ಪಿ ಸಾಯಿನಾಥ್ ಗೆ ಬಸವಶ್ರೀ ಪ್ರಶಸ್ತಿ

ಮಾಧ್ಯಮ ಲೋಕದ ಭಿನ್ನ ಪಯಣಿಗ ಪಿ ಸಾಯಿನಾಥ್ ಅವರಿಗೆ ಈ ಸಾಲಿನ ಬಸವಶ್ರೀ ಪ್ರಶಸ್ತಿಯನ್ನು ಘೋಷಿಸಲಾಗಿದೆ.

ಇಂದು ಚಿತ್ರದುರ್ಗದಲ್ಲಿ ಜರುಗಿದ ಪತ್ರಿಕಾಘೋಷ್ಠಿಯಲ್ಲಿ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಪ್ರಶಸ್ತಿಯನ್ನು ಘೋಷಿಸಿದರು.

ಅಕ್ಟೋಬರ್ ೨೩ ಸೋಮವಾರದಂದು ಚಿತ್ರದುರ್ಗದಲ್ಲಿ ಜರುಗುವ ಸಮಾರಂಭದಲ್ಲಿ ಪ್ರಶಸ್ತಿಯನ್ನು ವಿತರಿಸಲಾಗುವುದು.

ಪ್ರಶಸ್ತಿ ಐದು ಲಕ್ಷ ರೂ ನಗದು ಹಾಗೂ ಮತ್ತು ಪ್ರಶಸ್ತಿ ಫಲಕವನ್ನು ಹೊಂದಿದೆ.

ಇವರ Everybody loves a good drought ಕೃತಿ ಜಗತ್ತಿನಾದ್ಯಂತ ಗಮನ ಸೆಳೆದ ಭಾರತದ ಕಡು ಜಿಲ್ಲೆಗಳ ಕಥನ.

‘ಬರ ಅಂದ್ರೆ ಎಲ್ಲರಿಗೂ ಇಷ್ಟ’ ಹೆಸರಿನಲ್ಲಿ ಈ ಕೃತಿ ಕನ್ನಡಕ್ಕೆ ಅನುವಾದಗೊಂಡಿದೆ.

ಪಿ ಸಾಯಿನಾಥ್ ಅವರಿಗೆ ಮ್ಯಾಗ್ಸೆಸೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

1 comment

Leave a Reply