ನಿಮ್ಮ ಕುಣಿತ ನೋಡಿ ನಿಂತಲ್ಲೆ ಕುಣಿದರು..

 

 

ಸೋಮಶೇಖರ ಪಡುಕೆರೆ 

ಚಿಟ್ಟಾಣಿಯವರ ಆಟ ಇತ್ತೆಂದರೆ ನಮ್ಮಲ್ಲಿ ಜನ ಅಂದು ಕುಡಿಯುತ್ತಿರಲಿಲ್ಲ, ಯಾಕೆಂದು ಕೇಳಿದರೆ, ಚಿಟ್ಟಾಣಿಯ ವೇಷ, ಮಾತಿನ ಮುಂದೆ ಯಾವುದೂ ಕಿಕ್ ಕೊಡೊಲ್ಲ ಅನ್ನುತ್ತಿದ್ದರು. ಚಿಟ್ಟಾಣಿಯ ಮಾತು, ಕುಣಿತದಲ್ಲಿ ಅಷ್ಟು ರಂಜನೆ, ಸೊಬಗಿತ್ತು

ಏನು ಬರೆಯಬೇಕು,
ಎಲ್ಲಿಂದ ಆರಂಭಿಸಬೇಕು
ನಿಮ್ಮ ಕುಣಿತ ನೋಡಿ ನಿಂತಲ್ಲೆ ಕುಣಿದರು
ನಿಮ್ಮ ಮಾತ ಕೇಳಿ ಅನುಕರಿಸಿದರು
ಅನುಸರಿಸಿದರು
ಆದರೆ
ನಿಮಗೆ ನೀವೇ ಸಾಟಿ
ನಿಮ್ಮ ನೋಡಿ ಸಂಭ್ರಮಿಸಿದ್ದಿದೆ
ಬಾರದಿದ್ದಾಗ ನಿರಾಸೆಗೊಂಡು
ರಂಗಸ್ಥಳದ ಕಂಬಕ್ಕೆ ತುಳಿದದ್ದಿದೆ

ಇರುಳನ್ನೇ ರಂಗುಗೊಳಿಸಿ
ಹಗಲನ್ನೇ ಮೆಲುಕಾಗಿಸಿದಿರಿ
ಅದೆಷ್ಟೋ ಪಾತ್ರಗಳಿಗೆ
ತುಂಬಿದಿರಿ ಜೀವ
ನಿಮ್ಮಯ ಬಲುಏನ

ಚಿಟ್ಟಾಣಿಗೆ ಚಿಟ್ಟಾಣಿಯೇ ಸಾಟಿ
ನೀವು ನಮ್ಮನ್ನಗಲಿಲ್ಲ
ಮಾರ್ಧನಿಗೊಳ್ಳುತ್ತಿದೆ
ನಿಮ್ಮ ಮಾತು,
ನಿಮ್ಮ ನಡೆ, ಹೆಜ್ಜೆ
ಮಂಗಲಂ

Leave a Reply