ಅವಳೆಡೆಗಿನ ಸೆಳೆತ.!

 

 

ವಿಜಯಕುಮಾರ್ ನೇರ್ವೆಕರ್

 

 

 

 

ಸಾಗರಿ

ಹೆಗಲ ಮೇಲೆ ಒರಗಿ,
ಬಿಗಿದಪ್ಪಿ ಕರಗಿ,
ನೀರಾಗಿ ಹರಿದಳು!
ನನ್ನೊಳಗೆ.

ನನ್ನೆದೆಯೀಗ ಸಾಗರ
ಅಲೆಗಳ ಏರಿಳಿತ
ಅವಳೆಡೆಗಿನ ಸೆಳೆತ!
ಬಲು ಜೋರು.

ಭಾವನೆಗಳ ಮಳೆ ಸುರಿಸಿ
ಅಳುವಾಗ ಅವಳು
ಉಕ್ಕಿ ಹರಿಯುವುದು!
ನನ್ನೆದೆಯ ಕಡಲು.

 

 

 

 

 

 

 

ಬೀಸದಿರಲಿ ಬಿರುಗಾಳಿ,
ಬರದಿರಲಿ ಪ್ರವಾಹ,
ದಡಸೇರಲಿ ಪ್ರೀತಿ!
ಸುಳಿಗೆ ಸಿಲುಕದೆ.

 

Leave a Reply