ಕಣ್ಣ ಹನಿಗಳೊಡನೆ..

ಆರ್ ಭರತಾದ್ರಿ 

ಮೈಸೂರು ವೀಳ್ಯದೆಲೆಗೆ ಪ್ರಸಿದ್ಧ.

ಮೈಸೂರಿನ ವೀಳ್ಯದೆಲೆಯ ತಳಿ ನಿಜಕ್ಕೂ ವಿಭಿನ್ನ ಹಾಗೂ ವಿಶಿಷ್ಟ.

ಈ ಎಲೆಗಳನ್ನ ಮೈಸೂರು ಬಳಿಯ ಉದ್ಬೂರು ಹಾಗೂ ಅದರ ಸುತ್ತಮುತ್ತಲಿನ ರೈತರು ಹೇರಳವಾಗಿ ಬೆಳೆಯುತ್ತಾರೆ.

ಸುಮಾರು ಒಂದೂವರೆ ಸಾವಿರ ರೈತರು ತಮ್ಮ ಬದುಕಿಗೆ ಈ ಬೆಳೆಯನ್ನು ಆಶ್ರಯಿಸಿದ್ದಾರೆ. ಹಬ್ಬಹರಿದಿನಗಳಲ್ಲಿ ಹತ್ತುಸಾವಿರ ಎಲೆಗಳಿರುವ ಪಿಂಡಿಗೆ ಎಂಟುಸಾವಿರ ರೂಪಾಯಿ ಬೆಲೆ ಇರುತ್ತದೆ. ಇಲ್ಲದಿದ್ದರೆ ಪಿಂಡಿಗೆ ಎರಡು ಸಾವಿರ ರೂ ಕೂಡ ಸಿಗುವುದಿಲ್ಲ. ಒಂದು ಪಿಂಡಿ ಎಲೆ ಕೊಯ್ಯುವುದಕ್ಕೆ ೧೫೦೦ ರೂ ಕೂಲಿ ಕೊಡಬೇಕು ಎನ್ನುವುದು ರೈತರ ಅಳಲು.

ನಮ್ಮ ವಿಜ್ಞಾನಿಗಳು ಈ ಎಲೆಗಳನ್ನು ಬಳಸಿ ವಾಣಿಜ್ಯ ಉತ್ಪನ್ನಗಳನ್ನ ಉತ್ಪಾದಿಸುವ ಸಂಶೋಧನೆ ಮಾಡದಿದ್ದರೆ ಇನ್ನು ಕೆಲವೇ ವರ್ಷಗಳಲ್ಲಿ ವೀಳ್ಯದೆಲೆ ತೋಟವೂ ಇರುವುದಿಲ್ಲ, ಕಣ್ಣಿಗೆ ಮುದನೀಡುವ ಎಲೆ ಸಂತೆಯೂ ಇರುವುದಿಲ್ಲ. ಬದಲಿಗೆ ಭೂದಾಹಿಗಳ ಕಾಸಿನ ಆಕರ್ಷಣೆಗೆ ಭೂಮಿ ಮಾರಿ ಒಂದು ವಿಶಿಷ್ಟ ಕೃಷಿ ಸಂಸ್ಕೃತಿಯ ಅಂತ್ಯಕ್ಕೆ ರೈತರು ಮುಂದಾಗುತ್ತಾರೆ, ಕಣ್ಣಹನಿಗಳೊಡನೆ.

Leave a Reply