ಗೆಳೆಯ ಪ್ರಕಾಶ್ ರೈ ಜೊತೆ ಒಂದು ದಿನ..

 

 

 

 

ಎಲ್ಸಿ ನಾಗರಾಜ್ 

 

 

ಗೆಳೆಯ ಪ್ರಕಾಶ್ ರೈ ಜೊತೆ ಒಂದು ದಿನ ಮಾತಾಡ್ತಾ ಕುಳಿತಿದ್ದೆ. ಪ್ರಕಾಶ್ ಆಗ ತಾನೇ ಬನಶಂಕರಿ 3 ನೇ ಹಂತದಲ್ಲಿ ಮನೆ ಮಾಡಿದ್ದ. ಕರ್ನಾಟಕ ತಮಿಳುನಾಡು ನಡುವಿನ ಕಾವೇರಿ ಕಲಹದ ಹಿಂಸಾತ್ಮಕ ‌ದಿನಗಳವು.

‘ ಕಾವೇರಿ ನೀರಿನ ಸಮಸ್ಯೆಗೆ ಪರಿಹಾರವೇ ಇಲ್ವಾ ?’ ಅಂತಾ ಪ್ರಕಾಶ್ ಕೇಳಿದ

‘ ಯಾಕಿಲ್ಲ ಇದ್ದೇ ಇದೆ ಎರಡೂ ರಾಜ್ಯದ ರೈತರು ಕೆಲವು ತಿಂಗಳು ಕಬ್ಬು ಬತ್ತ ಬೆಳೆಯೋದು ಬಿಟ್ಟು , ದ್ವಿದಳ ಧಾನ್ಯಗಳನ್ನ ಬೆಳೆದರೆ ಮಣ್ಣಿನ ಆರೋಗ್ಯವೂ ಸುಧಾರಿಸುತ್ತದೆ ; ಎರಡೂ ರಾಜ್ಯಗಳ ನಡುವಿನ ಸಂಬಂಧ ಕೂಡ ಸುಧಾರಿಸುತ್ತದೆ ‘ ಎಂದೆ

ಪ್ರಕಾಶ್ ಓದುತ್ತಿದ್ದ ನ್ಯೂಸ್ ಪೇಪರ್ ಬದಿಗಿಟ್ಟು ಕ್ಷಣಗಾಲ ಮೌನವಾದ

1996. ರಲ್ಲಿ ಪ್ರಕಾಶ್ ನ ಚೆನ್ನೈ ಮನೆಯಲ್ಲಿ ಭೇಟಿಯಾದಾಗ ಅದೇ ವಿಷಯ ಮತ್ತೆ ಬಂತು . ನಾನು ಡಾ. ಯೋಗೇಂದ್ರ ಕುಮಾರ್ ಅಲಘ್ ಸಮಿತಿ ವರದಿಯ ಶಿಫಾರಸುಗಳನ್ನ ಪ್ರಸ್ತಾಪಿಸಿದೆ . ಡಾ. Y. K. ಅಲಘ್ ಸಮಿತಿ ‘ ಎರಡೂ ರಾಜ್ಯಗಳೂ Crop pattern ಬದಲಿಸಿಕೊಳ್ಳಬೇಕೆಂದು ಪ್ರತಿಪಾದಿಸಿತ್ತು.

ಈಗಲೂ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳು ತಮ್ಮ crop pattern ಬದಲಿಸಿಕೊಂಡರೆ ಮಣ್ಣಿನ ಸವಳಾಗುವಿಕೆ ( salinisation ) ತಡೆಯಬಹುದು.

ಇಂತಹ ವೈಜ್ಞಾನಿಕ ಚರ್ಚೆಗಳನ್ನ ಮಾಡಬೇಕಿರುವ ಟೆಲಿಬಿಷನ್ ಚಾನಲ್ ಗಳು ಜನರನ್ನ ಉದ್ರೇಕಿಸುವ ಭಾವನಾತ್ಮಕ ಸಂಗತಿಗಳನ್ನ ಕೆದಕಬಾರದು. ಎಲ್ಲ ಭಾಷೆಗಳಿಗೂ ಬೇಕಾದ ಕಲಾವಿದನನ್ನ ಇಂತಾ ಇಕ್ಕಟ್ಟಿನ ಸ್ಥಿತಿಗೆ ಸಿಲುಕಿಸಬಾರದು.

ಪ್ರಕಾಶ್ ರಾತ್ರಾನುರಾತ್ರೆ ಒಂದಿಡೀ ಪುಸ್ತಕ ಓದಿ ಬೆಳಗಿನ ಟೀ ವೇಳೆಗೆ ಅದರ ಸಾರಾಂಶ ಹೇಳುತ್ತಿದ್ದ. ನಾನು ಕಂಡ ಹಾಗೆ ಪ್ರಕಾಶ್ ಉನ್ನತ ಸಂವೇದನೆಗಳ ವ್ಯಕ್ತಿತ್ವ ಉಳ್ಳವನು

ವೈಯಕ್ತಿಕ ಬದುಕಿನಲ್ಲಿ ಕೊಂಚ ಏರುಪೇರುಗಳಾದವು ಆದರೆ ಈಗ ಅವನ ವೈಯಕ್ತಿಕ ಬದುಕು ಕೂಡ ಅವನ ನಿಜದ ಸಂವೇದನೆಗಳಿಗೆ ಅನುಗುಣವಾಗೇ ಇದೆ.

 

Leave a Reply