ಕಟಕಟೆಯಲ್ಲಿ ನಿಂತ ಕವಿತೆ..

 

 

ಕೆ. ಸಚ್ಚಿದಾನಂದನ್

ಕನ್ನಡಕ್ಕೆ: ಚಿದಂಬರ ನರೇಂದ್ರ 

 

 

 

ಮರಿ,
ತೊಗೋ ಈ ಕಿತ್ತಳೆ ಹಣ್ಣು
ಗಫೂರ್ ನ ಕೊಲ್ಲಬೇಡ
ಅವ ನನ್ನ ಮೊಮ್ಮಗ.

ಮರಿ,
ತೊಗೋ ಈ ಸೇಬು
ಇಸ್ಮಾಯಿಲ್ ನ ಬಿಟ್ಟು ಬಿಡು
ಆವಾ ನನ್ನ ಸಂಬಂಧಿ.

ಮರಿ,
ಈ ಆಲಿವ್ಸ್ ತೊಗೋ
ನಿಸ್ಸಾರ್ ಗೆ ಏನು ಮಾಡಬೇಡ
ಅವನು ಒಳ್ಳೆಯ ಹುಡುಗ.

ಕೊಲ್ಲಲೇ ಬೇಕಾದರೆ
ಈ ಮುದುಕಿಯನ್ನು ಕೊಲ್ಲು
ಮಾತು ಸತ್ತ ಊರಿನಲ್ಲಿ
ಈ ಮಾತಿನ ಮಲ್ಲಿಗೇನು ಕೆಲಸ?

ದೇವರನ್ನೂ ಕೊಲ್ಲು
ಅವನಿಗೂ ಬಂದೂಕಿನ ಹೊಗೆ
ಆಗಿ ಬರುವುದಿಲ್ಲ.

ಅವಳ ರಕ್ತದೊಂದಿಗೆ ಚಿಮ್ಮಿದೆ
ನನ್ನ ಭಾಷೆ,
ಸಿಡಿದ ಗುಂಡಿನ ಚೂರುಗಳು
ನನ್ನ ಅಕ್ಷರಗಳನ್ನು ಘಾಸಿ ಮಾಡಿವೆ,
ನನ್ನ ಕವಿತೆಯಿಂದ ರಕ್ತ ಸೋರುತ್ತಿದೆ.

ಕಟಕಟೆಯಲ್ಲಿ ನಿಂತ ಕವಿತೆ
ವಿಷದ ಗಾಳಿಯನ್ನು
ಸಹಿಸಿಕೊಳ್ಳದೆ ಹೋದರೆ ಹೇಗೆ?

( Based on an incident in the recent Syrian civil war where an old woman, distributing fruits to government soldiers, pleaded for the life of radical democrats)

1 Response

  1. ರೇಣುಕಾ ರಮಾನಂದ says:

    ಅದ್ಭುತ ಸಾಲುಗಳು

Leave a Reply

%d bloggers like this: