ಇದು ಒಬ್ಬರು ಕಲಬುರಗಿ, ಒಬ್ಬರು ಗೌರಿ ಲಂಕೇಶ್ ಅವರ ಹತ್ಯೆಅಲ್ಲ..

ಖಂಡನೀಯ ಕೃತ್ಯ

ಗುಂಡಣ್ಣ
ಕಾರ್ಯದರ್ಶಿ
ಸಮುದಾಯ ಬೆಂಗಳೂರು

ಮನೆಯ ತಲೆಬಾಗಿಲ ಹತ್ತರ ನಿಂತಿದ್ದ, ಪ್ರಗತಿಪರ ನಿಲುವುಗಳ, ಕೋಮು ಸಂಘಟನೆಗಳ ವಿರುದ್ದ ನಿರಂತರವಾಗಿ, ನಿರ್ಭಯವಾಗಿ ಸಮರಧೀರ ಹೋರಾಟ ನಡೆಸಿತ್ತಿದ್ದ ಹೋರಾಟಗಾರ್ತಿ ಗೌರಿ ಲಂಕೇಶ್ ಅವರನ್ನು ಮೂವರು ಮುಸುಕು ಧಾರಿಗಳು ಬರ್ಬರವಾಗಿ ಗುಂಡೇಟಿನ ದಾಳಿ ನಡೆಸಿ, ಹತ್ಯೆಗೈದಿದ್ದಾರೆ.

ಇಂದು ರಾತ್ರಿ ಸರಿ ಸುಮಾರು ಎಂಟು ಘಂಟೆ ಹತ್ತು ನಿಮಿಷದ ಹೊತ್ತಿಗೆ, ಅವರ ಮನೆಯ ಅಂಗಳದಲ್ಲೇ ಈ ಖಂಡನೀಯ ಕೃತ್ಯ ನಡೆದಿದೆ. ಕಾರಣ ಸ್ಷಟಿಕದಷ್ಟು ಸ್ಪಷ್ಟ ವಾಗಿದೆ. ಅವರ ನಿರಂತರವಾದ ಪ್ರಗತಿಪರ ನಿಲುವುಗಳು, , ಕೋಮು ಸೌಹಾರ್ದತೆಯ ಪರವಾದ ನಿಲುವೇ ಅವರನ್ನು ಬಲಿ ತೆಗೆದುಕೊಂಡಿದೆ.

Whatsapp ನಲ್ಲಿ , facebookನಲ್ಲಿ ಚರ್ಚೆಯ ಸಂದರ್ಭಗಳಲ್ಲಿ ಅವರನ್ನು ಹೀನಾಯವಾಗಿ , ಅವಹೇಳನ ಕಾರಿಯಾಗಿ, ಅಶ್ಲೀಲಕರವಾಗಿ ನಿಂದನೆಮಾಡುತ್ತಿದ್ದ ದೊಡ್ಡ ಗುಂಪಿಗೆ ಇಂದು ನಡೆದಿರುವ ಇವರ ಹತ್ಯೆ ಸಂತೋಷವನ್ನು ಉಂಟು ಮಾಡಿರಬಹುದು.

ಕಲ್ಬುರ್ಗಿ ಅವರ ಹತ್ಯೆಯಾಗಿ, ಆಗಸ್ಟ್ 30ಕ್ಕೆ ಎರಡು ವರುಷ ತುಂಬಿತು;
ಇನ್ನೂ ಅವರ ಕೊಲೆಗಾರರು ಪತ್ತೆಯಾಗಿಲ್ಲ
ಪತ್ತೆ ಹಚ್ಚಿ ಆರೋಪಿಗಳನ್ನು ಕಟಕಟೆಗೆ ತರಬೇಕು ಎಂದು ನಡೆದ ಎಲ್ಲ ಪ್ರಗತಿಪರ ಸಂಘಟನೆಗಳ ಮತ ಪ್ರದರ್ಶನದಲ್ಲಿ ಗೌರಿ ಲಂಕೇಶ್ ಸಹ ಪ್ರಮುಖ ಪಾತ್ರ ವಹಿಸಿದ್ದರು
ವಿಪರ್ಯಾಸವೆಂದರೆ, ಕೇವಲ ಆರು ದಿನಗಳಲ್ಲಿ, ಕಲಬುರಗಿ ಅವರನ್ನು ಹತ್ಯೆಗೈದ ರೀತಿಯಲ್ಲೇ ಗೌರಿ ಅವರನ್ನೂ ಕೊಲೆ ಮಾಡಿದ್ದಾರೆ ದುರಳರು*

ಇದು ಒಬ್ಬರು ಕಲಬುರಗಿ, ಒಬ್ಬರು ಗೌರಿ ಲಂಕೇಶ್ ಅವರ ಹತ್ಯೆಅಲ್ಲ.
ಇದು ಪ್ರಗತಿಪರ ಚಿಂತನೆಗಳ, ಜಾತ್ಯಾತೀತ ಸಮಾಜದ ವ್ಯವಸ್ಥೆಯ ಕಗ್ಗೊಲೆ. ಹೋರಾಟಗಳನ್ನು ಹತ್ತಿಕ್ಕುವ ಕೃತ್ಯಗಳು.

ನಾಡಿನ ಎಲ್ಲ ಪ್ರಗತಿಪರರು, ಪ್ರಗತಿಪರ ಸಂಘಟನೆಗಳು, ಜಾತ್ತಾತೀತ ಮೌಲ್ಯಗಳಲ್ಲಿ ನಂಬಿಕೆ ಇಟ್ಟಿರುವ ಎಲ್ಲ ನಾಗರೀಕರು, ಸಂಘಟನೆಗಳು ಒಂದಾಗಬೇಕಿರುವ ಮೂರ್ತ ಸಮಯವಿದಾಗಿದೆ. ಪಕ್ಷ, ಸಿದ್ದಾಂತಗಳ ಭೇದವನ್ನು ಮರೆತು ಒಂದಾಗಬೇಕಾದ ಅನಿವಾರ್ಯತೆ ನಮ್ಮೆಲ್ಲರ ಮುಂದಿದೆ

ಕಲಬುರಗಿ, ಗೌರಿ ಅವರ ಹತ್ಯೆಯಿಂದ ಯಾವ ಸಂಘಟನೆಗಳು, ವ್ಯಕ್ತಿಗಳು ಈ ಅನಾಗರೀಕ, ಅಸಾಂಸೃತಿಕ ಕಾರ್ಯವೆಸಗಿದ್ದರೋ, ಅವರುಗಳು ನಮ್ಮನ್ನು ಹೆದರಿಸಿ, ನಮ್ಮ ಬಾಯ್ಕಟ್ಟುತ್ತೇವೆ ಎಂದು ಭಾವಿಸಿದ್ದರೆ, ಅದು ಅವರ ತಪ್ಪು ತಿಳುವಳಿಕೆ
ಹುತಾತ್ಮರ ಸಾವಿನಿಂದ ಪ್ರಗತಿಪರ ಸಂಘಟನೆಗಳು ಮತ್ತಷ್ಟು ಬಲಿಷ್ಟವಾಗುತ್ತವೆ.

ಹೋರಾಟದ ದಾರಿ ಸುಗಮವಾಗುತ್ತದೆ. ಕರಾಳ ದಿನಗಳ ಬದಲಿಗೆ ಮುಂಬರುವ ದಿನಗಳು ಆರೋಗ್ಯ ಪೂರ್ಣ ದಿನಗಳು ಉದಯಿಸುತ್ತವೆ.

ಸಮುದಾಯ ಬೆಂಗಳೂರು ರಂಗ ತಂಡವು ಈ ಹತ್ಯೆಯನ್ನು ನೇರವಾಗಿ ಖಂಡಿಸುತ್ತದೆ

ಎಲ್ಲ ರಂಗ ತಂಡಗಳೂ ಕೂಡಿ, ಕೂಡಲೇ ಪ್ರತಿಭಟನಾ ಕಾರ್ಯಕ್ರಮಗಳ ಮುಖಾಂತರ ಅಗಲಿದ ಸಂಗಾತಿಗೆ ನಮನಗಳನ್ನು ಸಲ್ಲಿಸಬೇಕಿದೆ. ಬೇರೆ ಪ್ರಗತಿಪರ ಸಂಘಟನೆಗಳು ಹಮ್ಮಿಕೊಳ್ಳುವ ಪ್ರತಿಭಟನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕಿದೆ.

Leave a Reply