ಬಾಲಾ ಬೆಂಬಲಿಸಿ..

ತಮಿಳುನಾಡಿನಲ್ಲಿ ಇತ್ತೀಚಿಗೆ ಜರುಗಿದ ಭೀಕರ ಆತ್ಮಹತ್ಯೆಯನ್ನು ವ್ಯಂಗ್ಯ ಚಿತ್ರದ ಮೂಲಕ ಬಿಚ್ಚಿಟ್ಟ ಬಾಲಾ ಅವರನ್ನು ಬಂಧಿಸಲಾಗಿದೆ. ಈಗ ಬಂದ ಸುದ್ದಿಯಂತೆ ಅವರಿಗೆ ಜಾಮೀನು ಸಿಕ್ಕಿದ್ದು ಬಿಡುಗಡೆಗೊಂಡಿದ್ದಾರೆ.

ಸಾಲಗಾರರ ಕೈಗೆ ಸಿಕ್ಕು ನರಳಿದ ಕುಟುಂಬವೊಂದು ಜಿಲ್ಲಾಧಿಕಾರಿ ಎದುರಿನಲ್ಲಿ ಹಾಡಹಗಲೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿತ್ತು. ಈ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು.

ಸದಾ ದೇಶದ ಆಗುಹೋಗುಗಳಿಗೆ ವ್ಯಂಗ್ಯರೇಖೆಯ ಮೂಲಕ ಕನ್ನಡಿ ಹಿಡಿಯುವ ಬಾಲಾ ಈ ಪ್ರಕರಣದ ಬಗ್ಗೆಯೂ ಬೆಳಕು ಚೆಲ್ಲಿದ್ದರು. ಇದು ಜಿಲ್ಲಾಧಿಕಾರಿ, ಸಚಿವ ಹಾಗೂ ಪೊಲೀಸ್ ಮುಖ್ಯಸ್ಥರ ಮೇಲೆ ಬೊಟ್ಟು ಮಾಡಿದ್ದರಿಂದ ಅಧಿಕಾರ ದುರುಪಯೋಗ ಮಾಡಿಕೊಂಡು ಬಾಲಾ ಅವರನ್ನು ಬಂಧಿಸಲಾಗಿತ್ತು.

ಬಂಧನವನ್ನು ಖಂಡಿಸಿ ತಮಿಳುನಾಡು ಪ್ರೆಸ್ ಕ್ಲಬ್ ತನ್ನ ಕಟ್ಟಡದ ಮೇಲೆ ಅದೇ ಕಾರ್ಟೂನ್ ನ್ನು ದೊಡ್ಡ ಫಲಕವಾಗಿ ಪ್ರದರ್ಶಿಸಿ ಪ್ರತಿಭಟಿಸಿತು.

ನಾಡಿನ ವ್ಯಂಗ್ಯಚಿತ್ರಕಾರರೂ ತಮ್ಮ ವ್ಯಂಗ್ಯಚಿತ್ರಗಳ ಮೂಲಕ ಬಾಲಾ ಗೆ ಬೆಂಬಲ ಸೂಚಿಸಿದರು.

 

Leave a Reply