ಗೌರಿಗಾಗಿ ಸಜ್ಜಾಗುತ್ತಿದೆ ಕೊಡೆಗಳು ..

 

ಗೌರಿ ಲಂಕೇಶ್ ಹತ್ಯೆ ವಿರೋಧಿಸಿ ನಾಳೆ ಬೆಂಗಳೂರಿನಲ್ಲಿ ಬೃಹತ್ ಪ್ರತಿರೋಧ ಸಮಾವೇಶ ಜರುಗುತ್ತಿದೆ.

ಇದಕ್ಕೆ ಪೂರ್ವಭಾವಿಯಾಗಿ ಇಂದು ಸಾವಿರಾರು ಕೊಡೆಗಳಿಗೆ ಗೌರಿ ಭಾವಚಿತ್ರ ಬಿಡಿಸುವ ಕೆಲಸ ಆರಂಭವಾಗಿದೆ.

ನಾಳಿನ ಮೆರವಣಿಗೆಯಲ್ಲಿ ಪ್ರತಿಭಟನಾಕಾರರು ಈ ಕೊಡೆಗಳನ್ನು ಹಿಡಿದು ಹೆಜ್ಜೆ ಹಾಕಲಿದ್ದಾರೆ.

ನಂತರ ಸಮಾವೇಶದ ಸ್ಥಳದಲ್ಲಿ ಕಲಾವಿದರು ಸೇರಿ ಈ ಕೊಡೆಗಳಿಂದಲೇ ಪ್ರತಿಷ್ಠಾಪನಾ ಕಲೆಯನ್ನು ರೂಪಿಸಲಿದ್ದಾರೆ

ನಗರದ ಕಲಾವಿದರು ಚಿತ್ರಕಲಾ ಪರಿಷತ್ ನಲ್ಲಿ ಬಂದು ಸೇರುತ್ತಿರುವ ಕೊಡೆಗಳ ಮೇಲೆ ನಾನೂ ಗೌರಿ ಎನ್ನುವ ಬರಹ ಬರೆದು ಅವರ ಚಿತ್ರ ಬಿಡಿಸುತ್ತಿದ್ದಾರೆ

 

 

 

 

 

 

 

 

 

Leave a Reply