ಸರ್ವಜ್ಞನ ವಚನ ನೆನಪು ಮಾಡಲು..

 

 

ಸಿ.ಪಿ ನಾಗರಾಜ

 

 

 

 

ಸಿ ಪಿ ನಾಗರಾಜ ಅವರ ಹೊಸ ಕೃತಿ ‘ಸರ್ವಜ್ಞ -ವಚನಗಳ ಓದು’ ಈಗ ಬೆಳಕು ಕಂಡಿದೆ. ಡಿ ಎನ್ ಶಂಕರ ಭಟ್ ಅವರ ಕನ್ನಡ ಪ್ರತಿಪಾದನೆ ನನಗೆ ಒಪ್ಪಿಗೆಯಾಗಿದೆ ಎಂದು ಸ್ಪಷ್ಟಪಡಿಸಿ ಕನ್ನಡದ ೩೧ ಅಕ್ಷರಗಳನ್ನು ಬಳಸಿ ಕೃತಿ ರಚಿಸಿದ್ದಾರೆ.

ಈ ಕೃತಿ ಬರೆಯಲು ಜಿ ಎಸ್ ಶಿವರುದ್ರಪ್ಪನವರು ನೀಡಿದ ಸಲಹೆಯ ಬಗ್ಗೆ ಅವರು ಕೃತಿಯಲ್ಲಿ ಹೀಗೆ ಬರೆದುಕೊಂಡಿದ್ದಾರೆ-

ಸರ್ವಜ್ಞ ಕವಿಯ ವಚನಗಳನ್ನು ಓದುತ್ತಿದ್ದಾಗ, ನನಗೆ ಮೆಚ್ಚುಗೆಯಾದ ಕೆಲವು ವಚನಗಳನ್ನು ಓದುಗರ ಗಮನಕ್ಕೆ ತರಬೇಕೆಂಬ ಆಸೆಯಾಯಿತು. ಸರ್ವಜ್ಞನ ವಚನಗಳನ್ನು ಮೊದಲ ಬಾರಿ ಓದುವವರಿಗೆ ನೆರವಾಗಲೆಂಬ ಉದ್ದೇಶದಿಂದ ವಚನದಲ್ಲಿ ಜತೆಗೂಡಿರುವ ಪದಗಳನ್ನು ಬಿಡಿಸಿ ಬರೆದು, ಪದಗಳ ತಿರುಳನ್ನು ತಿಳಿಸಿ ಬರೆದ ಬರಹವನ್ನು ಗುರುಗಳಾದ ಕೆ.ವಿ ನಾರಾಯಣ ಅವರಿಗೆ ತೋರಿಸಿದೆನು.

ಅದನ್ನು ನೋಡಿದ ಅವರು “ಪ್ರತಿಯೊಂದು ವಚನದಲ್ಲಿ ಕಂಡುಬರುವ ಕವಿಯ ಇಂಗಿತವನ್ನು ಕೆಲವು ಸಾಲುಗಳಲ್ಲಿ ಬರೆಯುವುದು ಒಳ್ಳೆಯದು” ಎಂಬ ಸಲಹೆಯನ್ನು ನೀಡಿದರು.  ಅವರ ಮಾರ್ಗದರ್ಶನದಂತೆ ಮತ್ತೆ ಬರೆದೆನು.

 

Leave a Reply