ಮೈಯೇನೋ ಸುಲಭಕ್ಕೆ ಬೆತ್ತಲಾಗಿಬಿಡುತ್ತದೆ, ಆದರೆ..

ಲಹರಿ ತಂತ್ರಿ 

ಮೈಯೇನೋ ಸುಲಭಕ್ಕೆ ಬೆತ್ತಲಾಗಿಬಿಡುತ್ತದೆ
ಆದರೆ ಈ ಮನಸ್ಸಿನದ್ದೇ ಇಲ್ಲದ ಕಿರಿಕಿರಿ..

ಹೆಚ್ಚೇನೂ ಬೇಡ ದೇಹಕ್ಕೆ!
ದಕ್ಕಿದರೆ ಒಂದಷ್ಟು ಏಕಾಂತ,
ಇಲ್ಲದಿದ್ದರೆ ಸ್ವಲ್ಪ ಕತ್ತಲು,
ಸುತ್ತ ಪರಿಚಿತರಿದ್ದರೆ ಸಣ್ಣದೊಂದು ಪರದೆ; ಇಲ್ಲದಿದ್ದರೂ ನಡೆದುಹೋಗುತ್ತದೆ ಕೆಲವೊಮ್ಮೆ..
ದಿನಕ್ಕೊಂದು ಬಾರಿ ಬಚ್ಚಲಲ್ಲಿ,
ಮನಸ್ಸಿದ್ದರೆ ಹಾಸಿಗೆಯಲ್ಲಿ! ಪ್ರೇಮವೋ, ಕಾಮವೋ ಕಡೆಗೆ ಬಲಾತ್ಕಾರವೋ
ಮತ್ತೆ ಮತ್ತೆ ಬತ್ತಲಾಗುತ್ತಲೇ ಇರುತ್ತದೆ ಮೈ.

ಮನಸ್ಸಿದೆಯಲ್ಲ ಅದು ಹಾಗಲ್ಲ.
ಅದೊಂದು ಶುದ್ಧ ತಪಸ್ಸಿನಂತೆ..
ವರ ಸಿಕ್ಕ ಎಷ್ಟೋ ಹೊತ್ತಿನ ನಂತರವೂ ಇಹದ ಪರಿವೆಯಿರುವುದಿಲ್ಲ!
ಗಾಂಧೀ ಬಜಾರಿನ ಗಲ್ಲಿಯಲ್ಲಿ, ದಾಂಡೇಲಿಯ ಕಾಡಿನಲ್ಲಿ ಅಥವಾ ಮೆಟ್ರೋದ ಕೊನೆಯ ಬಾಗಿಲಿನಲ್ಲಿ.. ಮನಸ್ಸು ಬತ್ತಲಾದಾಗಲೆಲ್ಲಾ ಕಣ್ಣು ತೇವವಾಗುತ್ತದೆ! ಹೃದಯ ಆರ್ದ್ರವಾಗುತ್ತದೆ! ದೇಹ ಕಂಪಿಸುತ್ತದೆ..
ಹಂಗೆಲ್ಲಾ ಸುಖಾಸುಮ್ಮನೆ ಬಯಲಿಗೆ ತೆರೆದುಕೊಳ್ಳುವ ಜಾಯಮಾನದ್ದಲ್ಲ ಅದು.
ಅದಕ್ಕೊಂದು ಸ್ಪರ್ಶ ಬೇಕು, ಆ ಸ್ಪರ್ಶಕ್ಕೆ ಜೇನಿನ ಹಿತವಿರಬೇಕು..
ಅದಕ್ಕೊಂದು ನುಡಿ ಬೇಕು, ಆ ನುಡಿ ಜೀವನವನ್ನೇ ಧಾರೆ ಎರೆದು ಕೊಟ್ಟೇನು ಎಂಬಷ್ಟು ಆಳವಾಗಿರಬೇಕು.

ಹಿಂಗೆಲ್ಲಾ ಸದಾ ಕಿರಿಕಿರಿ ಮಾಡುವ ಮನಸ್ಸಿದೆಯಲ್ಲಾ ಕೆಲವೊಂದು ಬಾರಿ ವಿಚಿತ್ರವಾಗಿಬಿಡುತ್ತದೆ!!
ಯಾವುದೇ ತಲೆಬುಡಗಳಿಲ್ಲದೆ ಭೋರ್ಗರೆದು ಸುರಿಯುವಷ್ಟು ದುಖಃವನ್ನು ದಯಪಾಲಿಸುತ್ತದೆ..
ಸದ್ಯಕ್ಕೆ ಅಂಥದೇ ಒಂದು ದುಃಖ ಕಣ್ಣೆದುರಿಗಿದೆ. ಅದೇ #Metoo

ಏನೇ ಹೇಳಿ;;
ಮೈಯೇನೋ ಸುಲಭಕ್ಕೆ ಬೆತ್ತಲಾಗಿಬಿಡುತ್ತದೆ
ಆದರೆ ಈ ಮನಸ್ಸಿನದ್ದೇ ಇಲ್ಲದ ಕಿರಿಕಿರಿ..

15 Responses

 1. Bhavya says:

  Very Nice

 2. Santoshkumar says:

  Awesome

 3. Hema says:

  Superbh…..

 4. C J Rajeeva says:

  ಮೊದಲರ್ಧದ ಸಾಲುಗಳು ಚೆನ್ನಾಗಿವೆ.
  ದ್ವಿತೀಯಾರ್ಧದ ಸಾಲುಗಳು ಅದಕ್ಕಿಂತಲೂ ಸೊಗಸಾಗಿವೆ…

 5. prathibha nandakumar says:

  good one

 6. Chidambar Nanavate says:

  ಒಂದೊಳ್ಳೆ ಪದ್ಯ….. ಓದಿ ಖುಷಿಯಾಯ್ತು.

 7. Maithri says:

  Awesome ….

 8. ಎಂ.ವಿ. ಮುರಳೀಧರನ್. says:

  ಸತ್ಯವ ಹೇಳುವಲ್ಲಿ ಸಫಲರಾಗಿದ್ದೀರಿ

 9. Konaje Medha says:

  Wow , Nice one !.

 10. kaligananath Gudadur says:

  Much Meaningful

 11. ನಜೀರ್ ಹಾನುಬಾಳು says:

  ತುಂಬಾ ಚೆನ್ನಾಗಿದೆ

 12. Savithasp says:

  ಎಂಥಾ ಅದ್ಭುತ ಭಾವ…ಕಟು ಸತ್ಯ. ಮನದಲಿ ನಿಲ್ಲುವ ಕವನ. ಅನಾವರಣಗೊಳಿಸಿದ್ದಕ್ಕೆ , ಓದಲನುವು ಮಾಡಿಕೊಟ್ಟ ದ್ದಕ್ಕೆ ಧನ್ಯವಾದಗಳು

 13. No name says:

  Is there so much of disconnect between the mind and the body?

 14. Jayadev Mohan says:

  ಚೆಂದ ಕವಿತೆ ❤

 15. Madhu Biradar. says:

  ಬಹಳ ದಿನದ ನಂತರ ಒಂದು ಒಳ್ಳೆಯ ಕವಿತೆ ಓದಿದ ಖುಷಿ…

Leave a Reply

%d bloggers like this: