ಮರುಕ್ಷಣ ಅವಳಿಲ್ಲ..

 

 

ಹಳವಂಡ

ನಾಗರಾಜ ಹರಪನಹಳ್ಳಿ. ಕಾರವಾರ

 

 

 

ಮಲಗಿದ್ದೆ
ಅದಷ್ಟೇ ನೆನಪು
ಅದ್ಹಾವುದೋ ಹೊಸ ಲೋಕ
ಹರೆಯದ ಪುಟಿವ ಹೆಣ್ಣಿನ ಜೊತೆ ಸುತ್ತಾಡಿದ ನೆನಪು
ಅದ್ಹೇನು ಸಮಾರಂಭ
ಅಷ್ಟು ಗದ್ದಲದಲ್ಲೂ ಏಕಾಂತದ ಹುಡುಕಾಟ ,
ಹೊಸ ಮುಖಗಳು
ಬಸ್ ನಿಲ್ದಾಣ,ದೇವಸ್ಥಾನದ ಹಜಾರ ವರಾಂಡಗಳಲ್ಲಿ ಮಲಗಿದ
ಮೂಲವೇ ಮರೆತಂತೆ,
ಹೊಸ ಜಗತ್ತಿನಲ್ಲಿ ಅಲೆದಾಡಿದಂತೆ
ನನ್ನ ದಿನದ ಜಗತ್ತಿಗೆ ಬರಲಾಗದ ಒದ್ದಾಟ
ಕನಸಿನಲ್ಲಿ ಗೆಳೆಯ ಬಂದರೂ
ಧ್ವನಿಯಿಂದ ಅವನ ಗುರುತಿಸಿದರೂ
ಮುಖ ಬದಲು
ಒಯ್ದಾಡಿದೆ ಒದ್ದಾಡಿದೆ
ಎಲ್ಲಿದ್ದೇನೆ ನಾನು,ನನ್ನ ಊರಿಗೆ ಬಸ್ ಹಿಡಿಯಬೇಕೆಂದರೆ
ಕಿಸೆಯಲ್ಲಿದ್ದ ಹಣ ಕಳೆದಂತೆ
ಗುರುತಿನ‌ ಚೀಟಿಯೂ ಬಿದ್ದುಹೋದಂತೆ
ಅವುಗಳ ಹುಡುಕಾಟಕ್ಕೆ ಅಲೆದಂತೆ
ಕ್ಷಣಕ್ಕೊಂದು ಸನ್ನಿವೇಶ
ಸಾವು
ಎದುರು ಬಂದಂತೆ ,ಎಲ್ಲವೂ ಮುಗಿದಂತೆ…
ಸುಪ್ತ ಪ್ರಜ್ಞೆಯಲ್ಲಿ ಎಚ್ಚರವಿದೆ,ಏನೋ ಆಗುತ್ತಿದೆ
ನೆನಪಿಗೆ ಬರುತ್ತಿಲ್ಲ, ತಪ್ಪುಸಿಕೊಂಡು
ಬದುಕಿದ್ದ ಜಗತ್ತಿಗೆ ಬರುವ ತವಕ
ಇದ್ಹೇನು ಮರೆವಿನ ರೋಗವೋ
ಹಳವಂಡ ಕನಸು
ಸುಂದರ ಹುಡುಗಿ ಜೊತೆಯಾದಂತೆ, ಅವಳ ಆಲಂಗಿಸಿದಂತೆ
ಮೈಥುನಕ್ಕೆ ಸಜ್ಜಾದಂತೆ
ಮರುಕ್ಷಣ ಅವಳಿಲ್ಲ
ಬಿಟ್ಟುಹೋದಂತೆ, ಕರೆದೊಯ್ಯಲು
ಅಪ್ಪ ಬಂದಂತೆ, ಆದರೆ ಮುಖಮಾತ್ರ ಅವನದಲ್ಲ
ದಾರಿಯಲ್ಲಿ ಮತ್ತೆ ಪಾತ್ರ ಬದಲು
ಮನುಷ್ಯರು ಕ್ಷಣಮಾತ್ರದಲ್ಲಿ ಬದಲಾಗಿ
ಚಿಟ್ಟೆಯಾದಂತೆ, ನಿಂತ ಮಡುವಿನಲ್ಲಿ ಮತ್ಸ್ಯವಾದಂತೆ….ಹತ್ತೆಂಟು ಗೊಂದಲ
****
ಬಾಗಿಲು ತೆರೆದ ಸದ್ದು
ಅವಳು ಹೇಳಿದಳು
ಕಸ ತೆಗೆಯಲು ಹೋಗುವೆ
ತಹಶಿಲ್ದಾರ ಕಚೇರಿ ಹತ್ರ
ಆದೇಶವಾಗಿದೆ ಸ್ವಚ್ಚತಾ ಅಭಿಯಾನ
ಎಚ್ಚರಾಯಿತು
ಬೆಳಗಿನ ಜಾವದ ಹಳವಂಡ ಕನಸು
ಹಾಸಿಗೆಯಲ್ಲಿದ್ದೇನೆ ಎದೆಯ ಮೇಲೆ
ಕೈ ಲಾಕ್ ಆಗಿವೆ, ಯಾವುದೋ ಭಾರ ಎದೆಯಮೇಲೆ ಕುಳಿತಂತೆ
***
ಮನುಷ್ಯರ ಮನುಷ್ಯರ ನುಂಗಿದ
ಪ್ರತಿಮೆ ಸುಳಿದು ಹೋಯಿತು
ಮಕ್ಕಳು ಅಪ್ಪಮ್ಮನ ನುಂಗಿದಂತೆ, ಊರನ್ನ, ಹೆಂಚಿನ ಮನೆಗಳನ್ನ ರಸ್ತೆ
ಆಧುನಿಕ ಮನೆ ವಿನ್ಯಾಸಗಳು ನುಂಗಿದಂತೆ
ಮನುಷ್ಯರನ್ನ ಮನುಷ್ಯರು ತಿಂದು
ಸಿದ್ಧಾಂತಗಳ ಚರ್ಚಿಸಿದಂತೆ
ಗೌರಿಯನ್ನ ಬೆಂಕಿಯುಗುಳುವವರು
ಆಹುತಿ ಪಡೆದಂತೆ
ಮನುಷ್ಯರೇ ಹೀಗೋ????
ಪ್ರಕೃತಿಯ ಪ್ರಕೃತಿ ನುಂಗಿ
ಮಗ್ಗಲು ಬದಲಿಸಿದಂತೆ !!!

1 Response

  1. Kiran says:

    Looks like pushing Gauri into everything is the current fashion, of course there is a saying “Go with the wind…”!

Leave a Reply

%d bloggers like this: