ಇಂದಿನ ನಾಟಕ ‘ಭಾಮತಿ’

ಮಲೆನಾಡು ಕಲಾ ತಂಡ (ರಿ) ಶಿವಮೊಗ್ಗ

2006ರಲ್ಲಿ ಯುವ ಸಮೂಹದೊಂದಿಗೆ ಆರಂಭವಾದ ಈ ತಂಡ ಯಶಸ್ವಿ ಹತ್ತು ವರ್ಷಗಳನ್ನು ಪೂರೈಸಿ, ರಂಗಪಯಣ ಮುಂದುವರೆಸುತ್ತಿದೆ.

ಸಾಂಸ್ಕೃತಿಕ, ಶೈಕ್ಷಣಿಕ, ಸಾಮಾಜಿಕ ಕಳಕಳಿಯನ್ನು ಇಟ್ಟುಕ್ಕೊಂಡು, ರಂಗಮಾದ್ಯಮದ ಮೂಲಕ ಸದಾ ಸ್ಪಂದಿಸುತ್ತಾ ನಡೆಯುತ್ತಿದೆ. ಜೊತೆಗೆಜಾನಪದ ಕಲೆಗಳನ್ನು ಉಳಿಸಿ ಬೆಳಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸುತ್ತಾ ಪ್ರದರ್ಶಿಸುತ್ತಾ ಸಾಗಿದೆ. ಇದನ್ನು ಗುರುತಿಸಿ ಭಾರತ ಸರ್ಕಾರದ ನೆಹರೂ ಯುವ ಕೇಂದ್ರದಿಂದ ಜಿಲ್ಲಾ ಮಟ್ಟದ “ಉತ್ತಮ ಸಾಂಘಿಕ ಯುವ ಪ್ರಶಸ್ತಿ” ನೀಡಿ ಗೌರವಿಸಿದೆ.

ತಂಡದಿಂದ ವತಿಯಿಂದ ಚಂದ್ರಶೇಖರ ಕಂಬಾರರ “ಭಾರತಾಂಭೆ” ಪಂಪನ “ಸೂಳ್ಪಡೆಯಲ್ಲಪ್ಪುದು ಕಾಣಾ ಮಹಾಜಿರಂಗದೋಳ್” ಡಾ. ವಿಜಯಾ ಸುಬ್ಬರಾವ್‍ ಅವರ ಮಕ್ಕಳ ನಾಟಕಗಳಾದ “ಬಣ್ಣ” ಮತ್ತು “ಪುಣ್ಯಕೋಟಿ” ಗಣೇಶಯ್ಯನವರ “ಶಾಲಭಂಜಿಕೆ” (ರಾಷ್ಟ್ರ ಮಟ್ಟದ ನಾಟಕ ಸ್ಪರ್ದೆಯಲ್ಲಿ ಪ್ರಥಮ ಬಹುಮಾನ) ಕಾರ್ನಾಡರ “ಯಯಾತಿ” ಬಿ.ಟಿ.ಲಲಿತಾನಾಯಕ್‍ ರ “ಕಳ್ರು” ಕರಿಬಸವಯ್ಯನವರ “ಚಮ್ಮಾವುಗೆ” ಬಶೀರ್‍ರವರವ “ಅತಿಮಾನುಷ” ಗಣೇಶ್‍ ಕೆಂಚನಾಲ್‍ ರಚನೆಯ, “ಹೆಣದ ಪರದಾಟ”, “ಹೊಸದಿಶೆ”, “ಸಂಗೊಳ್ಳಿ ರಾಯಣ್ಣ”, “ಕನಕ ದರ್ಶನ”  ಶಿವಕುಮಾರಯ್ಯ ಮಾರವಳ್ಳಿ ರಚನೆಯ ಹಾಸ್ಯನಾಟಕ “ಹುಡುಕೋಣ ಬನ್ನಿ” 75 ಪ್ರದರ್ಶನ ಕಂಡಿದೆ.

ನಾಟಕ-ಭಾಮತಿ

ಮೂಲಕಥೆ:- ಅಂಬ್ರಯ್ಯಮಠ, 

ರಂಗರೂಪ:- ಶಿವಕುಮಾರಯ್ಯ ಮಾರವಳ್ಳಿ

ನಿರ್ದೇಶನ:- ಗಣೇಶ್‍ ಆರ್‍ ಕೆಂಚನಾಲ್

ನಾಟಕ ಕುರಿತು :-  ಕ್ರಿ.ಶ.7-8ನೇ ಶತಮಾನದಲ್ಲಿ ನಡೆದು ಹೋದ ಕಥೆಯಿದು. ಆಗಿನ ಮಿಥಿಲಾ ದೇಶದಲ್ಲಿ ಅತಿ ಚಿಕ್ಕ ವಯಸ್ಸಿನಲ್ಲಿ ಬ್ರಹ್ಮ ಜಿಜ್ಞಾಸೆಯಲ್ಲಿ ಬಿದ್ದ ವಿದ್ಯಾವಾಚಸ್ಪತಿ ಎಂಬ ಹುಡುಗನು ಶ್ರೀಬಾದರಾಯಣ ವ್ಯಾಸರು ಹಾಗೂ ಶಂಕರಾಚಾರ್ಯರಿಂದ ರಚಿಸಲ್ಪಟ್ಟ ಬ್ರಹ್ಮ ಸೂತ್ರಗಳನ್ನು ಅಧ್ಯಯನ ಮಾಡಿ ಅವುಗಳ ಮೇಲೆ “ಭಾಷ್ಯೆ”ಯನ್ನು ಬರೆಯುತ್ತಾನೆ. ಆಗ ಇವನನ್ನು ಅವರ ತಂದೆ ತಾಯಿಯರು ಸಂಸಾರ ಬಂಧನದಲ್ಲಿ ದೂಕುತ್ತಾರೆ. ಈತನ ಹೆಂಡತಿಯಾಗಿ ಮನೆ ತುಂಬಿದ ಹೆಣ್ಣು “ಭಾಮತಿ”. ಇಲ್ಲಿ ಭಾಮತಿಯ ಸ್ರ್ತೀಪರ ಧಾರ್ಮಿಕ ಜಿಜ್ಞಾಸೆಗಳು ಅಭಿವ್ಯಕ್ತಗೊಳ್ಳುತ್ತದೆ. ಹಾಗೂ ಅವಳು ಇಂದ್ರಿಯ ಪ್ರಚೋಧನೆಗೆ ಒಳಪಟ್ಟು ತನ್ನ ಸಂಸಾರವನ್ನು ಯಾವ ಘಟ್ಟಕ್ಕೆತಂದು ನಿಲ್ಲಿಸಿಕೊಳ್ಳುತ್ತಾಳೆ ಎಂಬುದೇ ಕಥಾ ಹಂದರ.

ನಿರ್ದೇಶಕರ ಕುರಿತು:-

ಆಕಾಶವಾಣಿಯ ಸಾಂಧರ್ಭಿಕ ಉದ್ಘೋಷಕರಾಗಿ, ಪದವಿ ಕಾಲೇಜಿನಲ್ಲಿ ಅತಿಥಿ ಕನ್ನಡ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಾ, ಸುಮಾರು 15 ವರ್ಷಗಳಿಂದಲ್ಲಿ ನಿರಂತರವಾಗಿ ರಂಗಭೂಮಿಯಲ್ಲಿ ತೊಡಗಿಕೊಂಡಿದ್ದಾರೆ. ಹಂಪಿ ವಿಶ್ವವಿದ್ಯಾನಿಲಯದಿಂದ ಡ್ರಾಮಾ ಡಿಪ್ಲೋಮ ಪದವಿ, ಹಾಗೂ ಮೈಸೂರಿನಲ್ಲಿ ನಾಟಕ ವಿಷಯ ಕುರಿತು ಸಂಶೋಧನಾ ವಿದ್ಯಾರ್ಥಿ ಕೂಡ ಹೌದು. ಜೊತೆಗೆ ಆಕಾಶವಾಣಿ “ಬಿ” ಗ್ರೇಡ್ ನಾಟಕ ಕಲಾವಿದರು. ಇವರು ರಚಿಸಿ ನಿರ್ದೇಶಿಸಿದ ಹಲವಾರು ನಾಟಕ-ಬೀದಿನಾಟಕಗಳು ರಾಜ್ಯಾದ್ಯಂತ ಪ್ರದರ್ಶನಗೊಂಡು ಪ್ರಶಂಸೆ ಗಳಿಸಿದೆ. ಕನ್ನಡ ಅಭಿವೃದ್ದಿ ಸಮಿತಿಯಿಂದ “ಕಾಯಕರತ್ನ “ಪ್ರಶಸ್ತಿ, ಹಾರನಹಳ್ಳಿ ಚೌಕಿ ಮಠದಿಂದ “ಕಲಾರತ್ನ” ಪ್ರಶಸ್ತಿ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳು ಗುರುತಿಸಿ ಗೌರವಿಸಿದೆ.

Leave a Reply