ಗೌರಿಯ ಪಯಣ…

ಅಭಿಮನ್ಯು ಭೂಪತಿ

ಸರಿ ರಾತ್ರಿಯಾಗಿತ್ತು
ಹೊರಗೆ ನಾಯಿಗಳ ಊಳು
ಮಳೆ ಸುರಿವ ಸದ್ದು
ಯಾರೋ ಹಾಡಿದ ಹಾಗಾಯಿತು
ಹಾದಿಹೋಕರಿರ ಬೇಕೆಂದುಕೊಂಡೆ
ಮೆಲುದನಿಯಲ್ಲಿ ‘ವೈಷ್ಣವ ಜನತೋ’ ಕೇಳಿಸಿತು
ಯಾರಿರಬಹುದೆಂದು ಕಿವಿ ನಿಮಿರಿತು
ಗೊತ್ತಾಯಿತು! ಬಾಪೂ ಎಂದು.
ಆದರೆ ಇಲ್ಲಿ ಇಷ್ಟುಹೊತ್ತಲ್ಲಿ?
ತಿಳಿಯಿತು! ತಿಳಿಯಿತು!
ಪರಂಪರೆಯ ಗರ್ಭದಿಂದೆದ್ದು ಬಂದಿದ್ದರು ಬಾಪೂ
ಗೌರಿಯ ಕೈ ಹಿಡಿದು ಕರೆದೊಯ್ಯಲು ತನ್ನ ಮನೆತನಕ.

Leave a Reply