ಅಭಿನಂದನೆಗಳು, ಬಹಳ ಒಳ್ಳೆಯ ಕೃತಿ..

 

 

 

 

ನಳಿನಿ ಮಯ್ಯ 

 

 

 

ಗುರು, 
ಈಗ ತಾನೆ ಓದಿ ಮುಗಿಸಿದೆ ಹಿಜಾಬ್ ಅನ್ನು. ಏನಂತ ಹೇಳಲಿ? ಈ ಕಾದಂಬರಿಯ ಮೂಲಕ ಒಂದು ಹೊಸ ನೆಲೆಯನ್ನು ತಲುಪಿದ್ದೀರಿ ಬರಹಗಾರರಾಗಿ. ಬಹಳ ಒಳ್ಳೆಯ ಕಾದಂಬರಿ.. ಕೆಳಗಿಡಲು ಬಾರದಂತೆ ಓದಿಸಿಕೊಂಡು ಹೋಯಿತು. ಏನೆಲ್ಲ ಪ್ರಶ್ನೆಗಳು, ಜಿಜ್ಞಾಸೆಗಳು ಅದರಲ್ಲಿ- ವಲಸೆಯ ಬಗ್ಗೆ, ಸೋಶಿಯಲ್ ಮೀಡಿಯಾ ಬಗ್ಗೆ, ಧರ್ಮಕ್ಕೆ, ಸಂಸ್ಕೃತಿಗೆ ಹೊರನಾಡಿನಲ್ಲಿ ಕೊಡಬೇಕಾದ ರಿಯಾಯಿತಿ ಬಗ್ಗೆ!!!!

ಕೆಲವು ವಾಕ್ಯಗಳು ಬಿಡದೆ ಮನಸ್ಸಿನಲ್ಲಿ ಉಳಿದುಬಿಡುತ್ತವೆ.
“ಯಾರೂ ಪತ್ರಿಕೆಗಳಲ್ಲಿ ಹೆಡ್ ಲೈನ್ ಓದಲ್ಲ. ನಿನಗೆ ಏನು ಬೇಕೋ ಅದೇ ಹೆಡ್ ಲೈನ್ ಆಗೊ ಕಾಲ ಇದು.” , “ಆಶಾ, ಜಾಕಿಗೆ ಸಿಕ್ಕಿದ ಅಮೆರಿಕಾ ಬೇರೆ ಫಾದುಮಾ, ರುಖೀಯಾ, ನನಗೆ, ರಾಧಿಕಾಗೆ ದಕ್ಕಿದ ಅಮೆರಿಕಾ ಬೇರೆ.” , “ಇದೇನಾ ಅಮೆರಿಕಾ? ಅಥವಾ ನನಗೆ ದಕ್ಕಿದ ಅಮೆರಿಕಾ ಇದಾ? ಹೀಗೆ ಎಲ್ಲರ ಬದುಕನ್ನು ಅಡ್ಡಡ್ಡಲಾಗಿ ಮಾತ್ರ ನೋಡಿದರೆ ನಾನು ನೋಡುವುದು ಸತ್ಯವಾ?” ಮತ್ತೆ ಮತ್ತೆ ಮನಸ್ಸಿನಲ್ಲಿ ಅನುರಣಿಸುತ್ತವೆ.. ಬದಲಾಗುತ್ತಿರುವ ಈ ಜಾಗತಿಕ ಯುಗದ ಹಲವು ಹತ್ತು ಮಗ್ಗಲುಗಳನ್ನು, ಸಮಸ್ಯೆಗಳನ್ನು ಕಥೆಯಾಗಿ ಬಿಡಿಸಿಟ್ಟಿದೆ ಈ ಕಾದಂಬರಿ.

ಕಡೆಯ ದೃಶ್ಯ ತುಂಬ ಇಷ್ಟವಾಯಿತು. ಮಹಮದ್ ಇಗಾಲ್ ಇಡೀ ಪ್ರಪಂಚಕ್ಕೆ ಕೆಟ್ಟವನಾಗಿರಬಹುದು. ಆದರೆ ತಾಯಿಗೆ? ಅದೇ ಹುಟ್ಟಿದ ಮಗುವಿಗೆ ಅದೇ ತಾನೆ ಸತ್ತ ಮಗನ ಹೆಸರಿಟ್ಟು ಕಣ್ಣೀರಿಡುತ್ತಾಳೆ ನುಸ್ರತ್. ಅಕೆ ದ್ವೇಷಿಸುವುದು ಮಗನನ್ನು ಅಡ್ಡ ದಾರಿಗೆಳೆದ ದುಷ್ಟ ಶಕ್ತಿಗಳನ್ನು ಮಾತ್ರ, ಅವನನ್ನಲ್ಲ. ಅಬ್ಬ, ತಾಯಿಯ ಹೃದಯವನ್ನು, ಭಾವನೆಗಳನ್ನು ಎಷ್ಟು ಚೆನ್ನಾಗಿ ಬಿಂಬಿಸುತ್ತದೆ ಆ ಸೀನ್!

ಅಭಿನಂದನೆಗಳು. ಬಹಳ ಒಳ್ಳೆಯ ಕೃತಿ. ತುಂಬ ತೃಪ್ತಿ ಕೊಟ್ಟಿತು ಈ ಓದು.

Leave a Reply