ಅದೇ ಮೊದಲು ಮತ್ತು ಅದೇ ಕಡೆ..

 

 

 

ಬಿ.ವಿ ಭಾರತಿ

 

 

 

ಅವತ್ತು ಗೆಳತಿಯೊಬ್ಬಳು ‘ಯು ಆರ್ ಸರ್’ ಅವರನ್ನು ನೋಡಬೇಕು ಎಂದಾಗ ಅವರ ಆರೋಗ್ಯದ ಸ್ಥಿತಿ ಅರಿತ ನಾನು ಬಹಳ ಸಂಕೋಚದಿಂದಲೇ ಫೋನ್ ಮಾಡಿದ್ದೆ. ಅವರು ತಮ್ಮ ಎಂದಿನ ಮೃದು ದನಿಯಲ್ಲಿ ‘ಇವತ್ತು ತುಂಬ ಜನ ಬರುವವರಿದ್ದಾರೆ … ‘ ಅಂತ ಅನುಮಾನಿಸಿದವರು ‘ಪರವಾಗಿಲ್ಲ ಬಾ, ಹೇಗೋ ಎಲ್ಲರೂ ಕೂಡಿಯೇ ಮಾತಾಡಿದರಾಯ್ತು’ ಅಂದಿದ್ದರು.

ನಾವು ಅಲ್ಲಿಗೆ ಹೋದಾಗ ‘ಅಭಿನವ’ದ ಚಂದ್ರಿಕಾ ಶೂಟಿಂಗ್ ಸಿದ್ದತೆ ನಡೆಸಿದ್ದರು. ನಾವು ಅಲ್ಲೇ ಮೆಟ್ಟಿಲ ಮೇಲೆ ಅವರ ಮಾತುಗಳನ್ನು ಕೇಳುತ್ತಾ ಕುಳಿತೆವು. ಮಧ್ಯೆ ಬ್ರೇಕ್ ಇರುವಾಗ ನಮ್ಮೊಡನೆ ಮಾತಾಡುತ್ತಿದ್ದರು.

ಅಷ್ಟರಲ್ಲೇ ಅಲ್ಲಿಗೆ ಬಂದವರು ಗೌರಿ! ಯು ಆರ್ ಸರ್ ಜೊತೆಗಲ್ಲದೇ ಅಲ್ಲಿರುವ ನಮ್ಮೆಲ್ಲರ ಜೊತೆಗೂ ಮೆಲುದನಿಯಲ್ಲಿಯೇ ಮಾತಾಡುತ್ತ ನಮ್ಮ ನಡುವಿನ ಅಂತರವನ್ನು ಕಡಿಮೆ ಮಾಡುತ್ತಾ ಹೋದರು. ತುಂಬ ಜನರಾದರೆ ಹೇಗಾಗುತ್ತದೋ ಅಂತ ಗಾbರಿ ಬಿದ್ದಿದ್ದ ನಾನು ಸ್ವಲ್ಪ ಹೊತ್ತಿನಲ್ಲೇ ನಿರಾಳವಾಗಿ ಬೆರೆತೆ. ಸಿಕ್ಕ ಕ್ಷಣಗಳಲ್ಲಿ ಎದುರಾಗುವ ಎಲ್ಲ ಘಳಿಗೆಗಳನ್ನೂ ಫೋಟೋ ತೆಗೆಯುವ ಹುಚ್ಚಿರುವ ನಾನು ಅವತ್ತು ಸುಮಾರು ಚಿತ್ರ ತೆಗೆದೆ.

ಬಂದ ನಂತರ ಅದನ್ನು ಗೌರಿಯವರಿಗೆ ಕಳಿಸಿ ಕೊಟ್ಟಿದ್ದೆ ಕೂಡಾ.

ಅದೇ ಮೊದಲು ಮತ್ತು ಅದೇ ಕಡೆ ನಾನು ಅವರನ್ನು ನೋಡಿದ್ದು …

 

1 comment

Leave a Reply