‘ಈ ಹೊತ್ತಿಗೆ’ ಕಥಾ ಸ್ಪರ್ಧೆ

ಸಾಹಿತ್ಯ ಅಧ್ಯಯನಕ್ಕೊಂದು ಹೊಸರೂಪು ಕೊಟ್ಟ ‘ಈ ಹೊತ್ತಿಗೆ’ಯು ಈಗ ಕನ್ನಡ ಕಥಾ ಸ್ಪರ್ಧೆಗಳನ್ನು ಆಯೋಜಿಸಿದೆ.

೧. ಎಲ್ಲರಿಗಾಗಿ   ೨. ಕಾಲೇಜಿನ ವಿದ್ಯಾರ್ಥಿಗಳಿಗಾಗಿ

ಎರಡೂ ವಿಭಾಗದಲ್ಲಿ

೧. ಮೊದಲನೆಯ ಬಹುಮಾನ : ₹ ೫೦೦೦
೨. ಎರಡನೆಯ ಬಹುಮಾನ  : ₹ ೩೦೦೦
೩. ಮೂರನೆಯ ಬಹುಮಾನ : ₹ ೨೦೦೦

ನಿಯಮಗಳು :

೧. ಸ್ವತಂತ್ರವಾಗಿದ್ದು ಅಪ್ರಕಟಿತ ಕಥೆಯಾಗಿರಬೇಕು. ( ಬ್ಲಾಗ್/ವೆಬ್ ಸೈಟ್/ ಫೇಸ್ ಬುಕ್ ಮುಂತಾದ ಯಾವುದೇ ತಾಣಗಳಲ್ಲಿಯೂ ಪ್ರಕಟವಾಗಿರಬಾರದು)
೨. ಪದಮಿತಿ ಗರಿಷ್ಠ 1600 ಪದಗಳು ಮಾತ್ರ.
೩. ಇ-ಮೇಲ್ ಮುಖಾಂತರ ಕಳುಹಿಸುವವರು ಬರಹ/ನುಡಿ/ಯೂನಿಕೋಡ್ ತಂತ್ರಾಂಶಗಳನ್ನು ಬಳಸಬೇಕು.
೪. ಹಸ್ತಪ್ರತಿ ಕಳುಹಿಸುವವರು ಪುಟದ ಒಂದೇ ಮಗ್ಗುಲಲ್ಲಿ ಸ್ಫುಟವಾಗಿ , ಚಿತ್ತುಗಳಿಲ್ಲದಂತೆ ಬರೆದು ಕಳುಹಿಸಬೇಕು.
೫. ಕಥೆಗಾರರು ಪ್ರತ್ಯೇಕ ಹಾಳೆಯಲ್ಲಿ ತಮ್ಮ ಹೆಸರು, ಸಂಪೂರ್ಣ ವಿಳಾಸ, ಸಂಪರ್ಕ ಸಂಖ್ಯೆಯನ್ನು ಬರೆದಿರಬೇಕು. ಕಥೆಯ ಪುಟಗಳಲ್ಲಿ ಕಥೆಗಾರರ ಹೆಸರು ಇರಕೂಡದು.
೬.  ಒಬ್ಬರೇ ಎರಡೂ ವಿಭಾಗಗಳಲ್ಲಿ ಸ್ಪರ್ಧಿಸುವಂತಿಲ್ಲ.
೭. ವಿದ್ಯಾರ್ಥಿ ವಿಭಾಗಕ್ಕೆ ಕಳುಹಿಸುವವರು ತಮ್ಮ ಕಾಲೇಜಿನ ವ್ಯಾಸಂಗ  ದೃಢೀಕರಣ ಪತ್ರವನ್ನು ಕಥೆಯೊಂದಿಗೆ ಕಳುಹಿಸುವುದು ಕಡ್ಡಾಯ.
೮. 2018ರ ಜನವರಿ ತಿಂಗಳ ಕೊನೆಯ ವಾರದಲ್ಲಿ ವಿಜೇತರ ಹೆಸರುಗಳನ್ನು ಘೋಷಿಸಲಾಗುವುದು.

ನಿಮ್ಮ ಕಥೆ ನಮಗೆ ತಲುಪಲು ಕೊನೆಯ ದಿನಾಂಕ : 15 ಡಿಸೆಂಬರ್ 2017

ವಿಶ್ವದೆಲ್ಲೆಡೆಯಿಂದ ಯಾರೂ ಈ ಕನ್ನಡ ಕಥಾ ಸ್ಪರ್ಧೆಯಲ್ಲಿ ಭಾಗವಹಿಸಬಹುದು.

ಸಾಫ್ಟ್ ಕಾಪಿ ಕಳುಹಿಸುವವರಿಗಾಗಿ ಇ-ಮೇಲ್ ವಿಳಾಸ : ehottige.ks@gmail.com

ಹಸ್ತಪ್ರತಿ ಕಳುಹಿಸುವವರಿಗಾಗಿ ವಿಳಾಸ :
ಈ ಹೊತ್ತಿಗೆ, #65 , ಮುಗುಳ್ನಗೆ, ಮೂರನೆಯ ‘ಎ’ ಅಡ್ಡರಸ್ತೆ ,
ಪಿ.ಎನ್.ಬಿ. ನಗರ, ದೊಡ್ಡ ಕಲ್ಲಸಂದ್ರ, ಕೋಣನ ಕುಂಟೆ
ಬೆಂಗಳೂರು – 560062

ಈ ಹೊತ್ತಿಗೆಯ ತೀರ್ಮಾನವೇ ಅಂತಿಮ.

Leave a Reply