ಏಕತಾರಿಯ ಮೀಟಿ ಅಲೆಮಾರಿಯಾಗಿದ್ದಾನೆ..

ಇತಿಹಾಸ

ಕವಿ,

ಹೆಣ್ಣಿನ ಕಣ್ಣೀರಲ್ಲಿ ಕಾವ್ಯಬರೆದು

ಸುಟ್ಟು ಹೋಗಿದ್ದಾನೆ.

 

ಕಥೆಗಾರ,

ಹೆಣ್ಣಿನ ಕಥೆ ಹೇಳುತ್ತಲೇ

ಗಾಳಿಯ ಕೊರಳಲ್ಲಿ

ಏಕತಾರಿಯ ಮೀಟಿ

ಅಲೆಮಾರಿಯಾಗಿದ್ದಾನೆ.

ಪೂಜಾರಿ,

ಹೆಣ್ಣಿಗೆ ಗುಡಿಕಟ್ಟಿ

ಗಂಟೆ ಅಲ್ಲಾಡಿಸುತಲೇ

ನಿಂತು ನಿತ್ರಾಣನಾಗಿದ್ದಾನೆ.

 

ರಾಜ,

ಹೆಣ್ಣನ್ನು ಅಂತಃಪುರದಲ್ಲಿರಿಸಿ

ಕೋಟೆ ಕೊತ್ತಲಗಳಡಿಯಲ್ಲಿ

ಮಣ್ಣಾಗಿ ಹೋಗಿದ್ದಾನೆ.

 

ಸಂನ್ಯಾಸಿ,

ಮಠದೂಳಗೆ ಬೆಕ್ಕು ಸಾಕಿ

ಸಂಸಾರಿಯಾಗಿದ್ದಾನೆ.

 

ಸಂತ,

ನಡೆದೂ, ನಡೆದೂ,

ಕೈಯಾಸರೆಯಾದ ಕೋಲೂರಿ

ಬೆಂದು ಬಂದ ಅಬಲೆಯರೊಂದಿಗೆ

ನೆರಳಾಗಿದ್ದಾನೆ.

 

ಹೆಣ್ಣನರಿತ ಗಂಡು,

ತಾನೇ ಹೆಣ್ಣಾಗಿ

ಸಾವಿರ ಸಂತತಿಯ ಕನಸ ನೇಯುತ್ತಾನೆ.

6 Responses

 1. Dadapeer P Jyman says:

  super madam

 2. ಹೆಣ್ಣನರಿತ ಗಂಡು ತಾನೂ ಹೆಣ್ಣಾಗಿ
  ಸಾವಿರ ಸಂತತಿಯ ಕನಸ ನೇಯುತ್ತಾನೆ
  ಇಡೀ ಪದ್ಯದ ಶಕ್ತಿ ಅಡಗಿರುವುದು ಈ ಸಾಲುಗಳಲ್ಲಿ
  ಅತ್ಯಂತ ಅರ್ಥಪೂರ್ಣ
  ಮಾರ್ಮಿಕ
  ಹಾಗೂ
  ಸಾರ್ವಕಾಲಿಕ ಪದ್ಯ

 3. H.R.sujatha says:

  Tnku sir

 4. Shama Nandibetta says:

  ಏಕತಾರಿಯ ಮೀಟಿ

  ಅಲೆಮಾರಿಯಾಗಿದ್ದಾನೆ.

  Masth..

 5. Vanita satish says:

  Super Sujatha madam ಅದ್ಭುತ ಸಾಲುಗಳು

 6. H.R.sujatha says:

  Tnku vanita

Leave a Reply

%d bloggers like this: