‘ಸ್ವಸ್ತಿ’ ಕಾದಂಬರಿ ಸ್ಪರ್ಧೆ  

ಸ್ವಸ್ತಿ ಪ್ರಕಾಶನದ  ಕಾದಂಬರಿ  ಸ್ಪರ್ಧೆ

ಸ್ವಸ್ತಿ ಪ್ರಕಾಶನವು ಹೊಸ ಕಾದಂಬರಿಕಾರರನ್ನು ಬೆಳಕಿಗೆ ತರುವ ಉದ್ದೇಶದಿಂದ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ಇದುವರೆಗೆ ಒಂದೂ ಕಾದಂಬರಿ ಹೊರ ತಂದಿರದ ಲೇಖಕರಿಗೆ ಮಾತ್ರ ಅವಕಾಶ.

ಸಾಹಿತ್ಯದ ಇತರ ಪ್ರಕಾರಗಳಲ್ಲಿ ಒಂದೆರಡು
ಪುಸ್ತಕಗಳು ಹೊರಬಂದಿದ್ದರೆ  ಪರವಾಗಿಲ್ಲ.

ತಮಗೆ ಉತ್ತಮವೆನ್ನಿಸಿದ ಸುಮಾರು ೧೪೦ರಿಂದ ೧೮೦ ಪೇಜ್ (ಪಾಂಟ್ ಸೈಜ್ 12)  ಅಪ್ರಕಟಿತ ಸ್ವಂತ ಕಾದಂಬರಿಯನ್ನು ಡಿಟಿಪಿ ಮಾಡಿಸಿ ಕಳುಹಿಸಬೇಕು. ಹಸ್ತಪ್ರತಿಯನ್ನು ಯಾವುದೇ ಕಾರಣಕ್ಕೂ ಹಿಂತಿರುಗಿಸಲಾಗುವುದಿಲ್ಲ.

ಆಯ್ಕೆಯಾದ ಕಾದಂಬರಿಕಾರರಿಗೆ ಐದುಸಾವಿರ ರೂಪಾಯಿ ನಗದು ಬಹುಮಾನ ಮತ್ತೆ ಪ್ರಶಸ್ತಿ ಪತ್ರ ಕೊಟ್ಟು ಅಭಿನಂದಿಸಲಾಗುವುದು.

ಕಾದಂಬರಿಯನ್ನು ಸ್ವಸ್ತಿ ಪ್ರಕಾಶನವು ಪ್ರಕಟಿಸುತ್ತದೆ. ಪ್ರಶಸ್ತಿಯ ಮೊತ್ತದ ಜೊತೆಗೆ  25 ಪುಸ್ತಕಗಳನ್ನು ಲೇಖಕರು
ಪಡೆದುಕೊಳ್ಳಬಹುದು. ಈ ಪ್ರಶಸ್ತಿಯನ್ನು ನವೆಂಬರ್  ಕೊನೆಯಲ್ಲಿ ಪ್ರಕಟಿಸಲಾಗುವುದು.

ಕಾದಂಬರಿಯನ್ನು ಕಳಿಸಲು ಕೊನೆಯ ದಿನಾಂಕ:  ಅಕ್ಟೋಬರ್ ೫,೨೦೧೭

ಕಳಿಸಬೇಕಾದ ವಿಳಾಸ

ಸ್ವಸ್ತಿ ಪ್ರಕಾಶನ,
“ಐಸಿರಿ”
ರಾಷ್ಟ್ರೀಯ ಹೆದ್ದಾರಿ 66. ಹೊಸ ಬಸ್ ನಿಲ್ದಾಣದ ಹತ್ತಿರ
ಕುಮಟಾ. (ಉತ್ತರ ಕನ್ನಡ)
ಮೊಬೈಲ್ ನಂಬರ  ೯೪೮೩೬೧೭೮೭೯​ / ೯೯೪೫೫೪೬೬೧೫​

swastiprakashana@gmail.com

 

 

Leave a Reply