‘ಮಹಿಷ ದಸರಾ’ ಬೇಕಲ್ಲವೇ..?

ಚರಿತಾ / ಮೈಸೂರು 

ಆಸಕ್ತರು ಗಮನಿಸಿ.

ಮೈಸೂರಿನ ದೊರೆ ಮಹಿಷನ ಹಿನ್ನೆಲೆ/ಇತಿಹಾಸ ಕುರಿತಂತೆ ಜಿಜ್ಞಾಸೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಗಮನಿಸಬೇಕಾದ ಪುಸ್ತಕ ‘ಮಹಿಷ ಮಂಡಲ’. ಸಿದ್ದಸ್ವಾಮಿಯವರು ತಮಗೆ ನಿಲುಕಿದ ಮಾಹಿತಿ, ಆಕರಗಳ ಆಧಾರದ ಮೇಲೆ ಈ ಪುಸ್ತಕ ರಚಿಸಿದ್ದಾರೆ.
‘ಗೌತಮ ಪ್ರಕಾಶನ’ 2011 ರಲ್ಲಿ ಇದನ್ನು ಪ್ರಕಟಿಸಿದೆ.
ಪ್ರತಿಗಳಿಗಾಗಿ : 9483082233 ಸಂರ್ಕಿಸಬಹುದು.

ತಳ ಸಮುದಾಯಗಳ ಇತಿಹಾಸವನ್ನು ಮರುವ್ಯಾಖ್ಯಾನಿಸುವುದು ಹಿಂದೆಂದಿಗಿಂತಲೂ ಅಗತ್ಯ ಎನಿಸಿರುವ ಈ ಹೊತ್ತಿನಲ್ಲಿ, ಈ ಪುಸ್ತಕ ಹೊಸ ಹೊಳಹುಗಳನ್ನು ಕೊಡಬಲ್ಲುದೇನೊ. ಎಲ್ಲಾ ಹೊಸ ಸಂಶೋಧನೆಗಳಿಗೂ ಇರಬಲ್ಲ ಇತಿಮಿತಿಗಳು, ಭಾವನಾತ್ಮಕ ಪೂರ್ವಾಗ್ರಹಗಳ ಮೇಲಾಟದ ಸಾಧ್ಯತೆಗಳನ್ನೂ ಗಮನದಲ್ಲಿರಿಸಿಕೊಂಡೇ ಇದನ್ನು ಓದಬೇಕಿದೆ.

ಈ ನಿಟ್ಟಿನಲ್ಲಿ ಮತ್ತಷ್ಟು ಚರ್ಚೆಗಳು, ಸಂಶೋಧನೆಗಳಿಗೆ ಈ ಪುಸ್ತಕ ಪ್ರೇರಣೆ ಕೊಡಬಲ್ಲದು. ಕಳೆದ ನಾಲ್ಕು ವರ್ಷಗಳಿಂದ ಮೈಸೂರಿನಲ್ಲಿ ನಡೆಯುತ್ತಿರುವ, ಮೂಲನಿವಾಸಿಗಳ ಸಾಂಸ್ಕೃತಿಕ ಹಬ್ಬ ‘ಮಹಿಷ ದಸರಾ’ವನ್ನು ಮತ್ತಷ್ಟು ಸ್ಪಷ್ಟತೆಯೊಂದಿಗೆ ಮುಂದುವರೆಸಬೇಕಿದೆ.

1 Response

  1. LAKSHMANA RAO says:

    NIJAVAAGIYU AASAKTIKARA VICHARA

Leave a Reply

%d bloggers like this: