ಇದು ಇನ್ನೊಂದು ಥರಾ ‘ಮಿಡ್ ಸಮ್ಮರ್’

‘ಸೈಡ್ ವಿಂಗ್’ ತಂಡದ ಮಹತ್ವದ ಪ್ರಯೋಗ ಬೆಂಗಳೂರಿನಲ್ಲಿ ಜರುಗಿತು.

ಎಂ ಶೈಲೇಶ್ ಕುಮಾರ್ ಅವರು ರಚಿಸಿ ನಿರ್ದೇಶಿಸಿದ ನಾಟಕ ’ಎ ಮಿಡ್ ಸಮ್ಮರ್ ಡೇ ಡ್ರೀಮ್ಸ್’ ಕಲಾಗ್ರಾಮದಲ್ಲಿ ತನ್ನ ಮೊದಲ ಪ್ರದರ್ಶನ ಕಂಡಿತು.

ಸಾಧನೆಯ ಹಾದಿಯಲ್ಲಿ ಒಬ್ಬ ಹಗಲುಗನಸುಗಳ ಬೇಲಿಯನ್ನು ತಾನೇ ತಂದಿಟ್ಟುಕೊಂಡು, ಅದರೊಳಗೆ ತನಗೆ ಅರಿವಿಲ್ಲದೆಯೇ ಬಂಧಿಯಾಗುವುದನ್ನು ಪ್ರೇಕ್ಷಕರು ಕಂಡರು.. ಕೆಲವರು ವೇದಿಕೆಯಮೇಲೆ ತಮ್ಮ ಮನೆಯನ್ನೇ, ತಮ್ಮನ್ನೇ ಕಂಡಂತಾಯಿತು ಎಂದು ಪ್ರತಿಕ್ರಿಯೆ ನೀಡಿ ಬೆನ್ತಟ್ಟಿ ಹೋದರು.

’ರಂಗನೇಪಥ್ಯ’ ಪತ್ರಿಕೆಯ ಸಂಪಾದಕರಾದ ಗುಡಿಹಳ್ಳಿ ನಾಗರಾಜ್ ಅವರು,  ’ಇಲ್ಲ ಅಂದ್ರೆ ಇದೆ’ಯಂತಹ ಅದ್ಭುತ ನಾಟಕವನ್ನು ನೀಡಿದ್ದ ಶೈಲೇಶ್ ಕುಮಾರ್ ಅವರು, ಈ ನಾಟಕದಲ್ಲೂ ಯಾವುದೇ ಎಳೆದಾಟವಿಲ್ಲದೆ ಜನರಿಗೆ ಹಾಸ್ಯದ ಮೂಲಕ ವಿಷಯಗಳನ್ನು ತಲುಪಿಸುವ ಕೆಲಸವನ್ನು ಯಶಸ್ವಿಯಾಗಿ ಮಾಡಿದ್ದಾರೆ, ಬಹಳ ಸುಂದರವಾದ ನಾಟಕ ಎಂದರು

ನಾಟಕದ ಕೆಲವು ಚಿತ್ರಗಳು ನಿಮಗಾಗಿ-

2 Responses

  1. Thanks So much ಅವಧಿ ಟೀಮ್ and G N Sir…

  2. Mala Shylesh says:

    Thank you GNM Sir and Avadhimag Team..

Leave a Reply

%d bloggers like this: