ಈ ಭಾನುವಾರ ‘ರಕ್ತವರ್ಣೆ’

 

ರಘುನಂದನ್ ಸದಾ ನಮ್ಮ ನಡುವೆಯೇ ಇರುವ ಸರಳ ಸಜ್ಜನಿಕೆಯ ಹುಡುಗ. ಎಲ್ಲರೊಂದಿಗೆ ಸ್ನೇಹದಿಂದಿರುವ, ಸದಾ ಯಾವುದೋ ಅನ್ವೇಷಣೆಯಲ್ಲಿರುವ ಮುಖಭಾವದಲ್ಲಿ ಮುಗ್ಧತೆ ಹಾಗೂ ವಿವೇಕಗಳೆರಡೂ ಸಂದರ್ಭಾನುಸಾರವಾಗಿ ಅವರಲ್ಲಿ  ಹೊರ ಹೊಮ್ಮುತ್ತಿರುತ್ತವೆ.

ಗಂಡಿನೊಳಗಣ ಹೆಣ್ಣು, ಹೆಣ್ಣಿನೊಳಗಣ ಗಂಡು ಗುಣಗಳು ಸಂದರ್ಭಾನುಸಾರಿಯಾಗಿ ಹೊರ ಹೊಮ್ಮುತ್ತವಷ್ಟೆ. ಈ ನಾಟಕದಲ್ಲಿ ಪುರುಷ ರೂಪದ ವಲ್ಲೀಶನ ಒಳಗೆ ನಡೆಯುವ ಮನೋ ಸಂಘರ್ಷ, ಸ್ತ್ರೀ ರೂಪದ ಸೇವಂತಿಯೊಳಗಿನ ದೇಹ ಮತ್ತು ಮನಸ್ಸಿನ ವಾಂಛೆಗಳ ಸಂಘರ್ಷಗಳನ್ನು ನಾಟಕಕಾರ ಹಿಡಿಯುವ ಪ್ರಯತ್ನ ಮಾಡಿದ್ದಾರೆ. ಗಂಡಾಗಿ, ಹೆಣ್ಣಿನ ಶರೀರದ ಸಂವೇದನೆಗಳನ್ನು ನಾಟಕಕಾರರು ಕಾವ್ಯರೂಪಿ ಭಾಷೆಯಲ್ಲಿ ಹಿಡಿಯಲೆತ್ನಿಸಿದ್ದಾರೆ.

ವೈದಿಕ ? ಶೂದ್ರವೆನ್ನುವ ಸಂಕರದಲ್ಲಿಯೂ ಉಳಿಯುವ ಗಂಡು ಹೆಣ್ಣಿನ ಮೈ ಮನಗಳ ಸಂಘರ್ಷ ಎಲ್ಲಾ ಕಾಲದಲ್ಲಿಯೂ ಕಾಡುವಂತದ್ದಾಗಿದೆ. ಇಂತಹ ಸೂಕ್ಷ್ಮವಾದ ಎಳೆಯೊಂದನ್ನು ರಘುನಂದನ್ ಸಂಘರ್ಷದ ನಂತರವೂ ಸ್ವಸ್ಥವಾದ ಬದುಕು ಸಾಧ್ಯ ಎನ್ನುವಂತೆ ಕಾವ್ಯ ನಾಟಕ ರೂಪದಲ್ಲಿ ಸಮರ್ಥವಾಗಿ ರಕ್ತವರ್ಣೆಯಲ್ಲಿ ಹಿಡಿದಿಟ್ಟಿದ್ದಾರೆ.

-ಡಾ. ಎಚ್.ಎಲ್. ಪುಷ್ಪ

 

 

Leave a Reply