‘ಕನ್ನಡ ಸಿನಿಮಾ ಅಂತ ನೋಡಿ’ ಅನ್ನೋದಿದ್ಯಲ್ಲ..

ಸೌಮ್ಯ ಭಾಗವತ್ 

‘ಕನ್ನಡ ಸಿನಿಮಾ ಅಂತ ನೋಡಿ’ ಅನ್ನೋದಿದ್ಯಲ್ಲ “ಅಮ್ಮ ಭಿಕ್ಷೆ ಹಾಕಿ” ಅನ್ನೊ ಸೌಂಡು ಕೊಡತ್ತೆ…

ಒಳ್ಳೆ ಕನ್ನಡ ಸಿನಿಮಾ ಕೊಡಿ, ಒಂದು ಸಲ ಅಲ್ಲ ಹತ್ತಸಲ ಥಿಯೇಟ್ರಿಗೆ ಬಂದು ನೋಡ್ತೇವೆ..

ಅದ್ಬಿಟ್ಟು “ಫಿಲ್ಮ್ ಚೆನ್ನಾಗಿ ಮಾಡಿಲ್ಲ” ಅಂದ ತಕ್ಷಣ ಉರ್ಕೊಳ್ಳೋದಲ್ಲ!

ಪ್ರೇಕ್ಷಕ ಬೆಳಿತಿದಾನೆ.

ಮಲಯಾಳಮ್ ಸದಭಿರುಚಿಯ ಚಲನಚಿತ್ರಗಳನ್ನು ನೋಡಿದ ನಂತ್ರ ಕನ್ನಡದ ಚಿತ್ರಗಳು ನಿಜ ತುಂಬಾ ಸಪ್ಪೆ ಅನ್ಸೋಕೆ ಶುರುವಿಟ್ಟುಕೊಂಡಿದೆ.!

1 Response

  1. Kiran says:

    ‘ಕನ್ನಡ ಸಿನಿಮಾ ಅಂತ ನೋಡಿ’ ಅನ್ನೋದಿದ್ಯಲ್ಲ “ಅಮ್ಮ ಭಿಕ್ಷೆ ಹಾಕಿ” ಅನ್ನೊ ಸೌಂಡು ಕೊಡತ್ತೆ…ಅನ್ನೋ ಸ್ಮಾರ್ಟ್ ಲೈನು ನಮ್ಮ ಅಮ್ಮನಿಗೆ ಅಂಗವಿಲಕಲತೆ ಎಂದು ಪಕ್ಕದ ಬೀದಿಯ ಸುಂದರವಾದ ಆಂಟಿಯನ್ನು ಅಮ್ಮ ಅಂದು ಮನೆಯಲ್ಲಿ ತಂದು ಇಟ್ಟುಕೊಂಡಂತಿದೆ…ಅವರು ಯಾವಾಗಲೂ ಆಂಟಿಯೇ ಹೊರತು ಅಮ್ಮ ಆಗೋದಿಲ್ಲ ಅನ್ನೋದು ತಿಳಿದಿರಲಿ ಬುದ್ದಿವಂತರೇ…
    ಕೆಲವರಿಗೆ ತಾವು ಬುದ್ದಿವಂತರೆಂದು ತೋರಿಸಿಕೊಳ್ಳಲು ಕೆಲವು ಟ್ರಿಕ್ಗಳಿರುತ್ತವೆ, ಅದರಲ್ಲಿ ಮಲಯಾಳಂ ಸಿನಿಮಾ ನೋಡುತ್ತೇವೆ ಎಂದು ಬೊಂಬಡಾ ಹೊಡಿಯೋದು ಕೂಡಾ ಒಂದು, ಇದು ಒಂದು ಫೇಸ್ ನಲ್ಲಿ ಕಂಡುಬರುವ ಲಕ್ಷಣ..
    ನಮ್ಮ ಚಿತ್ರಗಳು ಎಲ್ಲವೂ ಚೆನ್ನಾಗಿರುವುದಿಲ್ಲ, ಮತ್ತು ಇನ್ನೂ ಪ್ರಭುದ್ಧವಾಗಬೇಕಿದೆ ಎನ್ನುವುದು ನಿಜ, ಆದರೆ ಅಲ್ಲಿಯವರೆಗೆ ನಮಗೆ ತಾಳ್ಮೆ ಇರಬೇಕು ಮತ್ತು ಸಧಭಿರುಚಿಯ ಒಳ್ಳೆಯ ಚಿತ್ರಗಳು ಬಂದಾಗ ಹುಡುಕಿ ಕಡ್ಡಾಯವಾಗಿ ನೋಡಿ ಪ್ರೋತ್ಸಾಹಿಸಬೇಕು ಅಷ್ಟೇ..
    ಮಲಯಾಳದಲ್ಲೂ ಸದಾ ಕಾಲಕ್ಕೂ ಒಳ್ಳೆಯ ಚಿತ್ರಗಳೇ ಬಂದಿವೆ ಅನ್ನುವುದು ಸುಳ್ಳು, ಒಳ್ಳೆಯ ಚಿತ್ರಗಳಿಲ್ಲ ಅಂದ ಮಾತ್ರಕ್ಕೆ ಅವರು ಕನ್ನಡ ಚಿತ್ರಗಳನ್ನೇ ಆಗಲಿ ಇನ್ಯಾವುದೇ ಚಿತ್ರಗಳನ್ನಾಗಲೀ ನೋಡಿ, ಅದನ್ನು ನಾನು ನೋಡಿದೆ ಎಂದು ಊರಿಗೆಲ್ಲಾ ಹೇಳಿಕೊಂಡು ತಿರುಗಲಿಲ್ಲಾ..

Leave a Reply

%d bloggers like this: