‘ನಾನು ಕಾರಂತರ ಮೊಮ್ಮಗ’- ಪ್ರಕಾಶ್ ರೈ ಆಲ್ಬಂ

ಸತ್ಯವನ್ನು ನುಡಿಯದಂತೆ ನಿರ್ಬಂಧಿಸುವ ಭಯದ ವಾತಾವರಣವನ್ನು ಇಂದು ನಮ್ಮ ಸಮಾಜದಲ್ಲಿ ಸೃಷ್ಟಿಸಲಾಗುತ್ತಿದೆ.

ನಾನು ಸಮಾಜದ ಆಗು ಹೋಗುಗಳನ್ನು ಹತ್ತಿರದಿಂದ ತಾದಾತ್ಮ್ಯ ಚಿತ್ತದಿಂದ ಗಮನಿಸುವ ಓರ್ವ ಕಲಾವಿದನಾಗಿದ್ದು, ಸಮಾಜದ ಆಗುಹೋಗುಗಳ ಬಗ್ಗೆ ಯಾವುದೇ ವೇದಿಕೆಯಲ್ಲಿ ಜವಾಬ್ದಾರಿಯುತ ನಾಗರಿಕನಾಗಿ ನನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಮೂಲಭೂತ ಹಕ್ಕು ನನಗಿದೆ.

ಈ ಅಮೂಲ್ಯ ಹಕ್ಕನ್ನು ಯಾರೇ ಆಗಲಿ ನಿರಾಕರಿಸುವುದನ್ನು ನಾನು ಸಹಿಸಲಾರೆ. ಸತ್ಯವನ್ನು ಹೇಳಲಾಗದ ಹೇಡಿಯಾಗಲಾರೆ. ಸಮಾಜದ ಬೆಳವಣಿಯಲ್ಲಿ ಮಾನವನ ಪಾತ್ರವಿರುವುದು ಹೌದೆಂದಾದಲ್ಲಿ ಸತ್ಯವನ್ನು ನುಡಿಯಲು ನಾವು ಭಯ ಪಡುವುದಾದರೂ ಏಕೆ?

I am answerable to my conscience, not to the assessments – ಹೀಗೆ ನನ್ನ ಅಜ್ಜ ಶಿವರಾಮ ಕಾರಂತರು ಹೇಳಿದ್ದನ್ನು ನಾನು ಶಿರಸಾ ಪಾಲಿಸುತ್ತೇನೆ. ನನ್ನ ಆತ್ಮಸಾಕ್ಷಿಗೆ ಸರಿಯಾಗಿ ನಾನು ನಡೆಯುತ್ತೇನೆ.

ನಮಗೆ, ನಮ್ಮ ಮಕ್ಕಳಿಗೆ ನೆಮ್ಮದಿಯ ಸಮಾಜ ಬೇಕಿದೆ. ಕ್ರೌರ್ಯದ, ಭಯಗ್ರಸ್ಥ ಸಮಾಜ ನಮಗೆ ಬೇಕಾಗಿಲ್ಲ. ಶಾಂತಿ ಸಹೋದರತೆಯ ನೆಮ್ಮದಿಯ ನಾಡನ್ನು ಕಟ್ಟಲು ನಾವೆಲ್ಲರೂ ಪಣತೊಡಬೇಕಾಗಿದೆ…..

ನಿನ್ನೆ ಕೋಟಾದ ಶಿವರಾಮ ಕಾರಂತ ಥೀಮ್ ಪಾರ್ಕ್ ಸಭಾಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಶಿವರಾಮ ಕಾರಂತರ ಫ್ರಶಸ್ತಿಯನ್ನು ಸ್ವೀಕರಿಸುತ್ತಾ ಖ್ಯಾತ ಬಹುಭಾಷಾ ಚಲನ ಚಿತ್ರ ನಟ ಪ್ರಕಾಶ್ ರೈ ಹೇಳಿದಾಗ ನೆರೆದ ಸಭಿಕರಿಂದ ಪ್ರಚಂಡ ಕರತಾಡನ…!!

-ಯಶವಂತ ಮರೋಳಿ 

ಇವತ್ತು ಹೋರಾಟ ನಡೆಸಬೇಕಾದ್ದು ಎಡಪಂಥದ, ಬಲಪಂಥದ ಅಥವಾ ಯಾವ ರಾಜಕೀಯ ಪಕ್ಷದ ವಿರುದ್ಧವೂ ಅಲ್ಲ, ನಾವು ನಮ್ಮ ಮಕ್ಕಳು ನಿರ್ಭಯವಾಗಿ ಧೈರ್ಯವಾಗಿ ಬದುಕುವ ಅಭಿಪ್ರಾಯ ಮಂಡಿಸುವ ಹಕ್ಕಿಗಾಗಿ ಹೋರಾಟ ನಡೆಸಬೇಕಾಗಿದೆ. ಇದು ಎಲ್ಲಾ ಪ್ರಜ್ಞಾವಂತರ ಜವಾಬ್ದಾರಿ

ಭಿನ್ನಾಭಿಪ್ರಾಯ ಹೊಂದಿರುವವರಲ್ಲಿ ಭಯವನ್ನು ಅತ್ಯಂತ ವ್ಯವಸ್ಥಿತ ವಾಗಿ ಹರಡುವ ಕೆಲಸ ಅಗುತ್ತಿದೆ
ಅಭಿಪ್ರಾಯ ಭೇದ ಇದ್ದರೆ ವ್ಯಕ್ತಪಡಿಸಿ, ಕೊಲೆಯ ಮೂಲಕ ಅಲ್ಲ

ಇದನ್ನು ನೋಡಿ ಸುಮ್ಮನಿದ್ದರೆ ಸಮಾಜದ್ರೋಹ ಅಗುತ್ತೆ,
ನಾನು ಕೇವಲ ನನ್ನ ಮನಸ್ಸಾಕ್ಷಿಗೆ ಉತ್ತರದಾಯಿ ಅಂತ ಕಾರಂತರೇ ಹೇಳಿದ್ದಾರೆ, ನಾನು ಅವರ ಮೊಮ್ಮಗ, ಅದನ್ನೇ ಪಾಲಿಸ್ತೇನೆ

Leave a Reply