ದಪ್ಪ ಅಂತಾರೆ ಹುಷಾರ್!!

 

 

 

 

ಅಣೇಕಟ್ಟೆ ವಿಶ್ವನಾಥ್

 

 

 

ನಮ್ಮ ದೇಹದ ಬಗ್ಗೆ ಮೊದಲು ಅರ್ಥ ಮಾಡಿಕೊಳ್ಳುವ ಮೊದಲು, ನಿಮ್ಮನ್ನು ಸಣ್ಣಗಾಗಿಸುವ ಉದ್ಯಮವು ಮಾಡುತ್ತಿರುವ ತಪ್ಪುಗಳ ಬಗ್ಗೆ ಅರ್ಥ ಮಾಡಿಕೊಳ್ಳೋಣ. ದಪ್ಪಗಿರುವವರನ್ನು ಸಣ್ಣಗಾಗಿಸಲು ವಿಜ್ಞಾನವು ಅನೇಕ ರೀತಿಯ ಸರ್ಕಸ್ ಮಾಡುತ್ತಿದೆ. ಅದೆಷ್ಟರ ಮಟ್ಟಿಗೆ ಹೋಗಿದೆ ಎಂದರೆ ಹೆಚ್ಚು ಬೊಜ್ಜಿದ್ದರೆ ಅದನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆಯುವ ಮಟ್ಟಿಗೆ ಅತಿರೇಕಕ್ಕೆ ಹೋಗಿದೆ. ಇಂದು ಬಹುಪಾಲು ನಿಸರ್ಗ ಚಿಕಿತ್ಸಾ ಕೇಂದ್ರಗಳು ತೂಕ ಕಳೆಯುವ ಮತ್ತು ಬೊಜ್ಜು ಕರಗಿಸುವ ಕೇಂದ್ರಗಳಾಗಿವೆ. ‘ಡಯಟೀಷಿಯನ್’ಗಳ ಶಿಫಾರಸ್ಸುಗಳು ಕೂಡ ನೈಸರ್ಗಿಕ ಧರ್ಮಕ್ಕೆ ವಿರುದ್ದವಾಗಿ ನಿಮ್ಮನ್ನು ತೆಳ್ಳಗಾಗಿಸುವ ಹುಸಿ ಪ್ರಯತ್ನಗಳಾಗಿವೆ.

ಈ ಮೇಲೆ ತಿಳಿಸಿದ ಡಯಟೀಷಿಯನ್ ಗಳ ಶಿಫಾರಸ್ಸು ಮತ್ತು ನಿಸರ್ಗ ಚಿಕಿತ್ಸಾ ಕೇಂದ್ರಗಳು ನೀಡುವ ಆಹಾರದ ಪಟ್ಟಿಯನ್ನು ನೋಡಿದರೆ ಇದು ಅರ್ಥವಾಗುತ್ತದೆ. ದೇಹಕ್ಕೆ ಅವಶ್ಯಕವಾದ ಆಹಾರವನ್ನು ಪೂರೈಸದೆ ಇರುವುದು ಡಯಟ್ ಎನ್ನುವ ಅರ್ಥ ಬರುತ್ತಿದೆ. ಈ ‘ಡಯಟ್’ ಎಂದು ತಿನ್ನದೆ ಉಳಿಯುವವರನ್ನು ನೋಡಿದರೆ ‘ಅಯ್ಯೋ ಪಾಪ’ ಎಂದೆನಿಸುತ್ತದೆ. ಅದರಲ್ಲಿಯೂ ಯುವಜನರಲ್ಲಿ ಇಂತಹ ಸಮಸ್ಯೆಗಳಿದ್ದರೆ ಬಹಳ ನೋವೆನಿಸುತ್ತದೆ. ಏಕೆಂದರೆ, ಹೆಚ್ಚು ಕ್ಯಾಲೊರಿಗಳ ಅವಶ್ಯಕತೆ ಯುವಜನರಿಗೆ ಇರುತ್ತದೆ. ಅವರಿಗೆ ತಿನ್ನ ಬೇಕೆನಿಸಿದರೂ ತಿನ್ನದಂತೆ ತಡೆಯುತ್ತಾ ಸಣ್ಣಗಾಗುವ ಭ್ರಮೆಯಲ್ಲಿ ದೇಹಕ್ಕೆ ಮತ್ತೊಂದು ನೋವು ಕೊಡುತ್ತಾರೆ.

ನಮ್ಮ ದೇಹದ ಬಗ್ಗೆ ತಿಳಿಯಬೇಕಾದ ಪ್ರಾಥಮಿಕ ಅಂಶವೆಂದರೆ, ನಾವು ತಿಂದ ಆಹಾರವನ್ನು ಅಂತಿಮವಾಗಿ ತಿನ್ನುವವರು ಜೀವಕೋಶಗಳು. ನಮ್ಮ ಹೊಟ್ಟೆಯ ಅಡಿಗೆ ಮನೆಯ ಮೂಲಕ ನಾವು ತಿಂದ ಆಹಾರಗಳು ಮತ್ತೆ ಜೀವಕೋಶಗಳಿಗೆ ಬೇಕಾದ ರೂಪಕ್ಕೆ ಪರಿವರ್ತನೆಯಾಗಿ ರಕ್ತದ ಮೂಲಕ ಜೀವಕೋಶ ತಲುಪುತ್ತವೆ. ಅಲ್ಲಿ ಜೀವಕೋಶಗಳು ಈ ಆಹಾರವನ್ನು ತಿನ್ನುತ್ತವೆ. ಇದು ದೇಹದ ಆಹಾರ ದಾರಿ.

ನಮ್ಮ ಜೀವಕೋಶಗಳು ಕಡಿಮೆ ಆಹಾರ ತಿನ್ನುವಂತೆ ಅವುಗಳ ದೇಹದ ಹಸಿವು ಕಡಿಮೆಯಾಗುತ್ತದೆ. ಅವುಗಳಿಗೆ ಬೇಕೋ ಬೇಡವೊ ನಾವು ಮಾತ್ರ ತಿನ್ನುತ್ತಲೇ ಇರುತ್ತೇವೆ. ಜೀವಕೋಶಗಳ ಜೀರ್ಣ ಶಕ್ತಿ ಕಡಿಮೆಯಾಗುತ್ತಾ ಹೋದಂತೆ ನಾವು ತಿನ್ನುವ ಆಹಾರವು ಜೀವಕೋಶಗಳಿಗೆ ಹೆಚ್ಚಾಗುತ್ತದೆ. ಇದರಿಂದ ದೇಹವು ಹೆಚ್ಚಿನ ಆಹಾರವನ್ನು ನಾವು ಮನೆಗಳಲ್ಲಿ ದಾಸ್ಥಾನು ಮಾಡಿದಂತೆ ದಾಸ್ತಾನು ಮಾಡುತ್ತದೆ. ಇದೇ ನಿಮ್ಮ ಹೆಚ್ಚು ತೂಕ ಮತ್ತು ಕೊಬ್ಬು, ಬೊಜ್ಜು ಇತ್ಯಾದಿ.

ನಾವು ಯೋಜಿಸಿದಂತೆ ‘ಬರಗಾಲದಲ್ಲಿ ಉಪಯೋಗಕ್ಕೆ ಬರಲಿ’ ಎಂದು ಹೀಗೆ ಕೊಬ್ಬು ಅಥವಾ ಹೆಚ್ಚುವರಿ ಆಹಾರವು ಶೇಖರಣೆಗೊಳ್ಳುತ್ತದೆ. ಈ ಕೊಬ್ಬನ್ನು ಅಥವಾ ಬೊಜ್ಜನ್ನು ಕರಗಿಸುವ ಇತ್ತೀಚಿನ ತಂತ್ರಜ್ಞಾನದ ಲೋಪಗಳ ಬಗ್ಗೆ ಚರ್ಚಿಸಬೇಕಾಗಿದೆ

Leave a Reply