ದಪಾಟಿ ಅಂತನ ಅನ್ರೀ..

 

 

 

 

 

 

 

ಜಯಲಕ್ಷ್ಮಿ ಪಾಟೀಲ್ 

ದಪಾಟಿ ನೋಡಿ ಹೊಟ್ಟಿ ಎರಡಾದ್ವು ನಿನ್ನೆ ನನಗ. 😋

ನಿನ್ನೆ ಜಯನಗರದಲ್ಲಿರೊ (ಟೋಟಲ್ ಕನ್ನಡ ಡಾಟ್ ಕಾಮ್ ಹತ್ತಿರ) ವೆಂಕಟೇಶ್ವರ ಖಾನಾವಳಿಗೆ ಊಟಕ್ಕೆ ಹೋಗಿದ್ದ್ವಿ. ಅಲ್ಲಿ ಯಾವುದೇ ರೀತಿಯ ಅತಿ ಮಸಾಲೆಗಳನ್ನು ಹಾಕದ ಅಚ್ಚ ಉತ್ತರ ಕರ್ನಾಟಕದ ಊಟ ಸಿಗುತ್ತೆ. ಬೆಲೆ ಸಹ ಉತ್ತರ ಭಾರತದ ಊಟದ ಬೆಲೆಯ ಕಾಲುಭಾಗದಷ್ಟು! ಇತ್ತೀಚಿನ ಒಂದೆರಡು ವರ್ಷಗಳಿಂದ ಕೇವಲ ಜೋಳದ ರೊಟ್ಟಿ ಮಾತ್ರವಲ್ಲದೆ ಅಕ್ಕಿ ರಾಗಿ ಗೋದಿ ರೊಟ್ಟಿಗಳೂ ಅಲ್ಲಿ ಲಭ್ಯವಾಗತೊಡಗಿದವು. ಊಟದ ರುಚಿ ಮಾತ್ರ ಎಂದಿನಂತೆ ಅದೇ ಸ್ವಚ್ಛ ಸ್ವಾದಿಷ್ಟ.

“ನಿನ್ನೆ ಮಸಾಲಿ ರೊಟ್ಟಿ ಕೊಡ್ಲಿರೀ ಮೇಡಂ?” ಅಂದ್ರು ಅಲ್ಲಿನ ಊಟ ಬಡಿಸೋರು. ನನಗೆ ಕುತೂಹಲ. “ಮಸಾಲೆ ರೊಟ್ಟಿ ರೀ? ಏನದು?”
“ದಪಾಟಿ ರೀ ಮೇಡಂ” ಅಂದ್ರು ಅವ್ರು ನಗುತ್ತಾ. ಆಹಾ ಹೆಸರು ಕೇಳಿಯೇ ನನ್ನ ಹೊಟ್ಟೆ ಎರಡಾದ್ವು. 😊
“ದಪಾಟಿ ಅಂತನ ಅನ್ನ್ರಿ. ಹಂಗೆಲ್ಲ ಮಂದಿ ಅನುಕೂಲಕ್ಕಂತ ಛಂದನ್ನ ಹೆಸರು ಬದಲಿಸಬ್ಯಾಡ್ರಿ ಪ್ಲೀಸ್” ಅಂತ ರಿಕ್ವೆಸ್ಟ್ ಮಾಡಿ ಬಂದಿದೀನಿ.

ಅರಿಯದ ಹೆಸರು ಕೇಳಿ ಜನ ಎಲ್ಲಿ ಟೇಸ್ಟ್ ಹೇಗಿರುತ್ತೋ ಏನೋ ಅಂತ ನಿರಾಕರಿಸಿಬಿಡ್ತಾರೋ ಅನ್ನುವ ಸಹಜ ಆತಂಕ ಅವರದು. ದಪಾಟಿಯನ್ನು ಮಸಾಲ ರೊಟ್ಟಿಯ ಹೆಸರಲ್ಲಿ ಪಡೆದಿದ್ದ ಪಕ್ಕದ ಟೇಬಲ್ಲಿನವರು ಮತ್ತದೇ ಬೇಕೆಂದು ಆರ್ಡರ್ ಮಾಡಿದ್ದನ್ನು ಕಂಡೆ. 😊

ಚಿತ್ರದಲ್ಲಿ ಕಾಣುತ್ತಿರುವ ಹಳದಿ ಬಣ್ಣದ ರೊಟ್ಟಿಯೇ ದಪಾಟಿ.

ಅದು ಬಹುಧಾನ್ಯವುಳ್ಳ ತಂಪು ಮಸಾಲಾ ಪದಾರ್ಥಗಳನ್ನೊಳಗೊಂಡ ತುಸುವೆ ಖಾರವಿರೊ ರೊಟ್ಟಿ.

ಮುಂದಿನ ಸಲ ವೆಂಕಟೇಶ್ವರ ಖಾನಾವಳಿಗೆ ಹೋದಾಗ ದಪಾಟಿಯನ್ನು ಕೇಳಿ ಪಡೆಯುವುದನ್ನು ಮರೀಬೇಡಿ. ಉತ್ತರ ಕರ್ನಾಟಕದ ಊಟವನ್ನ ಎಂಜಾಯ್ ಮಾಡಿಬನ್ನಿ.

2 Responses

  1. akshata deshpande says:

    hahahaha. jaya enjoyed a lot. food was really tasty. had dhapati first time. very authentic food. feelng like reuesting them to open a branch in mumbai

  2. ಸಂತೋಷ ತಾಮ್ರಪರ್ಣಿ says:

    ‘ಧಪಾಟಿ’ ಶಬ್ದ ಕೇಳಿ/ನೋಡಿ ಭಾಳ್ ದಿನಾ ಆಗಿತ್ತು. ಅದನ್ನ ತಿಂದು ಭಾಳ ವರ್ಷ ಆಗ್ಯಾವ!

Leave a Reply

%d bloggers like this: