fbpx

ಕಾರಂತರು ಹಗರಿಬೊಮ್ಮನಹಳ್ಳಿಗೆ ಬಂದಿದ್ದರು

 

 

 

 

 

ಸುಧಾ ಚಿದಾನಂದಗೌಡ 

ಫೋಟೋ: ಯಜ್ಞ

 

 

 

 

ನಮ್ಮ ರಾಷ್ಟ್ರೋತ್ಥಾನ ಶಾಲೆಯಲ್ಲಿ ಸಾಂಸ್ಕೃತಿಕ ಮೇಳವೊಂದು ನಡೆದಿತ್ತು. ಒಂದೆರಡು ದಿನ ಯಕ್ಷಗಾನ ಇತ್ತು. ಆಗ ಬಂದಿದ್ದರು. ಕೊರಳಲ್ಲಿ ಕ್ಯಾಮೆರಾ ತಗಲಾಕಿಕೊಂಡು ಪುಟುಪುಟು ಓಡಾಡುತ್ತಿದ್ದ ಅವರು ಕಾರಂತ ಎಂಬುದೂ ನನಗಾಗ ಗೊತ್ತಿರಲಿಲ್ಲ. 1986 ರಲ್ಲಿರಬೇಕು -ಒಂಭತ್ತನೆ ಕ್ಲಾಸಲ್ಲಿದ್ದೆ ಅಂತ ನೆನಪು.. ಸಣ್ಣಪುಟ್ಟ ಪದ್ಯ, ಪ್ರಬಂಧ ಬರೆಯೋಕೆ ಶುರು ಮಾಡಿದ್ದೆ ಆದ್ರೆ ಅಂಥಾ ಪರಿಯೇನೂ ಸಾಹಿತ್ಯವನ್ನು ಓದಿರಲಿಲ್ಲ ಇನ್ನೂ ವಿಜ್ಞಾನ, ಗಣಿತದ ಕಡೆಗೇನೇ ಲಕ್ಷ್ಯ..ಅವರೂ ಸೈನ್ಸ್ ಬಗ್ಗೆ ಬರೆದಿದಾರ ಅಂತ ಟೀಚರ್ ಒಬ್ರು ಹೇಳಿದಂಗಿತ್ತು.

ಏನು ಎತ್ತ ಗೊತ್ತಿರಲಿಲ್ಲ.. ಸ್ವಯಂಸೇವಕಿಯರಾಗಿ ಕಾರ್ಯಕ್ರಮಗಳು ಮುಗಿಯೋತನಕ ಗೆಳತಿಯರೆಲ್ಲಾ ಇರುತ್ತಿದ್ದೆವು.
ಕ್ಯಾಮೆರಾದ್ದೊಂದು ಕವರೋ ಏನೋ ಕೆಳಗೆ ಬಿತ್ತು- ಅದನ್ನೆತ್ತಿ ಕೊಟ್ಟಿದ್ದೆ. ಅವರು ತಲೆ ಸವರಿದ್ದರು..
ಎಷ್ಟೋ ದಿನಗಳಾದ ಮೇಲೆ ಗೊತ್ತಾಯ್ತ ಅವರು ಕಾರಂತ ಅಂತ. ಅಷ್ಟೇ ಕಾರಂತರನ್ನು ಓದಿದ್ದು ಇವೊತ್ತಿಗೂ ಕಡಿಮೆಯೇ ಓದಿದ ಬಳಿಕ ಚಂಪಾ ಸರ್ ಅಭಿಪ್ರಾಯವೇ ನನ್ನ ಅಭಿಪ್ರಾಯವೂ ಆಯಿತು ಮತ್ತೆ ಕುತೂಹಲ ಉಳಿಯಲಿಲ್ಲ.

ನಿರಂಜನ, ಚಿತ್ತಾಲ, ಅನುಪಮಾ ನಿರಂಜನ, ತ್ರಿವೇಣಿ, ಲಂಕೇಶ್, ತೇಜಸ್ವಿ, ಅನಂತಮೂರ್ತಿ, ಚಂಪಾರನ್ನ ಓದಿದ್ದೇ ಹೆಚ್ಚು. ಒಮ್ಮೆ ಲಂಕೇಶ್ ಪತ್ರಿಕೆಯಲ್ಲಿ ವೈದೇಹಿ ಕಾರಂತರನ್ನು “ಸಿಂಹ..” ಎಂದೇನೋ ಹೊಗಳಿ ಬರೆದಿದ್ದರು.
ಅದೇ ಸಂಚಿಕೆಯ “ಮರೆಯುವ ಮುನ್ನ”ದಲ್ಲಿ ಲಂಕೇಶ್ ಮೇಷ್ಟರು “ವೈದೇಹಿ ಹೀಗೆ ಬರೆದಿರೋದು ನನಗೆ ಸ್ವಲ್ಪವೂ ಇಷ್ಟವಾಗಲಿಲ್ಲ..” ಎಂದು ಬರೆದುಬಿಡೋದೇ.. “ಮತ್ಯಾಕೆ ಹಾಕಬೇಕಾಗಿತ್ತು ..” ಎಂದು ನಾನು ಬೆಪ್ಪಳಂತೆ ಪ್ರಶ್ನೆ ಕೇಳಿಕೊಂಡಿದ್ದೆ. ಆಮೇಲೆ ಒಮ್ಮೆ ಆ ಪುಟ ಒಮ್ಮೆ ಈ ಪುಟ ಓದಿ ಓದಿ ನಕ್ಕೋ ನಕ್ಕೋ…. ಹೀಗೂ ಉಂಠೇ ಅಂತ ಈಗಿನ ಶೈಲಿಯಲ್ಲಿ ಹೇಳಬಹುದು.

ನಿಮ್ಮ ಲೇಖನ ಓದಿ ಕಾರಂತರ ಬಗ್ಗೆ ಒಂದಿಷ್ಟು ತಿಳಿದುಕೊಂಡಂತಾಯಿತು.
ಥ್ಯಾಂಕ್ಯೂ ಸರ್

Leave a Reply