ಆರತಿ ‘ಸ್ಮೋಕಿಂಗ್ ಜೋನ್’

 

 

ಆರತಿ.ಎಚ್.ಎನ್

 

 

 

 

 

 

 

ಗದ್ದಲದ ಜಗತ್ತಿನಲ್ಲಿ ಪ್ರೇಮಕ್ಕುಳಿದಿದೆ
ಬಟ್ಟಲು ಶರಾಬಿನಷ್ಟೇ
ಸಮಯ!
ಹೊರಡಬೇಕಿದೆ ನೀನಿನ್ನು
ಸಂಚಾರಿ, ನಿಶಾಚಾರಿ!
ಜೀವ ಹೋಗುತ್ತದೆ
ನಿನ್ನೊಂದಿಗೆ ಎನಿಸುವ
ವ್ಯಾಮೋಹಕ್ಕೆ ವಿಷಾದ
ವಿರಹ ವಿಷ ಬೆರೆತ
ಹನಿ ಹನಿ ಗುಟುಕರಿಸುತ್ತಿದ್ದೇವೆ
ಇಬ್ಬರೂ…
ಕಣ್ಣಲ್ಲ ಅದು, ನೋಟವೂ ಅಲ್ಲ,
ಸುಡುವ ಅಗ್ಗಿಷ್ಟಿಕೆ ಕೆಂಡ
ಸೇದ ಬೇಕಿದೆ
ಧೂಮ, ಧೂಳಿಪಟ
ದಾಹವೋ, ದೇಹವೋ
ತಿಳಿಯದ ಲೋಕ!
ಹೊಗೆಯಡರಿದೆ
ಸುರುಳಿ ಸುತ್ತಿದೆ
ಹಬೆ ಮಂಪರೂ…
ಬೆರಳ ನಡುವೆ
ನಡುಗುವ ನವಿರು,
ಅದು ಸಿಗರೇಟು ಎನ್ನಬೇಡ.
ತುಟಿಗೆ ಅಂಟಿಸಿ
ಸುಂಟರ ತಿರುಗಿ
ಬೀಳುವುದೋ, ತೇಲುವುದೋ
ಕೆಂಪಾಗಿದೆ, ನಭ ನೀಲಾಕಾಶ!
ಬೂದಿ ಕೊಡವಿ ಎದ್ದಾಗ
ಮೋಡ ಕವಿದು
ಇರುವ ಸೂರ್ಯನೂ ಆರಿ,
ನಿಗಿನಿಗಿ ನೀನು
ಈಗ ಥೇಟ್, ಅನವರತ
ಉರಿಯುತ್ತಿರುವ
ಮೋಹಕ ಸಿಗರೇಟ್!

 

 

 

 

 

2 Responses

  1. K Nalla Thambi says:

    nice…

  2. Shari says:

    loved it!

Leave a Reply

%d bloggers like this: