ಆನೆಗೆ ಅಂಕುಶ, ‘ವಿಕ್ಕಿ’ಗೆ ಚುಚ್ಚುಗ..

 

 

 

 

 

ರೇಣುಕಾ ಚಿತ್ರದುರ್ಗ 

 

 

 

ನೆನ್ನೆ ಆಯುಧ ಪೂಜೆಗೆ ಎಲ್ಲಾ ಆಯುಧಗಳನ್ನು ಇಟ್ಟು ಪೂಜೆ ಮಾಡ್ಬೇಕು ಅಂದಿದಕ್ಕೆ, ಮಗ ವಿಕ್ರಮಾದಿತ್ಯ ಚಪಾತಿ ಮಗುಚೋ ಚುಚ್ಚಗವನ್ನು ತಂದು ಪೂಜೆಗೆ ಇಟ್ಟಾಗ ನಗು ತಡೆಯಲಾಗಲಿಲ್ಲ…

ವಿಕ್ಕಿ ನಂಗೆ ಹೆದ್ರೋದೇ ಇಲ್ಲ, ಅದಕ್ಕೆ ಈ ಚುಚ್ಚಗವನ್ನು ಅಂಕುಶ ತರ ಬಳಸ್ತೀನಿ, ಏನಾದರೂ ಕೆಲಸ ಹೇಳಿ ಮಾಡೋ, ಮಾಡೋ ಅಂತ ನೂರು ಸಲಿ ಹೇಳಿದರೂ ಕಿವಿ ಕೇಳದ ಹಾಗೆ ಕೂತಿರುತ್ತಾನೆ, ಆಗ ತಟ್ಟೆ ಸ್ಟಾಂಡಿನಿಂದ ಚುಚ್ಚುಗ ಹೊರಗೆ ತೆಗೆಯುವ ಸಣ್ಣ ಸೌಂಡ್ ಕೇಳಿಸಿದ್ದೇ ತಡ ಹೇಳಿದ ಕೆಲಸ ಮಾಡಲು ಎದ್ದು ಓಡುತ್ತಾನೆ, ಒದಿಯೋದೇ ಬೇಡ ಬರೀ ಸೌಂಡು ಮಾಡಿದ್ರೆ ಸಾಕು ತಕ್ಷಣ ಅಲರ್ಟ್ ಆಗ್ತಾನೆ

Leave a Reply