ಇಂದಿನ ನಾಟಕ ‘ಸಿಂಗಾರೆವ್ವ ಮತ್ತು ಅರಮನೆ’

ಸಹ್ಯಾದ್ರಿ ರಂಗ ತರಂಗ:

ಸಹ್ಯಾದ್ರಿ ರಂಗ ತರಂಗ ತಂಡವು 1986ರಲ್ಲಿ ಹವ್ಯಾಸಿ ರಂಗ ತಂಡವಾಗಿ ಹುಟ್ಟಿಕೊಂಡಿತು. ಇದರ ಮೂಲ ಗುರಿ ಜನರಲ್ಲಿ ರಂಗಾಸಕ್ತಿಯನ್ನು ಬೆಳೆಸುವುದರ ಜೊತೆಗೆ ಸಮಾಜದಲ್ಲಿನ ಸಮಸ್ಯೆಗಳಿಗೆ ರಂಗಭೂಮಿಯ ಮೂಲಕ ಜನರಲ್ಲಿ ಅರಿವು ಮೂಡಿಸುವುದಾಗಿದೆ.

ತಂಡದ ಮೊದಲ ನಾಟಕವಾಗಿ ‘ಅನ್ವೇಷಕರು’ ಪ್ರದರ್ಶಿಸಲಾಯಿತು. ತದನಂತರದಲ್ಲಿ ಶ್ರೀರಂಗರ ಶೋಕಚಕ್ರ, ಹಯವದನ, ಯಯಾತಿ, ಸಿರಿಸಂಪಿಗೆ, ಗುಣಮುಖ, ಸಂಕ್ರಾತಿ, ಬಿರುಗಾಳಿ, ವಾಲ್ಮೀಕಿಭಾಗ್ಯ, ಗಂಗಾವತರಣ, ಕಾನೀನ, ಜಲಗಾರ, ಜೂಲಿಯಸ್ ಸೀಸರ್, ಸಿಂಗಾರವ್ವ ಮತ್ತು ಅರಮನೆ ಹೀಗೆ ಹತ್ತುಹಲವು ನಾಟಕಗಳನ್ನು ನೀಡುತ್ತಾ 3 ದಶಕಗಳಿಂದಲೂ ಹೆಚ್ಚು ವರ್ಷಗಳ ರಂಗಭೂಮಿಯ ಉಳಿವಿಗೆ ಶ್ರಮಿಸಿದೆ. ಅದು ಅಲ್ಲದೇ ಉದಯೋನ್ಮುಖ ಕಲಾವಿದರನ್ನು ಹುಟ್ಟುಹಾಕುತ್ತಾ, ರಾಜ್ಯ ಮತ್ತು ರಾಷ್ಟ್ರಮಟ್ಟಗಳಲ್ಲಿ ನಾಟಕ ಪ್ರದರ್ಶಿಸಿ ಪ್ರಶಸ್ತಿಯನ್ನು ಪಡೆದ ಹಿರಿಮೆಯು ಈ ತಂಡಕ್ಕೆ ಸಲ್ಲುತ್ತದೆ. ರಂಗಭೂಮಿಯ ನಿರಂತರತೆಯನ್ನು ಕಾಪಾಡುವುದೇ ‘ಸರಂತ’ದ ಮುಖ್ಯಧ್ಯೇಯ.

 

ನಿರ್ದೇಶಕರ ಬಗ್ಗೆ: ಕಾಂತೇಶ್ ಕದರಮಂಡಲಗಿಯವರು ಬಿ.ಎಸ್.ಎನ್.ಎಲ್ ಉದ್ಯೋಗಿಯಾಗಿ ಹವ್ಯಾಸಿ ರಂಗಭೂಮಿಯಲ್ಲಿ ತೊಡಗಿಸಿಕೊಂಡು. ಹಲವಾರು ನಾಟಕಗಳನ್ನು ನಿರ್ದೇಶಿಸಿದ್ದಾರೆ. ಜೊತೆಗೆ ಚಂದನವಾಹಿನಿಗಾಗಿ ಸಾಕ್ಷ್ಯಚಿತ್ರವನ್ನು ಸಹ ನಿರ್ದೇಶಿಸಿದ್ದಾರೆ.

ಇವರ ನಿರ್ದೇಶನದ ಸಂಕ್ರಾತಿ, ರಾವಿ ನದಿಯ ದಂಡೆಯಲ್ಲಿ ರಾಜ್ಯ ಪ್ರಶಸ್ತಿಯನ್ನು ಪಡೆದುಕೊಂಡಿವೆ. ಕರ್ನಾಟಕ ನಾಟಕ ಅಕಾಡೆಮಿಯ ಪ್ರಶಸ್ತಿ, ಶಿವಮೊಗ್ಗದ ಸಿ.ಜಿ.ಕೆ ರಂಗ ಸಮ್ಮಾನಕ್ಕೆ ಭಾಜನರಾಗಿರುವ ಇವರು ನಿವೃತ್ತಿಯ ನಂತರ ಸಂಪೂರ್ಣ ರಂಗಂಭೂಮಿಯಲ್ಲಿ ತೊಡಗಿಸಿಕೊಂಡಿದ್ದಾರೆ.

 

 

ನಾಟಕ : ಸಿಂಗಾರೆವ್ವ ಮತ್ತು ಅರಮನೆ.

ರಚನೆ, ವಿನ್ಯಾಸ, ನಿರ್ದೇಶನ : ಕಾಂತೇಶ್ ಕದರಮಂಡಲಗಿ ನಾಟಕದ ಅವಧಿ : 1 ಘಂಟೆ 55 ನಿಮಿಷ

ಭೂಮಿಯ ಮೇಲೆ ಕೆಲವರು ಹುಟ್ಟುತ್ತಲೆ ಚಿನ್ನದ ಚಮಚೆ ಬಾಯಲ್ಲಿ ಇಟ್ಟುಕೊಂಡು ಹುಟ್ಟುತ್ತಾರೆ.ಆದರೆ ಅಷ್ಟೇ ನತದೃಷ್ಟರು ಕೆಲವರು ಇರುತ್ತಾರೆ.ಸಿಂಗಾರೆವ್ವ ಮತ್ತು ಶೀನಿಂಗವ್ವ ಅಂತಹ ನತದೃಷ್ಟರ ಸಾಲಿನಲ್ಲಿ ಹುಟ್ಟುತ್ತಾರೆ. ಚಂದ್ರಶೇಖರ ಕಂಬಾರರ ಸಿಂಗಾರೆವ್ವ ಮತ್ತು ಅರಮನೆ ಕಾದಂಬರಿಯಲ್ಲಿ. ಭೂ ಭಾಗದ ಬಯಲು ಸೀಮೆಯಲ್ಲಿ ಘಟಿಸುವ ಈ  ಕಥಾನಕ ಅತ್ಯಂತ ರೋಚಕವಾಗಿದೆ.ಶ್ರೀಮಂತ ಗೌಡನ ಮನೆಯಲ್ಲಿ ಹುಟ್ಟಿ ಎಲ್ಲ ಸುಖ ಭೋಗಗಳಿಗೂ ಬಾಧ್ಯಸ್ಥಳಾಗಿ ಜೀವನ ನಡೆಸ¨ಹುದಾಗಿದ್ದ ಸುಂದರಿ ಸಿಂಗಾರೆವ್ವ.

ಲಪೂಟ ತಂದೆಯ ಪಿತೂರಿಗಳಿಂದಾಗಿ ಇದಾವುದನ್ನೂ ಅನುಭವಿಸದೇ ತಾನು ಸೇರಿದ ಮನೆಯ ಉದ್ಧಾರಕ್ಕಾಗಿ  ಇಡೀ ಜೀವವನ್ನು ಸವೆಸುತ್ತಾಳೆ.ಲಂಪಟತನದ ಉತ್ತಾರಾಧಿಕಾರಿಯಾದ ದೇಸಾಯಿಯೊಬ್ಬನ ಮನೆಯನ್ನು ಸೇರಿದ ಸಿಂಗಾರೆವ್ವ ಸ್ತ್ರೀ ಸಹಜ ಆಸೆಗಳನ್ನು ಹೊಂದಿದವಳು.ಮನೆಯ ಕಂ¨ ಕಂಬಗಳಿಗೂ ಮಕ್ಕಳು ಆಡಬೇಕೆನ್ನುತ್ತಾಳೆ. ಸೀನಿಂಗವ್ವ ತನ್ನ ಗೆಳತಿಯೊಂದಿಗೇ ದೇಸಾಯಿ ಮನೆಯನ್ನು ಆಳಾಗಿ ಸೇರುತ್ತಾಳೆ.

ಅವಳೂ ತನ್ನ ವಯೋಮಾನ ಸಹಜ ಜೀವನ ನಡೆಸುತ್ತಾಳೆಯೇ? ಇವರು ಆ ದೇಸಾಯಿ ಮನೆಯನ್ನು ಮೇಲ್ಮಟ್ಟಕ್ಕೆ ತರುವ ಪ್ರಯತ್ನಗಳು ಯಾವುವು?ಸಿಂಗಾರೆವ್ವ ನ ತವರು ಮನೆಯ ಸಹಕಾರ ವೆಂತಹುದು? ಎಲ್ಲ ಪ್ರಯತ್ನಗಳಿಗೆ ವಿಧಿ ತನ್ನ ಕೈವಾಡವನ್ನು ಯಾವ ರೀತಿಯಲ್ಲಿ ಆಡಿಸುತ್ತದೆ? ಇಡೀ ಕಥಾವಸ್ತು ಮನುಷ್ಯನ ಹಲವು ಸಂಕೀರ್ಣ ಮುಖಗಳನ್ನು ತೆರೆದು ತೋರಿಸುತ್ತದೆ.

ಕಂಬಾರರು ಉತ್ತರ ಕರ್ನಾಟಕದ ಕನ್ನಡ ಶೈಲಿಯಲ್ಲಿ ಅಮೊಘವಾಗಿ ಕಾದಂಬರಿಯನ್ನು ರಚಿಸಿದ್ದಾರೆ.ಅದೇ ಭಾಷೆಯ ಬಳಕೆಯಲ್ಲಿ ನಮ್ಮ ತಂಡದವರು ಈ ನಾಟಕವನ್ನು ಪ್ರದರ್ಶನಕ್ಕೆ ಸಿದ್ಧಗೊಳಿಸಿದ್ದೇವೆ.

Leave a Reply