮದಲ್ಲಿ ಎಲ್ಲವೂ ಅಂತ್ಯ..

 

 

ನೇರ ಉತ್ತರ

-ಕೆ ನಲ್ಲ ತಂಬಿ

 

 

 

ಗೂನು ಬಿದ್ದ ಪ್ರಶ್ನೆಗಳಿಗೆ
ನೇರ ಉತ್ತರವನ್ನು
ಹೇಳುವುದಾದರೂ ಹೇಗೆ?
ಸೆಟೆದು ನಿಂತ
ಆಶ್ಚರ್ಯಗಳಿಗೆ
ಮುಗುಳ್ನಗೆಯೇ
ಸಾಕಾಗುವುದು!
ಕೆಳಗೆ ಬಗ್ಗಿ ಬಿದ್ದಿರುವ
ಅಲ್ಪ ವಿರಾಮವನ್ನು
ಯಾರೂ ಕಂಡುಕೊಳ್ಳುವುದೇ ಇಲ್ಲ,
ಅರ್ಧ ವಿರಾಮವನ್ನೋ
ಅರೆಮನಸ್ಸಿನೊಂದಿಗೆ
ದಾಟ ಬೇಕಾಗುತ್ತದೆ;
ತಲೆ ಮೇಲೆ ಹೊಡೆವ
ಪೂರ್ಣ ವಿರಾಮದಲ್ಲಿ
ಎಲ್ಲವೂ ಅಂತ್ಯವಾಗುವುದೇ ವಿಸ್ಮಯ.
ಸಾಲಾಗಿ ಸಾಲಿನಲ್ಲಿ ನಿಂತ ಅಧ್ಯಾಹಾರಗಳೋ
ಉತ್ತರಗಳನ್ನು ಹುಡುಕುತ್ತಲೇ
ಕಳೆದುಹೋಗುತ್ತವೆ
ಬದುಕಿನ ಪಯಣದಲ್ಲಿ……

2 Responses

  1. Bharathi B v says:

    ತುಂಬ ಇಷ್ಟವಾಯ್ತು ಸರ್

  2. Lalitha siddabasavayya says:

    ಲೇಖನ ಚಿನ್ಹೆಯೂ ಕವನವಾಗುವ ಪರಿ !! ವಾಹ್,

Leave a Reply

%d bloggers like this: