ಅವು ಸಿಕ್ಕಿ ಬಿಟ್ಟವು..

ಶಿಕ್ಷಕರ ದಿನ ಅಂತ ನಮಗೆ ಆಗ ನಮಗೇನು ಗೊತ್ತು,!?.

ಚೀಟಿ ಕೊಡ್ತಾರೆ ಅಂತ ಮನೆಯಲ್ಲಿ ಕಾಡಿ ತಂದ ನಾಲ್ಕಾಣೆ ಕೊಟ್ಟು ಪಡೆದು, ಆಗಲೆ ಹತ್ತಾರು ಮೊದಲ ಹಾಗೂ ಕೊನೆಯ ಪುಟಗಳು ಕಿತ್ತು ಹೋದ ಪುಸ್ತಕದ ಮಧ್ಯೆದಲ್ಲಿಟ್ಟು  ಖುಷಿ ಪಡುತ್ತಿದ್ದೇವು.

ಈ ದಿನದ‌ ನೆವಕ್ಕೊನೆ ಎಂಬಂತೆ ಸಿಕ್ಕಿ ಬಿಟ್ಟವು.

ನೆನಪು ಸಿಹಿಯಾಯ್ತು. ಬಾಲ್ಯ ಮತ್ತೊಮ್ಮೆ ಬಂದು ಕಾಡಿತು.

ಚೀಟಿಯೂ ಬದಲಾಗಿದೆ, ಅದರ ಬೆಲೆಯೂ ಜಾಸ್ತಿಯಾಗಿದೆ. ಗುರುವೂ ಬದಲಾಗಿದ್ದಾನೆ.

ಎಷ್ಟೇ ಬದಲಾದರೂ ಬಾಲ್ಯದ ಆ ಸವಿಯ ಮೀರಿಸುವ ತೂಕ ಯಾವುದಕ್ಕಿದೆ. ಹೇಳಿ!?

-ಸದಾಶಿವ್ ಸೊರಟೂರು 
ಶಿಕ್ಷಕರು 
ಚಿಂತಾಮಣಿ

1 Response

  1. Santosh Mudakavi says:

    Super subject

Leave a Reply

%d bloggers like this: