ಸಿನೆಮಾಕ್ಕೆ ರಾಜಕುಮಾರ್ ಹೇಗಿದ್ದರೋ ಹಾಗೆ ಯಕ್ಷಗಾನಕ್ಕೆ ಚಿಟ್ಟಾಣಿ..

 

 

 

ಅಶ್ವಥ್ ಹೆಗಡೆ 

ಫೋಟೋ: ಸುಶ್ರುತ ದೊಡ್ಡೇರಿ

 

 

 

 

 

ಚಿಟ್ಟಾಣಿಯವರು ಇನ್ನಿಲ್ಲ… ಯಾವುದೋ ವಾಟ್ಸ್ ಆ್ಯಪ್ ಗ್ರೂಪ್ ನಲ್ಲಿ ಬಂದ ಮೆಸೇಜ್ ನೋಡಿ ಒಂದು ಕ್ಷಣ ಮಂಕು. ತಮಾಷೆಯ ಮಾತಾ..

ಕೊಳಗಿ ಕೇಶವಣ್ಣ, ಸುಬ್ರಹ್ಮಣ್ಯ ಧಾರೇಶ್ವರರು, ಕೆರೆಮನೆ ಶಿವಾನಂದ ಹೆಗಡೆಯವರಿಗೆಲ್ಲ ಫೋನ್
ಮಾಡಿ ನ್ಯೂಸ್ ನಲ್ಲಿ ಒಂದು ರಿಯಾಕ್ಷನ್ ಕೊಡಿ ಎನ್ನುವಾಗ ನನಗೆ ಅರಿವಿಲ್ಲದಂತೆ ಗಂಟಲು ಕಟ್ಟಿದಂತಾಗಿತ್ತು.

ಚಿಕ್ಕವನಿದ್ದಾಗಿನಿಂದ ಹತ್ತಿರದಲ್ಲಿ ಎಲ್ಲಿ ಚಿಟ್ಟಾಣಿಯವರ ಯಕ್ಷಗಾನ ಅದ್ರೂ ತಪ್ಪಿಸೋ ಮಾತೇ ಇಲ್ಲ.

ಅದೆಷ್ಟು ಕೌರವ, ಭಸ್ಮಾಸುರ, ಕೀಚಕ, ದುಷ್ಟಬುದ್ಧಿ, ಅರ್ಜುನ, ಸುಧನ್ವನನ್ನು ನೋಡಿ ಬೆಳೆದಿದ್ದೇವೆ.

ಚಿಟ್ಟಾಣಿಯವರ ಮೇಳದ ಆಟ ಇದೆ ಅನ್ನೋ ಕಾರಣಕ್ಕೆ ಶಿರಸಿ ಜಾತ್ರೆಯಲ್ಲಿ ಅಷ್ಟೂ ದಿನ ಯಕ್ಷಗಾನಕ್ಕೆ ಹೋಗಿದ್ದುಂಟು.

ಸಿನೆಮಾಕ್ಕೆ ರಾಜಕುಮಾರ್ ಹೇಗಿದ್ದರೋ ಹಾಗೆ ನನ್ನ ತಲೆಮಾರಿನವರಿಗೆ ಯಕ್ಷಗಾನಕ್ಕೆ ಚಿಟ್ಟಾಣಿ ರಾಮಚಂದ್ರ ಹೆಗಡೆ.

ಒಂದು ಒಳ್ಳೆಯ ಇಂಟರ್ವ್ಯೂ ಮಾಡುವ ಬನ್ನಿ ಎಂದಾಗೆಲ್ಲ ಮುಂದಿನ ಸಲ ಬೆಂಗಳೂರು ಆಟಕ್ಕೆ ಬಂದಾಗ ಸಿಕ್ತೆ ಅಂತಿದ್ರು. ಇನ್ನೆಲ್ಲಿ ಭೌತಿಕವಾಗಿ ಸಿಗುವ ಮಾತು.. ಹಳೆಯ ವಿಡಿಯೋಗಳಷ್ಟೆ ನೆನಪುಗಳು…

Leave a Reply